ಸನ್ ಟಿವಿ ಷೇರುದಾರರ ವಿವರ ಬಹಿರಂಗ: ಆದೇಶ

7

ಸನ್ ಟಿವಿ ಷೇರುದಾರರ ವಿವರ ಬಹಿರಂಗ: ಆದೇಶ

Published:
Updated:

ನವದೆಹಲಿ (ಪಿಟಿಐ): ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್ ಅವರ ಸೋದರ ಕಲಾನಿಧಿ ಮಾರನ್ ಒಡೆತನದ `ಸನ್~ ವಾಹಿನಿಯ ಷೇರುದಾರರ ವಿವರವನ್ನು ಸಾರ್ವಜನಿಕವಾಗಿ ಬಹಿರಂಗ ಗೊಳಿಸುವಂತೆ ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚಿಸಿದೆ.  ವಾಹಿನಿಯ ಷೇರುದಾರರ ವಿವರವನ್ನು ವಾಣಿಜ್ಯ ಗೋಪ್ಯತೆ ಎಂದು  ಮುಚ್ಚಿಡುವಂತಿಲ್ಲ ಎಂದೂ ಹೇಳಿದೆ.

`ಕಂಪೆನಿ ಪಾಲುದಾರ ಸದಸ್ಯರು ಯಾರ‌್ಯಾರು? ಅವರಿಗೆ ಎಷ್ಟೆಷ್ಟು ಷೇರುಗಳು ಹಂಚಿಕೆಯಾಗಿವೆ ಮತ್ತಿತರ ಮಾಹಿತಿಗಳನ್ನು ವಾರ್ಷಿಕ ತೆರಿಗೆ ವಿವರ ಸಲ್ಲಿಸುವ ರೀತಿಯಲ್ಲೇ ಕಂಪೆನಿಗಳ ರಿಜಿಸ್ಟ್ರಾರ್ (ಆರ್‌ಒಸಿ) ಅವರಿಗೆ `ಕಂಪೆನಿ ಕಾಯ್ದೆ 1956~ರಡಿ ಸಲ್ಲಿಸಬೇಕು. ಇವುಗಳು ಆರ್‌ಒಸಿ ವೆಬ್‌ಸೈಟ್‌ನಲ್ಲೂ ಲಭ್ಯವಾಗುತ್ತವೆ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರು ಪಡೆಯುವ ಅವಕಾಶ ಇರಬೇಕು. ಆದ್ದರಿಂದ ಈ ವಿವರಗಳನ್ನು ಗೋಪ್ಯ ಮಾಹಿತಿ ಎಂದು ಪರಿಗಣಿಸುವಂತಿಲ್ಲ~ ಮಾಹಿತಿ ಆಯೋಗದ ಆಯುಕ್ತ ಶೈಲೇಶ್ ಗಾಂಧಿ ಹೇಳಿದ್ದಾರೆ.`ಸನ್~ ವಾಹಿನಿ ಷೇರುದಾರರ ಕುರಿತು ಮಾಹಿತಿ ನೀಡುವಂತೆ ವಿನೋದ್ ಕೆ. ಜೋಸ್ ಎಂಬುವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ `ಸನ್~ ವಾಹಿನಿ ಇಂತಹ ಮಾಹಿತಿಯನ್ನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಸಚಿವಾಲಯವು ಅರ್ಜಿದಾರರಿಗೆ ಮಾಹಿತಿ ನೀಡಲು ನಿರಾಕರಿಸಿತು. ಈ ಬಗ್ಗೆ ವಿನೋದ್ ಮಾಹಿತಿ ಆಯೋಗಕ್ಕೆ ಮೊರೆ ಹೋಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry