ಮಂಗಳವಾರ, ಏಪ್ರಿಲ್ 13, 2021
31 °C

ಸಫೀನಾದಲ್ಲಿ ರಾಜಸ್ತಾನಿ ಕಲಾಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ನಾನಾ ರಾಜ್ಯಗಳಿಂದ ಬಂದ ಅರವತ್ತಕ್ಕೂ ಹೆಚ್ಚಿನ ಕಲಾವಿದರ ಕಲಾ ಹಾಗೂ ಕರಕುಶಲ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗಲಿವೆ. ಶ್ರಾವಣ ಮಾಸದ ಹಬ್ಬಗಳಿಗಾಗಿಯೇ ಅನೇಕ ವೈವಿಧ್ಯಮಯ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ.ಅಂದಹಾಗೆ ರಾಜಸ್ತಾನ ಕ್ರಾಫ್ಟ್ ಇಂಡಿಯಾ ಭಾನುವಾರದವರೆಗೆ (ಆ.12) ಆಯೋಜಿಸಿರುವ ರಾಜಸ್ತಾನ ಕ್ರಾಫ್ಟ್ ಮೇಳದಲ್ಲಿ ಅಪರೂಪದ, ಸಂಗ್ರಹಯೋಗ್ಯ ಗೃಹಾಲಂಕಾರಿಕ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.ಕಾಶ್ಮೀರದ ಉಣ್ಣೆ ಬಟ್ಟೆಗಳು, ಶಾಲ್, ಕೋಲ್ಕತ್ತಾದ ಕುಸುರಿ ಬಟ್ಟೆಗಳು, ರೇಷ್ಮೆ ಸೀರೆಗಳು, ಜೈಪುರದ ಚನಿಯಾ ಚೋಲಿ, ಖಾದಿ ಕುರ್ತಾ ಕಣ್ಮನ ಸೆಳೆಯುತ್ತವೆ. ಇವಿಷ್ಟೇ ಅಲ್ಲದೆ ತಾಂಜಾವೂರು, ಒಡಿಶಾ ಕಲಾಕೃತಿಗಳು, ರಾಜಾ ರವಿವರ್ಮ ಬಿಡಿಸಿದ ಚಿತ್ರಗಳು, ಜೋಧ್‌ಪುರ ಫರ್ನಿಚರ್‌ಗಳು ಇಲ್ಲಿವೆ.ಅಲಂಕಾರಿಕ ಒಡವೆಗಳು, ಜೈಪುರದ ಕಲ್ಲಿನ ಆಭರಣಗಳು ಹೆಂಗಳೆಯರನ್ನು ಆಕರ್ಷಿಸುತ್ತಿವೆ. ಈ ಎಲ್ಲಾ ಉತ್ಪನ್ನಗಳ ಮೇಲೂ ಶೇ 10 ರಿಯಾಯಿತಿ ಇದೆ.

ಸ್ಥಳ: ಸಫೀನಾ ಪ್ಲಾಜಾ, ಇನ್‌ಫೆಂಟ್ರಿ ರಸ್ತೆ. ಮಾಹಿತಿಗೆ: 99005 45577.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.