ಸದ್ಬಳಕೆಯಾಗದ ಅನುದಾನ; ಬಿಜೆಪಿ ಧರಣಿ

7

ಸದ್ಬಳಕೆಯಾಗದ ಅನುದಾನ; ಬಿಜೆಪಿ ಧರಣಿ

Published:
Updated:

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದಿಂದ ಬಂದ ಅನುದಾನವನ್ನು ಕೃಷಿ ಇಲಾಖೆಯು ಸದ್ಬಳಕೆ ಮಾಡಿಕೊಂಡಿಲ್ಲ ಎಂದು ಆರೋಪಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ನಗರದ ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಅವರು, `ಕೃಷಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದಲೇ ಅನುದಾನ ಸದ್ಬಳಕೆಯಾಗಿಲ್ಲ. ಯೋಜನೆ ಸಮರ್ಪಕವಾಗಿ ಜಾರಿಯಾಗದೆ ಅನುದಾನ ಸರ್ಕಾರಕ್ಕೆ ವಾಪಸಾಗಿದೆ~ ಎಂದು ಆರೋಪಿಸಿದರು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, `ಸುವರ್ಣ ಭೂಮಿ ಯೋಜನೆಯು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ವಿವಿಧ ಯೋಜನೆಗಳಡಿ ರೈತರಿಗೆ ಸಕಾಲಕ್ಕೆ ಸಬ್ಸಿಡಿಯೂ ಸಿಕ್ಕಿಲ್ಲ. ಸುಮಾರು ರೂ. 80 ಲಕ್ಷ ಅನುದಾನವು ಕೃಷಿ ಇಲಾಖೆಗೆ ಬಾರದೆ ಸರ್ಕಾರಕ್ಕೆ ವಾಪಸಾಗಿದೆ. ಇದಕ್ಕೆ ಕೃಷಿ ಇಲಾಖೆ ಅಧಿಕಾರಿಗಳೇ ನೇರ ಹೊಣೆ~ ಎಂದು ದೂರಿದರು.`ಬಿಜೆಪಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ರೈತರ ಹಿತ ಕಾಯುತ್ತಿದೆ. ಸರ್ಕಾರದೊಂದಿಗೆ ಕೃಷಿ ಇಲಾಖೆ ಕೈಜೋಡಿಸಿದರೆ, ರೈತರ ಸಮಸ್ಯೆಗಳನ್ನು ಬಹುತೇಕ ಬಗೆಹರಿಸಬಹುದು~ ಎಂದರು.ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿಪತ್ರ ಸ್ವೀಕರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ವೆಂಕಟರಾಮ,  `ಅನುದಾನಸದ್ಬಳಕೆಗೆ ಪ್ರಯತ್ನಿಸಲಾಗುವುದು~ ಎಂದರು.ಬಿಜೆಪಿ ಮುಖಂಡರಾದ ಲಕ್ಷ್ಮಿನಾರಾಯಣ ಗುಪ್ತಾ, ನಂದಿ ಸುರೇಶ್, ಎ.ವಿ.ಬೈರೇಗೌಡ, ಪ್ರೇಮಲೀಲಾ ವೆಂಕಟೇಶ್, ಸುಜಾತಾ ಭೂಷಣ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry