ಸದ್ದಿಲ್ಲದೆ ಗಣಿಗಾರಿಕೆ ಆರಂಭ: ರೈತರ ಆತಂಕ

7
ಕಪ್ಪತಗಿರಿಯಲ್ಲಿ ಬಲ್ಡೋಟಾ ಕಂಪೆನಿ

ಸದ್ದಿಲ್ಲದೆ ಗಣಿಗಾರಿಕೆ ಆರಂಭ: ರೈತರ ಆತಂಕ

Published:
Updated:

ಶಿರಹಟ್ಟಿ: ಖನಿಜಗಳ ಸಂಪನ್ಮೂಲ, ಬಂಗಾರದ ತಟ್ಟೆ ಎಂದು ಕರೆಯಲ್ಪಡುವ ಕಪ್ಪತ್ತಗುಡ್ಡಕ್ಕೆ ಕೊನೆಗೂ ಸಂಚಕಾರ ಬಂದೊದಗಿದೆ. ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ನಲುಗಿ ಕಳೆದ ಮೂರು ದಶಕಗಳಿಂದ ಬರಿಮೈ ಆಗುತ್ತಿ ರುವ ಹಾಗೂ ತಮಗಿಷ್ಟ ಬಂದಂತೆ ಗುಡ್ಡವನ್ನು ಹೆಕ್ಕಿ ತಗೆಯುತ್ತಿರುವ ಕಂಪೆನಿಗಳು ಈಗಾಗಲೇ ಗಿರಿಯನ್ನು ಬರಿದುಗೊಳಿಸಿವೆ.ಹೊಸಪೇಟೆ ಮೂಲದ ಬಲ್ಡೋಟಾ  ಕಂಪೆನಿ ಜಲ್ಲಿಗೇರಿ ಸುತ್ತಮುತ್ತಲಿನ ರೈತರ ಭೂಮಿ ಯನ್ನು ಈಗಾಗಲೇ ಒಪ್ಪಂದದ ಪ್ರಕಾರ ಪಡೆದುಕೊಂಡಿದ್ದು, ಕಪ್ಪತ್ತಗುಡ್ಡ ಸುತ್ತ ಮುತ್ತಲಿನಲ್ಲಿ ಕಂಪೆನಿಯವರಿಗೆ ಗಣಿಗಾರಿಕೆ ನಡೆಸಲು ನಡೆಸಲು ಮುಕ್ತ ಅವಕಾಶ ಸಿಕ್ಕಂತಾಗಿದೆ.ಗದಗ ತಾಲ್ಲೂಕಿನ ಹತ್ತಿಕಟ್ಟಿ ಗ್ರಾಮದಲ್ಲಿ ತನ್ನ ಚಟುವಟಿಕೆಗಳ ಮೂಲಸ್ಥಾನವನ್ನಾಗಿರಿಸಿ ಕಾರ್ಯ ನಿರ್ವಹಿಸುತ್ತಿದ್ದು, ತನಗೆ ಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಸಿದ್ಧಪಡಿಸಿ ಕೊಂಡು ಗಣಿಗಾರಿಕೆ ಕಾರ್ಯಾ ಚರಣೆಗೆ ಸನ್ನದ್ಧವಾಗಿದೆ.ಈಗಾಗಲೇ ಗಾಳಿಗುಂಡಿ ಬಸಪ್ಪ ದೇವಸ್ಥಾನದ ಹತ್ತಿರ ಈ ಹಿಂದೆ ಗಣಿಗಾರಿಕೆ ನಡೆಸಿದ ಕಂಪೆನಿಗಳು ಸಂಪತ್ತು ಲೂಟಿ ಮಾಡಿದ ಘಟನೆ ಪರಿಸರ ಪ್ರಿಯರ ಕಣ್ಣನ್ನು ಕೆಂಪಾ ಗಿಸಿತ್ತು. ಇದೀಗ ಬಲ್ಡೋಟಾ ಸಹ ಅದೇ ಹಾದಿ ಯಲ್ಲಿ ಮುಂದುವರಿ ಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಸುತ್ತಮುತ್ತಲಿನ ಗ್ರಾಮಸ್ಥರ ಆರೋಪವಾಗಿದೆ.ಒಂದು ಎಕರೆ ಭೂಮಿಗೆ 1 ಲಕ್ಷ 25 ಸಾವಿರಷದಂತೆ ರೈತರ ಫಲವತ್ತಾದ ಜಮೀನನ್ನು ಒಪ್ಪಂದ ಮಾಡಿಕೊಂಡಿದ್ದು, ಆಸೆ ಆಮಿಷಗಳ ಮೂಲಕ ರೈತರ ಭೂಮಿಗಳಿಗೆ ದರ ನಿಗದಿಪಡಿಸಿ ಕರಾರು ಪತ್ರವನ್ನು ಮಾಡಿದ್ದು, ಕಳೆದ ಐದು ವರ್ಷಗಳ ಹಿಂದೆ ಇಂತಹ ಪ್ರಕ್ರಿಯೆಗಳು ನಡೆದಿವೆ.ಇದೀಗ ಅತ್ತಿಕಟ್ಟೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪನೆಯಾಗಿದ್ದು, ಗಣಿಗಾರಿಕೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಜಲ್ಲಿಗೇರಿ, ಕಡಕೋಳ ಸೇರಿದಂತೆ ಅನೇಕ ಗ್ರಾಮಗಳ ಗ್ರಾಮಸ್ಥರು ಆಕ್ರೊಶ ವ್ಯಕ್ತಪಡಿಸಿದ್ದಾರೆ.  ಕಂಪೆನಿ ರೈತರ ಒಂದು ಎಕರೆ ಜಮೀನಿಗೆ  ಒಂದು ಲಕ್ಷ ಅಲ್ಲ, ಒಂದು ಕೋಟಿ ಕೊಟ್ಟರೂ ಭೂಮಿ ನೀಡುವುದಿಲ್ಲ ಎಂದು ಈ ಭಾಗದ ರೈತರ ಒಕ್ಕೊರಲಿನ ದನಿಯಾಗಿದೆ.ಸುಮಾರು 22 ಹಳ್ಳಿಗಳನ್ನು ಆವರಿಸಿರುವ ಕಪ್ಪತ್ತಗುಡ್ಡದಿಂದ ಜಾನುವಾರುಗಳಿಗೆ ಕುಡಿ ಯುವ ನೀರು ಹಾಗೂ ಮೇವು ಹೇರಳವಾಗಿ ಸಿಗುತ್ತಿದೆ. ಗಿಡಮೂಲಿಕೆಗಳು ಸಹ ಇಲ್ಲಿ ಸಾಕಷ್ಟು ಬೆಳದಿದ್ದು, ಈದೀಗ ಎಲ್ಲಕ್ಕೂ ಸಂಚಾಕಾರ ಬಂದಿದೆ.ಕಂಪೆನಿಯ ನಿಕ್ಷೇಪಗಳಿಗೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಪ್ರದೇಶವನ್ನು ನೀಡಿದ್ದು, ನಿಕ್ಷೇಪವನ್ನು ತಗೆದು ಹತ್ತಿಕಟ್ಟಿಯಲ್ಲಿರುವ ಸಂಗ್ರಹಣಾ ಹಾಗೂ ಸಂಸ್ಕರಣಾ ಘಟಕಕ್ಕೆ ಸಾಗಾಣೆ ಮಾಡಲಿದೆ. ಇದರಿಂದ ಪರಿಸರಕ್ಕೆ ಧಕ್ಕೆಯಾಗುವ ಸಾಧ್ಯತೆಗಳು ಇಲ್ಲ ಎನ್ನುವ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲನೆ ಮಾಡುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ.ಇದರ ನಡುವೆಯೇ  ಸಂಶಯಗಳಿಗೆ ಎಡೆ ಮಾಡಿ ಕೊಡುವ ರೀತಿಯಲ್ಲಿ ಅಧಿಕಾರಿಗಳು ವರ್ತಿ ಸುತ್ತಿರುವುದು  ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಸಹಾಯಕರಾಗಿ ಎದುರು ನೋಡುವಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry