ಶುಕ್ರವಾರ, ನವೆಂಬರ್ 15, 2019
22 °C
ಇಂದು ಪುಣೆ ವಾರಿಯರ್ಸ್ ವಿರುದ್ಧ ಪೈಪೋಟಿ

ಸನ್‌ರೈಸರ್ಸ್ ಹೈದರಾಬಾದ್‌ಗೆ `ಪದಾರ್ಪಣೆ' ಪಂದ್ಯ

Published:
Updated:

ಹೈದರಾಬಾದ್ (ಪಿಟಿಐ): ಇದೇ ಮೊದಲ ಬಾರಿಗೆ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಶುಕ್ರವಾರ ನಡೆಯುವ ಮೊದಲ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಪೈಪೋಟಿ ನಡೆಸಲಿದೆ.ಹೋದ ವರ್ಷ  ಕಣದಲ್ಲಿದ್ದ ಡೆಕ್ಕನ್ ಚಾರ್ಜರ್ಸ್ ತಂಡ ಈ ಸಲ ಐಪಿಎಲ್‌ನಲ್ಲಿ ಇಲ್ಲ. ಅದರ ಬದಲು ಸನ್‌ರೈಸರ್ಸ್ ತಂಡ ಹೊಸದಾಗಿ ಕಾಣಿಸಿಕೊಂಡಿದೆ. ಚಾರ್ಜರ್ಸ್ ತಂಡವನ್ನು ಮುನ್ನಡೆಸಿದ್ದ ಕುಮಾರ ಸಂಗಕ್ಕಾರ ಅವರೇ ಸನ್‌ರೈಸರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಆದರೆ ಕೆಲ ಹೊಸ ಆಟಗಾರರು ಸೇರಿಕೊಂಡಿರುವ ಕಾರಣ ಹೈದರಾಬಾದ್‌ನ ತಂಡ ಹೊಸ ರೂಪ ಪಡೆದಿದೆ.ನಾಯಕ ಸಂಗಕ್ಕಾರ ಬ್ಯಾಟಿಂಗ್ ವಿಭಾಗದ ಪ್ರಧಾನ ಶಕ್ತಿ ಎನಿಸಿಕೊಂಡಿದ್ದಾರೆ. ಜೆಪಿ ಡುಮಿನಿ, ತಿಸಾರ ಪೆರೇರಾ, ಕ್ಯಾಮರೂನ್ ವೈಟ್, ಡೇಲ್ ಸ್ಟೇನ್ ಮುಂತಾದ ಆಟಗಾರರನ್ನು ಒಳಗೊಂಡಿರುವ ಹೈದರಾಬಾದ್‌ನ ಬಳಗ ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಗೆಲುವಿನ ಕನಸನ್ನು ಕಾಣುತ್ತಿದೆ.ಗಾಯದಿಂದ ಬಳಲುತ್ತಿರುವ ಶಿಖರ್ ಧವನ್ ಟೂರ್ನಿಯ ಮೊದಲ ಕೆಲವು ಪಂದ್ಯಗಳಲ್ಲಿ ಆಡುತ್ತಿಲ್ಲ. ಇದು ಹೈದರಾಬಾದ್ ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ.  ಸನ್‌ರೈಸರ್ಸ್ ತಂಡದ ಸಹಾಯಕ ಸಿಬ್ಬಂದಿ ಬಳಗ ಅನುಭವಿಗಳಿಂದ ಕೂಡಿದೆ. ಭಾರತ ತಂಡದ ಮಾಜಿ ಆಟಗಾರರಾದ ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ವಿವಿಎಸ್ ಲಕ್ಷ್ಮಣ್ ತಂಡದ ಸಲಹೆಗಾರರಾಗಿದ್ದಾರೆ. ಟಾಮ್ ಮೂಡಿ (ಮುಖ್ಯ ಕೋಚ್) ಮತ್ತು ವಕಾರ್ ಯೂನಿಸ್ (ಬೌಲಿಂಗ್ ಕೋಚ್) ಅವರ ಮಾರ್ಗದರ್ಶನವೂ ಲಭಿಸಲಿದೆ.

ಏಂಜೆಲೊ ಮ್ಯಾಥ್ಯೂಸ್ ಮುನ್ನಡೆಸುತ್ತಿರುವ ಪುಣೆ ವಾರಿಯರ್ಸ್ ಕೂಡಾ ಶುಭಾರಂಭದ ನಿರೀಕ್ಷೆಯಲ್ಲಿದೆ. ಟೂರ್ನಿಯ ಆರಂಭಕ್ಕೆ ಮುನ್ನವೇ ಪುಣೆ ಆಘಾತ ಅನುಭವಿಸಿತ್ತು. ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಐಪಿಎಲ್‌ನಿಂದ ಹಿಂದೆ ಸರಿದದ್ದೇ ಇದಕ್ಕೆ ಕಾರಣ. ಬೆನ್ನು ನೋವಿನಿಂದ ಬಳಲುತ್ತಿರುವ ಕ್ಲಾರ್ಕ್ ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.ಆದರೆ ಯುವರಾಜ್ ಸಿಂಗ್, ರಾಸ್ ಟೇಲರ್, ರಾಬಿನ್ ಉತ್ತಪ್ಪ, ಅಭಿಷೇಕ್ ನಾಯರ್, ಭುವನೇಶ್ವರ್ ಕುಮಾರ್ ಮತ್ತು ಅಜಂತಾ ಮೆಂಡಿಸ್ ಅವರನ್ನು ಒಳಗೊಂಡಿರುವ ಕಾರಣ ಎದುರಾಳಿಗಳಿಗೆ ತಕ್ಕ ಪೈಪೋಟಿ ನೀಡುವ ಸಾಮರ್ಥ್ಯವನ್ನು ಪುಣೆ ಹೊಂದಿದೆ. ಜಮ್ಮು ಮತ್ತು ಕಾಶ್ಮೀರದ ಆಲ್‌ರೌಂಡರ್ ಪರ್ವೇಜ್ ರಸೂಲ್ ಪುಣೆ ತಂಡದಲ್ಲಿದ್ದಾರೆ. ಅವರಿಗೆ ಅವಕಾಶ ಲಭಿಸಿದರೆ ಐಪಿಎಲ್ ಪಂದ್ಯವನ್ನಾಡಿದ ಕಾಶ್ಮೀರದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್

ಕುಮಾರ ಸಂಗಕ್ಕಾರ (ನಾಯಕ), ಅಕ್ಷತ್ ರೆಡ್ಡಿ, ಅಮಿತ್ ಮಿಶ್ರಾ, ಆನಂದ್ ರಾಜನ್, ಅಂಕಿತ್ ಶರ್ಮ, ಆಶೀಶ್ ರೆಡ್ಡಿ, ವಿಪ್ಲವ್ ಸಮಂತರಾಯ್, ಕ್ಯಾಮರೂನ್ ವೈಟ್, ಕ್ರಿಸ್ ಲಿನ್, ಡೇಲ್ ಸ್ಟೇನ್, ಡರೆನ್ ಸಮಿ, ರವಿ ತೇಜಾ, ಹನುಮ ವಿಹಾರಿ, ಇಶಾಂತ್ ಶರ್ಮ, ನಥಾನ್ ಮೆಕ್ಲಮ್, ಪಾರ್ಥಿವ್ ಪಟೇಲ್, ಪ್ರಶಾಂತ್ ಪದ್ಮನಾಭನ್, ಕ್ವಿಂಟನ್ ಡಿ ಕಾಕ್, ಸಚಿನ್ ರಾಣಾ, ಶಿಖರ್ ಧವನ್, ತಲೈವನ್ ಸರ‌್ಗುಣಂ, ಸುದೀಪ್ ತ್ಯಾಗಿ, ತಿಸಾರ ಪೆರೇರಾ, ವೀರ್ ಪ್ರತಾಪ್ ಸಿಂಗ್

ಪುಣೆ ವಾರಿಯರ್ಸ್

ಏಂಜೆಲೊ ಮ್ಯಾಥ್ಯೂಸ್ (ನಾಯಕ), ಅಭಿಷೇಕ್ ನಾಯರ್, ಅಜಂತಾ ಮೆಂಡಿಸ್, ಅಲಿ ಮುರ್ತಜಾ, ಅನುಸ್ತುಪ್ ಮಜುಮ್ದಾರ್, ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್, ಧೀರಜ್ ಜಾಧವ್, ಏಕಲವ್ಯ ದ್ವಿವೇದಿ, ಹರ್‌ಪ್ರೀತ್ ಸಿಂಗ್, ಈಶ್ವರ್ ಪಾಂಡೆ, ಕೇನ್ ರಿಚರ್ಡ್ಸನ್, ಕೃಷ್ಣಕಾಂತ್ ಉಪಾಧ್ಯಾಯ್, ಲೂಕ್ ರೈಟ್, ಮಹೇಶ್ ರಾವತ್, ಮನೀಷ್ ಪಾಂಡೆ, ಮಾರ್ಲಾನ್ ಸ್ಯಾಮುಯೆಲ್ಸ್, ಮಿಷೆಲ್ ಮಾರ್ಷ್, ಮಿಥುನ್ ಮನ್ಹಾಸ್, ಪರ್ವೇಜ್ ರಸೂಲ್, ರಾಹುಲ್ ಶರ್ಮಾ, ರೈಫಿ ಗೊಮೆಜ್, ರಾಬಿನ್ ಉತ್ತಪ್ಪ, ರಾಸ್ ಟೇಲರ್, ಶ್ರೀಕಾಂತ್ ವಾಗ್, ಸ್ಟೀವ್ ಸ್ಮಿತ್, ಟಿ. ಸುಮನ್, ತಮೀಮ್ ಇಕ್ಬಾಲ್, ಉದಿತ್ ಬಿರ್ಲಾ, ಯುವರಾಜ್ ಸಿಂಗ್

ಸನ್‌ರೈಸರ್ಸ್ ಹೈದರಾಬಾದ್- ಪುಣೆ ವಾರಿಯರ್ಸ್ ಇಂಡಿಯಾ

ಆರಂಭ: ರಾತ್ರಿ 8ಕ್ಕೆ. ಸ್ಥಳ: ಹೈದರಾಬಾದ್      ನೇರ ಪ್ರಸಾರ: ಸೆಟ್ ಮ್ಯಾಕ್ಸ್

 

ಪ್ರತಿಕ್ರಿಯಿಸಿ (+)