ಬುಧವಾರ, ನವೆಂಬರ್ 20, 2019
21 °C
ಚುಟುಕು ಗುಟುಕು

ಸನ್‌ರೈಸರ್ಸ್ ವಿರುದ್ಧ ಸೆಹ್ವಾಗ್ ಆಡುವ ಸಾಧ್ಯತೆ

Published:
Updated:
ಸನ್‌ರೈಸರ್ಸ್ ವಿರುದ್ಧ ಸೆಹ್ವಾಗ್ ಆಡುವ ಸಾಧ್ಯತೆ

ನವದೆಹಲಿ (ಪಿಟಿಐ): ಬೆನ್ನು ನೋವಿನಿಂದ ಚೇತರಿಸಿಕೊಂಡಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಐಪಿಎಲ್ ಆರನೇ ಆವೃತ್ತಿಯಲ್ಲಿ ಶುಕ್ರವಾರ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.ಬೆನ್ನು ನೋವಿನ ಕಾರಣದಿಂದ ಮೊದಲ ಮೂರು ಪಂದ್ಯಗಳಲ್ಲಿ ಸೆಹ್ವಾಗ್ ಆಡಿರಲಿಲ್ಲ. ಈಗ ಚೇತರಿಸಿಕೊಂಡಿದ್ದು, ಗುರುವಾರ ಸಂಜೆ ಆಭ್ಯಾಸ ನಡೆಸುವ ಸಾಧ್ಯತೆಯಿದೆ.`ಸೆಹ್ವಾಗ್ ಚೇತರಿಸಿಕೊಂಡಿದ್ದಾರೆ. ಅವರು ಮುಂದಿನ ಪಂದ್ಯದಲ್ಲಿ ಆಡುವ ವಿಶ್ವಾಸವಿದೆ' ಎಂದು ಡೇರ್‌ಡೆವಿಲ್ಸ್ ತಂಡದ ಮುಖ್ಯ ಸಲಹೆಗಾರ ಟಿ.ಎ. ಶೇಖರ್ ತಿಳಿಸಿದ್ದಾರೆ.ಸೆಹ್ವಾಗ್ ಅನುಪಸ್ಥಿತಿಯಿಂದ ಪರದಾಡುತ್ತಿರುವ ಡೇರ್‌ಡೆವಿಲ್ಸ್ ಮೊದಲ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದೆ.

ಪ್ರತಿಕ್ರಿಯಿಸಿ (+)