ಸನ್‌ರೈಸರ್ಸ್‌ಗೆ ಸುಲಭ ಗುರಿ

7
ಚಾಂಪಿಯನ್ಸ್‌ ಲೀಗ್‌: ಒಟಾಗೊ ವೋಲ್ಟ್ಸ್‌ಗೆ ಸತತ ಎರಡನೇ ಜಯ

ಸನ್‌ರೈಸರ್ಸ್‌ಗೆ ಸುಲಭ ಗುರಿ

Published:
Updated:

ಮೊಹಾಲಿ (ಪಿಟಿಐ): ಫೈಸಲಾಬಾದ್‌ ವೂಲ್ವ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಅರ್ಹತಾ ಹಂತದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಗೆಲುವಿಗೆ 128 ರನ್‌ಗಳ ಗುರಿ ನೀಡಿದೆ.ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನದ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 127 ರನ್‌ ಪೇರಿಸಿತು.ಈ ಗುರಿ ಬೆನ್ನಟ್ಟಿರುವ ಶಿಖರ್‌ ಧವನ್‌ ನೇತೃತ್ವದ ಸನ್‌ರೈಸರ್ಸ್‌ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 11 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 78 ರನ್‌ ಗಳಿಸಿತ್ತು. ಸನ್‌ರೈಸರ್ಸ್‌ ಮೊದಲ ಪಂದ್ಯದಲ್ಲಿ ಮಂಗಳ­ವಾರ ಕಂದುರತಾ ಮರೂನ್ಸ್‌ ವಿರುದ್ಧ 8 ವಿಕೆಟ್‌ ಜಯ ಸಾಧಿಸಿತ್ತು.ಒಟಾಗೊ ಜಯಭೇರಿ: ದಿನದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಒಟಾಗೊ ವೋಲ್ಟ್ಸ್‌ ತಂಡ ಆರು ವಿಕೆಟ್‌ಗಳಿಂದ ಶ್ರೀಲಂಕಾದ ಕಂದುರತಾ ಮರೂನ್ಸ್‌ ತಂಡವನ್ನು ಮಣಿಸಿತು. ಸತತ ಎರಡನೇ ಗೆಲುವು ಪಡೆದ ಒಟಾಗೊ ಪ್ರಧಾನ ಹಂತ ಪ್ರವೇಶಿಸುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.ಆಲ್‌ರೌಂಡ್‌ ಪ್ರದರ್ಶನ ನೀಡಿದ ರ್‍್ಯಾನ್‌ ಟೆನ್‌ ಡಾಶ್ಕೆ ಒಟಾಗೊ ತಂಡದ ಗೆಲುವಿನ ರೂವಾರಿ ಎನಿಸಿದರು. 32 ಎಸೆತಗಳಲ್ಲಿ 64 ರನ್‌ ಸಿಡಿಸಿದ ಅವರು ಬೌಲಿಂಗ್‌ನಲ್ಲೂ  ಮಿಂಚಿದರು.ಸಂಕ್ಷಿಪ್ತ ಸ್ಕೋರ್: ಫೈಸಲಾಬಾದ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 127 (ಅಮ್ಮಾರ್‌ ಮಹಮೂದ್‌ 31, ಮಿಸ್ಬಾ ಉಲ್‌ ಹಕ್‌ ಔಟಾಗದೆ 56,  ಇಶಾಂತ್‌ ಶರ್ಮ 26ಕ್ಕೆ 1, ಅಮಿತ್‌ ಮಿಶ್ರಾ 13ಕ್ಕೆ 1) (ವಿವರ ಅಪೂರ್ಣ)ಕಂದುರತಾ ಮರೂನ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 154 (ಉಪುಲ್‌ ತರಂಗ 76, ದಿಲ್ಹಾರ ಲೋಕುಹೆಟ್ಟಿಗೆ 15, ಇಯಾನ್‌ ಬಟ್ಲರ್‌ 21ಕ್ಕೆ 3, ರ್‍್ಯಾನ್‌ ಟೆನ್‌ ಡಾಶ್ಕೆ 9ಕ್ಕೆ 2)ಒಟಾಗೊ: 18 ಓವರ್‌ಗಳಲ್ಲಿ 4 ವಿಕೆಟ್‌ಗೆ 157 (ನೀಲ್‌ ಬ್ರೂಮ್‌ 25, ಹಾಮಿಷ್ ರುದರ್‌ಫರ್ಡ್‌ 20, ರ್‍್ಯಾನ್‌ ಟೆನ್‌ ಡಾಶ್ಕೆ 64, ಜೇಮ್ಸ್‌ ನೀಶಮ್‌ ಔಟಾಗದೆ 32, ದಿಲ್ಹಾರ ಲೋಕುಹೆಟ್ಟಿಗೆ  20ಕ್ಕೆ 3) ಫಲಿತಾಂಶ: ಒಟಾಗೊ ತಂಡಕ್ಕೆ 6 ವಿಕೆಟ್‌ ಜಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry