ಸದಾಶಿವ ವರದಿ ತಿರಸ್ಕರಿಸಲು ಒತ್ತಾಯ

ಗುರುವಾರ , ಜೂಲೈ 18, 2019
22 °C

ಸದಾಶಿವ ವರದಿ ತಿರಸ್ಕರಿಸಲು ಒತ್ತಾಯ

Published:
Updated:

ದಾವಣಗೆರೆ: ಒಳ ಮೀಸಲಾತಿ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿಯು ಅವೈಜ್ಞಾನಿಕವಾಗಿದ್ದು, ಅದನ್ನು ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಬಿಡಬಾರದು ಎಂದು  ಭೋವಿ ಸಮಾಜ ಒತ್ತಾಯಿಸಿದೆ. ನಗರದಲ್ಲಿ ಸೋಮವಾರ ನಡೆದ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಸಂಸ್ಮರಣ ದಶಮಾನೋತ್ಸವ ಹಾಗೂ ಭೋವಿ ಸಮಾಜದ ಬೃಹತ್ ಸಮಾವೇಶದಲ್ಲಿ ರಾಜ್ಯದ ಸಚಿವರು ಹಾಗೂ ಸಂಸತ್ ಸದಸ್ಯರು ಈ ಒಕ್ಕೊರಲಿನ ಅಭಿಪ್ರಾಯ ಮಂಡಿಸಿದರು.ವಿಷಯ ಪ್ರಸ್ತಾಪಿಸಿದ ಸಚಿವ ಶಿವರಾಜ್ ತಂಗಡಗಿ ಅವರು, ಆಯೋಗದ ವರದಿಯಂತೆ ನಮ್ಮ ಸಮಾಜವನ್ನು ವ್ಯವಸ್ಥಿತವಾಗಿ ಮುಗಿಸಲು ಸಂಚು ನಡೆಯುತ್ತಿದೆ. ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡದಂತೆ ತಡೆಯುವ ಜವಾಬ್ದಾರಿ ಸಚಿವರಾದ ಅರವಿಂದ್ ಲಿಂಬಾವಳಿ ಹಾಗೂ ಸುನಿಲ್ ವಲ್ಯಾಪುರ್ ಅವರ ಮೇಲಿದೆ. ಇಲ್ಲವಾದಲ್ಲಿ ಸಮುದಾಯದವರು ಒಟ್ಟಾಗಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಅವರ ಮಾತಿಗೆ ಧ್ವನಿಗೂಡಿಸಿದ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ, ಆಯೋಗದ ವರದಿ ಮೇಲೆ ಒಳಮೀಸಲಾತಿ ಕೊಡುವುದು ಅವೈಜ್ಞಾನಿಕ. ಈ ಬಗ್ಗೆ  ಸಮುದಾಯದವರು ಒಗ್ಗಟ್ಟಿನಿಂದ ಹೋರಾಡೋಣ. ಆದರೆ, ಸಮಾಜ ಇನ್ನಷ್ಟು ಒಗ್ಗಟ್ಟಾಗಬೇಕಿದೆ. ಈ ಹಿಂದೆ ತಾವು ಸಚಿವ ಸ್ಥಾನ ಕಳೆದುಕೊಂಡಾಗ ಸಮಾಜ ಬಾಂಧವರು ಸ್ವಾಭಿಮಾನಕ್ಕಾಗಿಯಾದರೂ ಒಗ್ಗಟ್ಟಾಗಬೇಕಿತ್ತು ಎಂದು ಸ್ಮರಿಸಿದರು.ಸಚಿವ ಸುನಿಲ್ ವಲ್ಯಾಪುರೆ ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿ, ಈ ಹಿಂದೆ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿತ್ತು.  ಆಯೋಗದ ವರದಿ ಪ್ರಕಾರ ಸ್ಪಶ್ಯ ಜಾತಿಗೆ ಸೇರಿಸಲಾಗಿದೆ. ತಾವು ಈ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಸಮುದಾಯಕ್ಕೆ ಯಾವುದೇ ಅನ್ಯಾಯ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.ಸಂಸತ್ ಸದಸ್ಯ ಜನಾರ್ದನ ಸ್ವಾಮಿ ಮಾತನಾಡಿ, ಆಯೋಗದ ವರದಿ ಶಿಫಾರಸು ಆಗದಂತೆ ನೋಡಿಕೊಳ್ಳುವುದು ತಮ್ಮ ಸಮುದಾಯದ ಶಾಸಕರ ಜವಾಬ್ದಾರಿ. ಅದಕ್ಕೆ ಅವರು ರಾಜ್ಯಮಟ್ಟದಲ್ಲಿಯೇ ಚರ್ಚಿಸಬೇಕು.  ತಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು.`ಪೂಜೆ ಹಣದಲ್ಲಿ 3 ಸಾವಿರ ಕೆರೆಗಳ ಅಭಿವೃದ್ಧಿ ಸಾಧ್ಯ~

ಸರ್ಕಾರ ಮಳೆಗಾಗಿ ಪ್ರಾರ್ಥಿಸಿ ರೂ 17 ಕೋಟಿ ವಿನಿಯೋಗಿಸಲು ಹೊರಟಿದೆ. ಆ ಮೊತ್ತದಲ್ಲಿ ರಾಜ್ಯದ 3,000 ಕೆರೆಗಳನ್ನು ಅಭಿವೃದ್ಧಿ ಮಾಡಬಹುದು. ಅದರಿಂದ ಸಾಕಷ್ಟು ನೀರು ಸಂಗ್ರಹವಾಗಿ ಕೆಲಕಾಲ ಮಳೆ ಬಾರದಿದ್ದರೂ ನೀರು ನಿರ್ವಹಿಸಬಹುದು. ಪೂಜೆಗೂ ಮಳೆಗೂ ಸಂಬಂಧವಿಲ್ಲ ಎಂದು ಸಾಣೇಹಳ್ಳಿ ಶಾಖಾಮಠದ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry