ಸನ್‌ರೈಸರ್ಸ್‌ಗೆ ಆಘಾತ

7
ಚಾಂಪಿಯನ್ಸ್‌ ಲೀಗ್‌: ಮಿಂಚಿದ ಹೆನ್ರಿ ಡೇವಿಡ್ಸ್‌; ಟೈಟಾನ್ಸ್‌ ಜಯಭೇರಿ

ಸನ್‌ರೈಸರ್ಸ್‌ಗೆ ಆಘಾತ

Published:
Updated:
ಸನ್‌ರೈಸರ್ಸ್‌ಗೆ ಆಘಾತ

ರಾಂಚಿ (ಪಿಟಿಐ): ನಾಯಕ ಹೆನ್ರಿ ಡೇವಿಡ್ಸ್‌ (64) ಮತ್ತು ಜಾಕ್‌ ರುಡಾಲ್ಫ್‌ (ಔಟಾಗದೆ 49) ತೋರಿದ ಉತ್ತಮ ಆಟದ ನೆರವಿನಿಂದ ಟೈಟಾನ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು.ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಟೈಟಾನ್ಸ್‌ ಎಂಟು ವಿಕೆಟ್‌­ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಆಘಾತ ನೀಡಿತು.ಮೊದಲು ಬ್ಯಾಟ್‌ ಮಾಡಿದ ಸನ್‌ರೈಸರ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 145 ರನ್‌ ಪೇರಿಸಿದರೆ, ಎದುರಾಳಿ ತಂಡ 16.3 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್‌ ಗಳಿಸಿ ಗೆಲುವಿನ ನಗು ಬೀರಿತು.ಸೋಲು ಅನುಭವಿಸಿದ ಕಾರಣ ಶಿಖರ್‌ ಧವನ್‌ ಬಳಗದ ಸೆಮಿಫೈನಲ್‌ ಪ್ರವೇಶದ ಸಾಧ್ಯತೆ ಕ್ಷೀಣಿಸಿದೆ. ಹೈದರಾ­ಬಾದ್‌ನ ತಂಡ ಮೂರು ಪಂದ್ಯಗಳಿಂದ ಕೇವಲ ನಾಲ್ಕು ಪಾಯಿಂಟ್‌ ಹೊಂದಿದೆ. ಇಷ್ಟೇ ಪಂದ್ಯಗಳಿಂದ ಎಂಟು ಪಾಯಿಂಟ್‌ ಕಲೆಹಾಕಿರುವ ಟೈಟಾನ್ಸ್‌ ನಾಲ್ಕರಘಟ್ಟ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿತು.ಟಾಸ್‌ ಗೆದ್ದ ಟೈಟಾನ್ಸ್‌ ಫೀಲ್ಡಿಂಗ್‌ ಮಾಡಲು ನಿರ್ಧರಿಸಿತು. ಪಾರ್ಥಿವ್‌ ಪಟೇಲ್‌ (26) ಮತ್ತು ಶಿಖರ್‌ ಧವನ್‌ (37, 21 ಎಸೆತ, 7 ಬೌಂ, 1 ಸಿಕ್ಸರ್‌) ಮೊದಲ ವಿಕೆಟ್‌ಗೆ 62 ರನ್‌ ಸೇರಿಸಿ ಸನ್‌ರೈಸರ್ಸ್‌ ತಂಡಕ್ಕೆ ಉತ್ತಮ ಆರಂಭ ನೀಡಿದರು.ಸಾಧಾರಣ ಗುರಿ ಬೆನ್ನಟ್ಟಿದ ಟೈಟಾನ್ಸ್‌ಗೆ ಭರ್ಜರಿ ಆರಂಭ ದೊರೆ ಯಿತು. ಡೇವಿಡ್ಸ್‌ ಮತ್ತು ರುಡಾಲ್ಫ್‌ ಮೊದಲ ವಿಕೆಟ್‌ಗೆ 12.1 ಓವರ್‌­ಗಳಲ್ಲಿ 112 ರನ್‌ ಸೇರಿಸಿದರು. ಇದ­ರಿಂದ ತಂಡ ಯಾವುದೇ ಒತ್ತಡ ಅನು­ಭವಿ­ಸದೆ ಗೆಲುವಿನ ಗುರಿ ತಲುಪಿತು.42 ಎಸೆತಗಳನ್ನು ಎದುರಿಸಿದ ಡೇವಿಡ್ಸ್‌ 7 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು. ಬೌಲಿಂಗ್‌­ನಲ್ಲೂ ಮಿಂಚಿದ್ದ ಅವರು (4–0–18–1) ಆಲ್‌ರೌಂಡ್‌ ಪ್ರದರ್ಶನದ ಮೂಲಕ ಗಮನ ಸೆಳೆದರು. ತಾಳ್ಮೆಯ ಆಟವಾಡಿದ ರುಡಾಲ್ಫ್‌ 42 ಎಸೆತ­ಗ­ಳ­ನ್ನು ಎದುರಿಸಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್‌ ಸಿಡಿಸಿದರು.ಸಂಕ್ಷಿಪ್ತ ಸ್ಕೋರ್‌: ಸನ್‌ರೈಸರ್ಸ್‌ ಹೈದರಾಬಾದ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 145 (ಪಾರ್ಥಿವ್‌ ಪಟೇಲ್‌ 26, ಶಿಖರ್‌ ಧವನ್‌ 37, ಜೆಪಿ ಡುಮಿನಿ 17, ಡೆಲ್‌ ಸ್ಟೇನ್‌ ಔಟಾಗದೆ 27, ಡೇವಿಡ್‌ ವೀಸ್‌ 17ಕ್ಕೆ 3, ಹೆನ್ರಿ ಡೇವಿಡ್ಸ್‌ 18ಕ್ಕೆ 1)ಟೈಟಾನ್ಸ್‌: 16.3 ಓವರ್‌ಗಳಲ್ಲಿ 2 ವಿಕೆಟ್‌ಗೆ 147 (ಜಾಕ್‌ ರುಡಾಲ್ಫ್‌ ಔಟಾಗದೆ 49, ಹೆನ್ರಿ ಡೇವಿಡ್ಸ್‌ 64, ಹೀನೊ ಕುನ್‌ ಔಟಾಗದೆ 15, ಡೆಲ್‌ ಸ್ಟೇನ್‌ 23ಕ್ಕೆ 1) ಫಲಿತಾಂಶ: ಟೈಟಾನ್ಸ್‌ಗೆ 8 ವಿಕೆಟ್‌ ಗೆಲುವುಇಂದಿನ ಪಂದ್ಯಗಳು

ಲಯನ್ಸ್‌– ಒಟಾಗೊ ವೋಲ್ಟ್ಸ್‌

ಸ್ಥಳ: ಜೈಪುರ, ಆರಂಭ: ಸಂಜೆ 4.00ರಾಜಸ್ತಾನ ರಾಯಲ್ಸ್‌– ಪರ್ತ್‌ ಸ್ಕಾಚರ್ಚ್‌

ಸ್ಥಳ: ಜೈಪುರ, ಆರಂಭ: ರಾತ್ರಿ 8.00

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry