ಬುಧವಾರ, ಏಪ್ರಿಲ್ 21, 2021
24 °C

ಸನ್‌ಫಿಲ್ಮ್: ಸುಪ್ರೀಂ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಾಹನಗಳಲ್ಲಿ ಸನ್‌ಫಿಲ್ಮ್ ಬಳಕೆ ನಿಷೇಧಿಸಿ ತಾನು ಹೊರಡಿಸಿದ್ದ ಆದೇಶ ಸಮರ್ಪಕವಾಗಿ ಜಾರಿಗೆ ಬಂದಿಲ್ಲ ಹಾಗೂ ಗಣ್ಯ ವ್ಯಕ್ತಿಗಳಿಗಾಗಿ ಈ ನಿಯಮಾವಳಿಯಲ್ಲಿ ಸಡಿಲಿಕೆ ನೀಡಿರುವುದು ದುರ್ಬಳಕೆಗೆ ದಾರಿ ಮಾಡಿಕೊಟ್ಟಿದೆ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.ದೆಹಲಿಯಲ್ಲಂತೂ ಕಪ್ಪುಗಾಜು ಹೊತ್ತ ಹಲವು ಕಾರುಗಳು ತಿರುಗಾಡುತ್ತಿವೆ. ಅಪಘಾತ ನಡೆದ ಸಂದರ್ಭದಲ್ಲಿ ಇಂತಹ ವಾಹನ ಬಳಸುವವರಿಗೆ ಶಿಕ್ಷೆಯಾಗುವುದೇ ಇಲ್ಲ.ಝಡ್ ದರ್ಜೆಯ ಭದ್ರತಾ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳೇ ಬಹುತೇಕ ಇಂತಹ ಕಾರುಗಳನ್ನು ಬಳಸುತ್ತಾರೆ. ಅಧಿಕೃತ ಪ್ರಕ್ರಿಯೆಯ ನಂತರ ಗಣ್ಯರಿಗೆ ಸನ್‌ಫಿಲ್ಮ್ ಬಳಸಲು ಅವಕಾಶ ನೀಡಲಾಗಿದೆ.ನಿಯಮಾವಳಿಯ ಈ ಸಡಿಲಿಕೆ ದುರ್ಬಳಕೆಗೆ ಕಾರಣವಾಗಿದೆ ಎಂದು ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ಹಾಗೂ ಸ್ವತಂತ್ರಕುಮಾರ್ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಏ. 27ರಂದು ವಾಹನಗಳಲ್ಲಿ ಸನ್‌ಫಿಲ್ಮ್ ನಿಷೇಧಿಸಿ ಸುಂಪ್ರೀ ಕೋರ್ಟ್ ಆದೇಶ ಹೊರಡಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.