ಮಂಗಳವಾರ, ನವೆಂಬರ್ 12, 2019
19 °C
ಮಿಶ್ರಾ, ಸ್ಟೇಯ್ನ ಪ್ರಭಾವಿ ಬೌಲಿಂಗ್; ಅಶೋಕ್ ದಿಂಡಾ ಶ್ರಮ ವ್ಯರ್ಥ

ಸನ್‌ರೈಸರ್ಸ್ ಗೆಲುವಿನ ಆರಂಭ

Published:
Updated:
ಸನ್‌ರೈಸರ್ಸ್ ಗೆಲುವಿನ ಆರಂಭ

ಹೈದರಾಬಾದ್ (ಪಿಟಿಐ): ಬ್ಯಾಟ್ಸ್‌ಮನ್‌ಗಳು ಎಡವಿದರು. ಆದರೆ ಬೌಲರ್‌ಗಳು ಕೈಬಿಡಲಿಲ್ಲ. ಪರಿಣಾಮ ಐಪಿಎಲ್ ಟೂರ್ನಿಯ ನೂತನ ತಂಡ ಸನ್‌ರೈಸರ್ಸ್ ಹೈದರಾಬಾದ್ ತನ್ನ ಚೊಚ್ಚಲ ಪಂದ್ಯದಲ್ಲಿ ಗೆಲುವಿನ ಮುನ್ನುಡಿ ಬರೆಯಿತು.ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್ 22 ರನ್‌ಗಳ ಗೆಲುವು ಸಾಧಿಸಲು ಪ್ರಮುಖ ಕಾರಣರಾಗಿದ್ದು ಡೇಲ್ ಸ್ಟೇಯ್ನ (11ಕ್ಕೆ3) ಹಾಗೂ ಅಮಿತ್ ಮಿಶ್ರಾ (19ಕ್ಕೆ3).ಸನ್‌ರೈಸರ್ಸ್ ನೀಡಿದ 127 ರನ್‌ಗಳ ಗುರಿಗೆ ಉತ್ತರವಾಗಿ ಪುಣೆ ವಾರಿಯರ್ಸ್ ತಂಡದವರು 18.5 ಓವರ್‌ಗಳಲ್ಲಿ 104 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡರು. ಆರಂಭಿಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಗಳಿಸಿದ 24 ರನ್ ಈ ತಂಡದ ಗರಿಷ್ಠ ಸ್ಕೋರ್. ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. 54 ರನ್ ಅಂತರದಲ್ಲಿ ಕೊನೆಯ 6 ವಿಕೆಟ್‌ಗಳು ಪತನಗೊಂಡವು.ಇದಕ್ಕೂ ಮುನ್ನ ಟಾಸ್ ಗೆದ್ದ ಪುಣೆ  ವಾರಿಯರ್ಸ್ ತಂಡದ ನಾಯಕ ಏಂಜೆಲೊ ಮ್ಯಾಥ್ಯೂಸ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಅಶೋಕ್ ದಿಂಡಾ (29ಕ್ಕೆ 2) ಒಳಗೊಂಡಂತೆ ಎಲ್ಲ ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿದ ಕಾರಣ ಸನ್‌ರೈಸರ್ಸ್ ಬ್ಯಾಟ್ಸ್‌ಮನ್‌ಗಳಿಗೆ ವೇಗವಾಗಿ ರನ್ ಗಳಿಸಲು ಆಗಲಿಲ್ಲ.ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಲಭಿಸಿತ್ತು. ಆದರೆ ಅದರ ಪ್ರಯೋಜನ ಪಡೆಯುವಲ್ಲಿ ವಿಫಲವಾಯಿತು. ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡ ಕಾರಣ ಸವಾಲು ಎನ್ನಬಹುದಾದ ಮೊತ್ತ ಪೇರಿಸಲು ಆಗಲಿಲ್ಲ.ಅಕ್ಷತ್ ರೆಡ್ಡಿ (27) ಮತ್ತು ಪಾರ್ಥಿವ್ ಪಟೇಲ್ (19) ಮೊದಲ ವಿಕೆಟ್‌ಗೆ 32 ಎಸೆತಗಳಲ್ಲಿ 34 ರನ್ ಕಲೆಹಾಕಿದರು. ಇವರು ಬಿರುಸಿನಿಂದ ರನ್ ಪೇರಿಸದಿದ್ದರೂ, ಎದುರಾಳಿ ತಂಡಕ್ಕೆ ಬೇಗನೇ ವಿಕೆಟ್ ಒಪ್ಪಿಸಲಿಲ್ಲ.ಅಶೋಕ್ ದಿಂಡಾ ಆರನೇ ಓವರ್‌ನಲ್ಲಿ ಪಾರ್ಥಿವ್ ವಿಕೆಟ್ ಪಡೆದು ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಬ್ಯಾಟಿಂಗ್‌ನ ಪ್ರಧಾನ ಶಕ್ತಿ ಎನಿಸಿರುವ ನಾಯಕ ಕುಮಾರ ಸಂಗಕ್ಕಾರ (15) ಬೇಗನೇ ಔಟಾದರು. ಮುಂದಿನ 23 ರನ್ ಗಳಿಸುವಷ್ಟರಲ್ಲಿ ಮತ್ತೆರಡು ವಿಕೆಟ್‌ಗಳು ಬಿದ್ದವು. ಇದರಿಂದ ಸನ್‌ರೈಸರ್ಸ್ ರನ್ ವೇಗಕ್ಕೆ ಕಡಿವಾಣ ಬಿತ್ತು.ಸಂಗಕ್ಕಾರ ಅವರು ರಾಹುಲ್ ಶರ್ಮ ಎಸೆತದಲ್ಲಿ `ಕ್ಲೀನ್‌ಬೌಲ್ಡ್' ಆದರು. ಭರ್ಜರಿ ಹೊಡೆತಕ್ಕೆ ಮುಂದಾದ ಅವರು ಚೆಂಡಿನ ಗತಿಯನ್ನು ಅಂದಾಜಿಸುವಲ್ಲಿ ಎಡವಿದರು. ಬ್ಯಾಟ್‌ಗೆ ಸವರಿದ ಚೆಂಡು ಸ್ಟಂಪ್‌ಗೆ ಬಡಿಯಿತು.ಕೊನೆಯಲ್ಲಿ ತಿಸಾರ ಪೆರೇರಾ (30, 18 ಎಸೆತ, 3 ಬೌಂ, 1 ಸಿಕ್ಸರ್) ಕೆಲವೊಂದು ಭರ್ಜರಿ ಹೊಡೆತಗಳ ಮೂಲಕ ರನ್‌ರೇಟ್ ಹೆಚ್ಚಿಸಲು ಪ್ರಯತ್ನಿಸಿದರು. 15 ಓವರ್‌ಗಳ ಬಳಿಕ ತಂಡ ನಾಲ್ಕು ವಿಕೆಟ್‌ಗೆ 87 ರನ್ ಗಳಿಸಿತ್ತು. ಅಂತಿಮ ಓವರ್‌ಗಳಲ್ಲಿ ಸನ್‌ರೈಸರ್ಸ್ ಬ್ಯಾಟ್ಸ್‌ಮನ್‌ಗಳಿಂದ ಭರ್ಜರಿ ಆಟ ನಿರೀಕ್ಷಿಸಲಾಗಿತ್ತು. ಪುಣೆ ತಂಡದ ಬೌಲರ್‌ಗಳು ಅದಕ್ಕೆ ಅವಕಾಶ ನೀಡಲಿಲ್ಲ.ಕೊನೆಯ 30 ಎಸೆತಗಳಲ್ಲಿ 39 ರನ್‌ಗಳನ್ನು ಗಳಿಸಿತು. ಇವುಗಳಲ್ಲಿ ಹೆಚ್ಚಿನ ರನ್‌ಗಳು ಪೆರೇರಾ ಬ್ಯಾಟ್‌ನಿಂದ ಬಂದವು.

ಮರ್ಲಾನ್ ಸ್ಯಾಮುಯೆಲ್ಸ್, ಭುವನೇಶ್ವರ್ ಕುಮಾರ್, ರಾಹುಲ್ ಶರ್ಮ ಮತ್ತು ಯುವರಾಜ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು. ಭುವನೇಶ್ವರ್ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟರು.

ಸ್ಕೋರ್ ವಿವರಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ

6 ವಿಕೆಟ್‌ಗೆ 126


ಅಕ್ಷತ್ ರೆಡ್ಡಿ ಬಿ ಯುವರಾಜ್ ಸಿಂಗ್  27

ಪಾರ್ಥಿವ್ ಪಟೇಲ್ ಬಿ ಅಶೋಕ್ ದಿಂಡಾ  19

ಕುಮಾರ ಸಂಗಕ್ಕಾರ ಬಿ ರಾಹುಲ್ ಶರ್ಮಾ  15

ವೈಟ್ ಸಿ ಮಾರ್ಷ್ ಬಿ ಮರ್ಲಾನ್ ಸ್ಯಾಮುಯೆಲ್ಸ್  10

ತಿಸಾರ ಪೆರೇರಾ ಸಿ ಪಾಂಡೆ ಬಿ ಅಶೋಕ್ ದಿಂಡಾ  30

ಹನುಮ ವಿಹಾರಿ ಸಿ ದಿಂಡಾ ಬಿ ಭುವನೇಶ್ವರ್ ಕುಮಾರ್ 11

ಆಶೀಶ್ ರೆಡ್ಡಿ ಔಟಾಗದೆ  07

ರವಿ ತೇಜ ಔಟಾಗದೆ  04

ಇತರೆ (ಲೆಗ್‌ಬೈ-1, ವೈಡ್-2) 03ವಿಕೆಟ್ ಪತನ: 1-34 (ಪಟೇಲ್; 5.2), 2-60 (ಸಂಗಕ್ಕಾರ; 9.5), 3-72 (ರೆಡ್ಡಿ; 12.6), 4-83 (ವೈಟ್; 14.2), 5-109 (ಪೆರೇರಾ; 17.5), 6-116 (ವಿಹಾರಿ; 18.5)

ಬೌಲಿಂಗ್: ಮರ್ಲಾನ್ ಸ್ಯಾಮುಯೆಲ್ಸ್ 4-0-34-1, ಭುವನೇಶ್ವರ್ ಕುಮಾರ್ 4-0-17-1, ಅಶೋಕ್ ದಿಂಡಾ 4-0-29-2, ಏಂಜೆಲೊ ಮ್ಯಾಥ್ಯೂಸ್ 2-0-16-2, ರಾಹುಲ್ ಶರ್ಮ 4-0-21-0, ಯುವರಾಜ್ ಸಿಂಗ್ 2-0-8-1 ಪುಣೆ ವಾರಿಯರ್ಸ್ 18.5 ಓವರ್‌ಗಳಲ್ಲಿ 104

ಉತ್ತಪ್ಪ ಸಿ ಪಾರ್ಥಿವ್ ಪಟೇಲ್ ಬಿ ತಿಸ್ಸಾರ ಪೆರೇರಾ  24

ಮನೀಷ್ ಪಾಂಡೆ ಸಿ ವೈಟ್ ಬಿ ಅಮಿತ್ ಮಿಶ್ರಾ  15

ಸ್ಯಾಮುಯೆಲ್ಸ್ ಸಿ ವೈಟ್ ಬಿ ತಿಸ್ಸಾರ ಪೆರೇರಾ  05

ಯುವರಾಜ್ ಸ್ಟಂಪ್ಡ್ ಪಾರ್ಥಿವ್ ಬಿ ಅಮಿತ್ ಮಿಶ್ರಾ  02

ರಾಸ್ ಟೇಲರ್ ಬಿ ಆಶೀಶ್ ರೆಡ್ಡಿ  19

ಅಭಿಷೇಕ್ ನಾಯರ್ ಸಿ ಇಶಾಂತ್ ಬಿ ಅಮಿತ್ ಮಿಶ್ರಾ  19

ಆ್ಯಂಜೆಲೊ ಮ್ಯಾಥ್ಯೂಸ್ ಔಟಾಗದೆ  08

ಮಿಷೆಲ್ ಮಾರ್ಷ್ ರನ್‌ಔಟ್ (ಪೆರೇರಾ)  07

ಭುವನೇಶ್ವರ್ ಕುಮಾರ್ ಬಿ ಡೇಲ್ ಸ್ಟೇಯ್ನ  03

ರಾಹುಲ್ ಶರ್ಮ ಬಿ ಡೇಲ್ ಸ್ಟೇಯ್ನ   00

ದಿಂಡಾ ಸಿ ಕೆಮರಾನ್ ವೈಟ್ ಬಿ ಡೇಲ್ ಸ್ಟೇಯ್ನ  00

ಇತರೆ (ವೈಡ್-2)  02ವಿಕೆಟ್ ಪತನ: 1-36 (ಉತ್ತಪ್ಪ; 6.5); 2-42 (ಸ್ಯಾಮುಯೆಲ್ಸ್; 8.3); 3-47 (ಯುವರಾಜ್; 9.5); 4-50 (ಪಾಂಡೆ; 11.2); 5-83 (ನಾಯರ್; 15.5); 6-86 (ಟೇಲರ್; 16.2); 7-94 (ಮಾರ್ಷ್; 17.1); 8-104 (ಭುವನೇಶ್; 18.2); 9-104 (ರಾಹುಲ್; 18.3); 10-104 (ದಿಂಡಾ; 18.5)

ಬೌಲಿಂಗ್: ಡೇಲ್ ಸ್ಟೇಯ್ನ 3.5-0-11-3, ಇಶಾಂತ್ ಶರ್ಮ 4-0-22-0 (ವೈಡ್-1), ತಿಸ್ಸಾರ ಪೆರೇರಾ 4-0-29-2 (ವೈಡ್-1), ಅಮಿತ್ ಮಿಶ್ರಾ 4-0-19-3, ಕೆಮರಾನ್ ವೈಟ್ 1-0-2-0, ಆಶೀಶ್ ರೆಡ್ಡಿ 2-0-21-1ಫಲಿತಾಂಶ: ಸೈನ್‌ರೈಸರ್ಸ್ ಹೈದರಾಬಾದ್‌ಗೆ 22 ರನ್ ಜಯ. ಪಂದ್ಯ ಶ್ರೇಷ್ಠ: ಅಮಿತ್ ಮಿಶ್ರಾ

ಪ್ರತಿಕ್ರಿಯಿಸಿ (+)