ಸದೃಢ ಆರೋಗ್ಯಕ್ಕೆ ಕ್ರೀಡೆ ಅಗತ್ಯ

7

ಸದೃಢ ಆರೋಗ್ಯಕ್ಕೆ ಕ್ರೀಡೆ ಅಗತ್ಯ

Published:
Updated:

ಕೊಳ್ಳೇಗಾಲ: `ಸ್ನೇಹ ಮತ್ತು ದೇಹದ ಸ್ವಾಸ್ಥ್ಯಕ್ಕೆ ಕ್ರೀಡೆ ಅಗತ್ಯ~ ಎಂದು ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಜಿ. ಮಹಾದೇವ ತಿಳಿಸಿದರು.ಪಟ್ಟಣದ ಎಂ.ಜಿ.ಎಸ್.ವಿ. ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣ ದಲ್ಲಿ ಮಂಗಳವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯ ಅಂತರ ವಲಯ ಅಂತರ ಕಾಲೇಜು ಪುರುಷರ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿ ದರು. ಕ್ರೀಡಾಪಟುಗಳನ್ನು ಪ್ರೀತಿ ಯಿಂದ ಪರಸ್ಪರ ಸ್ನೇಹಮಯ ವಾತಾವರಣ ದಲ್ಲಿ ಉತ್ತಮ ಗುರಿ ಯನ್ನು ಹೊಂದಿ ಉತ್ತಮ ಪ್ರದರ್ಶನ ನೀಡುವ ಯತ್ನ ಮಾಡಬೇಕು ಎಂದರು.ಚಾಮರಾಜನಗರ ಮತ್ತು ಕೊಳ್ಳೇಗಾಲ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಚಾಮರಾಜನಗರ ತಂಡ ಕೊಳ್ಳೇಗಾಲ ತಂಡದ ವಿರುದ್ಧ 16 ರನ್‌ಗಳ ಜಯಗಳಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry