ಭಾನುವಾರ, ಜನವರಿ 19, 2020
23 °C

ಸನ್ಮಾನ ಬೇಕು, ಉಪನ್ಯಾಸ ಬೇಡ!

–ತ್ರಿವೇಣಿ,ಬೆಂಗಳೂರು. Updated:

ಅಕ್ಷರ ಗಾತ್ರ : | |

‘ಆಳ್ವಾಸ್ ನುಡಿಸಿರಿ’ಯಲ್ಲಿ ಸನ್ಮಾನ ಸ್ವೀಕರಿ­ಸಿದ ಬಂಡಾಯ ಲೇಖಕ ಬರಗೂರು ರಾಮ­ಚಂದ್ರಪ್ಪ ಅವರು ‘ಸಮಾಜ’ ಎಂಬ ವಿಷ­ಯದ ಬಗ್ಗೆ ಉಪನ್ಯಾಸ ಮಾಡದಿರುವುದಕ್ಕೆ ಕೊಟ್ಟಿರುವ ಕಾರಣ, ‘ಈ ವರ್ಷದ ಕಾರ್ಯಕ್ರ­ಮದಲ್ಲಿ ಜನ­ಪರ ವಿಚಾರಗಳಿಗೆ ಯಾವುದೇ ಅವ­ಕಾಶವಿಲ್ಲ’ ಎನ್ನುವುದು.

‘ಉದ್ಘಾಟನೆಯ ಸಂದ­ರ್ಭ­ದಲ್ಲಿ ಅಧ್ಯಕ್ಷರ ಪರವಾಗಿ ಮಾತನಾ­ಡುವ ಅವ­­ಕಾಶ ನೀಡಿದ್ದರೆ ನನ್ನ ವಿಚಾರಗಳನ್ನು ಅಲ್ಲಿಯೇ ಸ್ಪಷ್ಟ­ಪ­ಡಿ­ಸುವ ಉದ್ದೇಶ ನನಗೆ ಇತ್ತು’ ಎಂದಿದ್ದಾರೆ. ಅವರು ಆಗ ಆಡಬಹುದಾಗಿದ್ದ ಮಾತು­­­ಗಳನ್ನು  ‘ಸಮಾಜ’ ಕುರಿತ ಉಪನ್ಯಾಸದ ಸಂದ­ರ್ಭದ­ಲ್ಲಿಯೇ ಹೇಳಬಹುದಿತ್ತಲ್ಲ? ಗೌರವ ಸ್ವೀಕಾ­ರಕ್ಕೆ ಬರದ ಮೈಲಿಗೆ ಉಪನ್ಯಾಸಕ್ಕೆ ಬಂದುಬಿಟ್ಟಿತೇ?ಸಾಹಿತ್ಯ ಸಮಾರಂಭಗಳಿಗೆ ರಾಜಕಾರಣಿಗಳು ಗೈರುಹಾಜರಾಗಿದ್ದನ್ನು ಕುರಿತು ತಮ್ಮ ಎಂದಿನ ವ್ಯಂಗ್ಯದಲ್ಲಿ  ‘ಸಾಹಿತ್ಯ ವೇದಿಕೆಗೆ ಬಂದು, ವೇದಿಕೆ­ಯನ್ನು ಮೈಲಿಗೆ ಮಾಡಬಾರದು ಎಂಬ ಕಾರಣ­ದಿಂದ ಅವರು ಬಂದಿಲ್ಲ’ ಎಂದು ಬೆಂಗಳೂರಿನಲ್ಲಿ ಹೇಳಿದ್ದರು. ಈಗ ಸನ್ಮಾನಕ್ಕೆ ಮೈಲಿಗೆ ಪ್ರಶ್ನೆ ಬರ­ಲಿಲ್ಲ, ಸಮಾಜ ಕುರಿತ ಉಪನ್ಯಾಸಕ್ಕೆ ಬಂತು. ಇದು ಯಾವ  ನೀತಿ? ದಸರಾ ಉತ್ಸವದ ಉದ್ಘಾ­ಟ­­­ನೆಯ ಸಂದರ್ಭ­ದಲ್ಲೂ ಅವರು ‘ಪೂಜೆಗೆ ಗೈರು, ಉದ್ಘಾಟನೆಗೆ ಹಾಜರು’ ಎಂಬಂತೆ ಹಿಂಬ­ದಿ­­ಯಿಂದ ವೇದಿಕೆ ಹತ್ತಿದ್ದರು. ಬೆಕ್ಕು ಕಣ್ಣುಮುಚ್ಚಿ ಹಾಲುಕುಡಿದರೆ ಜಗತ್ತಿಗೆ ಗೊತ್ತಾಗುವುದಿಲ್ಲವೇ?

  –ತ್ರಿವೇಣಿ,  ಬೆಂಗಳೂರು.

ಪ್ರತಿಕ್ರಿಯಿಸಿ (+)