ಭಾನುವಾರ, ಆಗಸ್ಟ್ 25, 2019
27 °C

ಸದ್ಯದಲ್ಲೇ `ನನ್ ಲೈಫ್‌ನಲ್ಲಿ'

Published:
Updated:

ರಾಮ್‌ದೀಪ್ ಕಥೆ, ನಿರ್ದೇಶನವಿರುವ `ನನ್ ಲೈಫ್‌ನಲ್ಲಿ' ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು, ಶೀಘ್ರವೇ ತೆರೆಕಾಣಲಿದೆ. ಈ ಚಿತ್ರಕ್ಕೆ ಮನೋಜ್ ಗಲಗಲಿ ಸಂಭಾಷಣೆ ಬರೆದಿದ್ದಾರೆ.ಮನೋಹರ್ ಜೋಶಿ ಛಾಯಾಗ್ರಹಣ, ಅವನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸಂತೋಷ್ ರಾಧಾಕೃಷ್ಣ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ವಿದ್ಯಾಸಾಗರ್ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಚಿತ್ರಕ್ಕಿದೆ.ತಾರಾಬಳಗದಲ್ಲಿ ಅನೀಶ್, ಸಿಂಧು ಲೋಕನಾಥ್, ದಿಲೀಪ್ ರಾಜ್, ಮಿತ್ರ, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ರಮೇಶ್ ಅರವಿಂದ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

`ಪೋರ'ನಿಗೆ ಹಾಡು

ಡಾ. ಶೈಲೇಂದ್ರ ಬೆಳದಾಳೆ, ದೇವರಾಜ್ ಶಿಡ್ಲಘಟ್ಟ ನಿರ್ಮಿಸುತ್ತಿರುವ `ಪೋರ' ಚಿತ್ರಕ್ಕೆ  `ಒಂದು ಖಾಲಿ ಖಾಲಿ ಹೃದಯ ಎಲ್ಲಾದರೂ ಸಿಗಲಿದೆಯಾ...' ಎಂಬ ಹಾಡನ್ನು ಇನ್ನೋವೇಟಿವ್ ಫಿಲಂ ಸಿಟಿ ಹಾಗೂ ಮೈಸೂರು ರೋಡಿನ `ದಿ ಕ್ಲಬ್'ನಲ್ಲಿ ರಾಮು ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.ಅಮೋಘ್ ಕಥೆ, ಚಿತ್ರಕಥೆ, ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಿರಂಜನ ಬಾಬು ಛಾಯಾಗ್ರಹಣ, ಕೆ.ಎಂ. ಇಂದ್ರ ಸಂಭಾಷಣೆ ಮತ್ತು ಸಂಗೀತ, ರವಿವರ್ಮಾ ಸಾಹಸ, ಇಸ್ಮಾಯಿಲ್ ಕಲಾ ನಿರ್ದೇಶನ, ಮಾಡಿದ್ದಾರೆ. ಅಮೋಘ್, ವ್ಯಾಲರಿ, ಗಿರೀಶ್ ಕರ್ನಾಡ್, ಸುಧಾರಾಣಿ, ಸುಮಿತ್ರ, ರಾಜು ತಾಳಿಕೋಟೆ, ತಬಲಾ ನಾಣಿ, ಮಲ್ಲೇಶ್ ತಾರಾಗಣದಲ್ಲಿದ್ದಾರೆ.

Post Comments (+)