ಸದೋದಿತ ಪ್ರಶಸ್ತಿ ಪ್ರಕಟ

7

ಸದೋದಿತ ಪ್ರಶಸ್ತಿ ಪ್ರಕಟ

Published:
Updated:

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರುಗಳಾದ ಪ್ರೊ.ಆರ್.ಇಂದಿರಾ ಮತ್ತು ಪ್ರೊ.ಪದ್ಮಶೇಖರ್ ಶಾಶ್ವತಿ ಸಂಸ್ಥೆ ಪ್ರದಾನ ಮಾಡುವ ಈ ಸಾಲಿನ ‘ಸದೋದಿತ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಮಾಜಶಾಸ್ತ್ರ ಪ್ರಾಧ್ಯಾಪಕರೂ ಮತ್ತು ಅಂತರರಾಷ್ಟ್ರೀಯ ಕೇಂದ್ರದ ನಿರ್ದೇಶಕರಾಗಿ ಪ್ರೊ. ಆರ್.ಇಂದಿರಾ ಹಾಗೂ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಪ್ರೊ. ಪದ್ಮಶೇಖರ್ ಕಾರ್ಯ ನಿರ್ವಹಿಸುತ್ತಿದ್ದಾರೆ.ಬೆಂಗಳೂರಿನ ಎನ್.ಎಂ.ಕೆ.ಆರ್.ವಿ.ಕಾಲೇಜಿನಲ್ಲಿ ಖ್ಯಾತ ಶಿಕ್ಷಣ ತಜ್ಞೆ ಹಾಗೂ ಸ್ತ್ರೀವಾದಿ ಚಿಂತಕರೂ ಆಗಿದ್ದ ದಿ.ಪ್ರೊ.ಚಿ.ನ.ಮಂಗಳ ಅವರು ಶಾಶ್ವತಿ ಸಂಸ್ಥೆಯನ್ನು ಸ್ಥಾಪಿಸಿದರು. ಸಾಹಿತ್ಯ, ಸಂಶೋಧನೆ ಮತ್ತು ಸಮಾಜಕಾರ್ಯ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದ ಮಹಿಳೆಯರಿಗೆ ಸಂಸ್ಥೆ ವತಿಯಿಂದ ಸದೋದಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ಪ್ರಶಸ್ತಿ ಪತ್ರದೊಡನೆ ರೂ. 20 ಸಾವಿರ ನಗದು ಬಹುಮಾನ ಒಳಗೊಂಡಿದ್ದು, ಪ್ರಶಸ್ತಿ ಪ್ರದಾನ ಜ.28ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry