ಸದೃಢ ಮಗುವಿನಿಂದ ಸುಭದ್ರ ಭಾರತ

ಭಾನುವಾರ, ಜೂಲೈ 21, 2019
26 °C

ಸದೃಢ ಮಗುವಿನಿಂದ ಸುಭದ್ರ ಭಾರತ

Published:
Updated:

ಬೆಳಗಾವಿ: “ಚಿಕ್ಕ ಸಂಸಾರದ ಸದೃಢ ಮಗು ಸುಭದ್ರ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ” ಎಂದು ಬೆಳಗಾವಿ ಉತ್ತರ ಶಾಸಕ ಫಿರೋಜ್ ಶೇಠ್ ಹೇಳಿದ್ದಾರೆ.ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿದ ಅವರು, `ಅತಿ ಹೆಚ್ಚು ಮಕ್ಕಳು ಇರುವುದರಿಂದ ಕುಟುಂಬದ ಪಾಲಕರ ಮೇಲೆ ಹೆಚ್ಚಿನ ಒತ್ತಡ ಆಗುವುದರ ಜೊತೆಗೆ ಜನಸಂಖ್ಯಾ ಬೆಳವಣಿಗೆಯು ದೇಶಕ್ಕೂ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಚಿಕ್ಕ ಕುಟುಂಬ ಹೊಂದಿ ಯೋಜನಾ ಬದ್ಧತೆಯೊಂದಿಗೆ ಜೀವನ ಸಾಗಿಸಬೇಕು. ಹೆಚ್ಚು ಮಕ್ಕಳನ್ನು ಪಡೆಯದೇ ಒಂದೇ ಮಗುವನ್ನು ಪಡೆದು ಅದರ ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಅಭಿಪ್ರಾಯಪಟ್ಟರು.ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಡಾ. ಎಸ್.ಬಿ. ಕುಲಕರ್ಣಿ, ಭಾರತದಲ್ಲಿಂದು ಆರೋಗ್ಯ ವಂತ ತಾಯಂದಿರು ಆರೋಗ್ಯವಂತ ಮಗುವನ್ನು ಪಡೆಯುವ ಅವಶ್ಯಕತೆ ಯಿದೆ. ಈ ಹಿನ್ನೆಲೆಯಲ್ಲಿ ಚಿಕ್ಕ ಸಂಸಾರ ಅತ್ಯಾವಶ್ಯಕವಾಗಿದೆ ಎಂದು ಹೇಳಿದರು.ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸರೋಜಾ ತಿಗಡಿ ಮಾತನಾಡಿ ದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಾ ಯಾದವಾಡ, ಜಿ.ಪಂ. ಮಲ್ಲೇಶ ಯಾದವಾಡ, ಬಿಮ್ಸನ ಪ್ರಭಾರ ನಿರ್ದೇಶಕ ಡಾ. ಬಸವರಾಜ, ಬೆಳಗಾವಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ರಾಜಶೇಖರ ಹಿರೇಮಠ, ಬಿಮ್ಸನ ವೈದ್ಯಕೀಯ ವಿಭಾಗದ ಮುಖ್ಯಸ್ಥ ಎಸ್. ಟಿ. ಕಳಸದ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಶೈಲಜಾ ತಮ್ಮನ್ನವರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಎಸ್.ಎಸ್. ಮತ್ತಿವಾಡೆ ಹಾಜರಿದ್ದರು.ಚಿಕ್ಕೋಡಿ ಹೆಚ್ಚುವರಿ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಬಿ. ಕುಲಕರ್ಣಿ ಸ್ವಾಗತಿಸಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಬಸವರಾಜ ಪಟ್ಟೇದ ನಿರೂಪಿಸಿದರು.ಜಾಗೃತಿ ಜಾಥಾ: ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭಗೊಂಡ ಜನಸಂಖ್ಯಾ ನಿಯಂ ತ್ರಣ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಅವರು ಚಾಲನೆ ನೀಡಿದರು. ಈ ಸಮಯದಲ್ಲಿ ಮಾತನಾ ಡಿದ ಅವರು, ಚಿಕ್ಕ ಸಂಸಾರವು ಕುಟುಂ ಬದ ಹಾಗೂ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.ಜಿ.ಪಂ. ಮುಖ್ಯ ಸಿಇಒ ವಿ. ಶಂಕರ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್.ಯು. ಜಮಾದಾರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸರೋಜಾ ತಿಗಡಿ, ಹೆಚ್ಚುವರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಬಿ. ಕುಲಕರ್ಣಿ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಎಸ್.ಎಸ್. ಮತ್ತಿವಾಡೆ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಇಂದಿರಾ ಕಬಾಡೆ, ಜಿಲ್ಲಾ ಯೋಜನಾ ನಿರ್ವಹಣಾ ಅಧಿಕಾರಿ ಡಾ. ಶಿವಾನಂದ ಮಾಸ್ತಿಹೊಡಿ, ಜೆ.ಎನ್.ಎಂ.ಸಿ.ಯ ಡಾ. ಶೈಲೇಶ ಉದುಪುಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಜಶೇಖರ ಹಿರೇಮಠ, ಐ.ಆರ್.ಸಿ.ಎಸ್. ಗೌರವ ಕಾರ್ಯದರ್ಶಿ ಬಸವರಾಜ ಪಟ್ಟೇದ ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry