ಸಬರದಗೆ `ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ'

7

ಸಬರದಗೆ `ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ'

Published:
Updated:

ಮೈಸೂರು:    ಜೆಎಸ್‌ಎಸ್ ಮಹಾವಿದ್ಯಾಪೀಠದ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ನೀಡುವ     2011ನೇ ಸಾಲಿನ  `ಶ್ರೀ ಶಿವರಾತ್ರೀಶ್ವರ  ಪ್ರಶಸ್ತಿ'ಗೆ ಡಾ.ಬಸವರಾಜ     ಸಬರದ ಅವರು ರಚಿಸಿರುವ `ಶರಣರು ಮತ್ತು ದಾಂಪತ್ಯ' ಕೃತಿ ಆಯ್ಕೆಯಾಗಿದೆ.ಡಾ.ಬಸವರಾಜ ಸಬರದ ಅವರು ಗುಲ್ಬರ್ಗ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಈವರಿಗೆ 54 ಕೃತಿಗಳನ್ನು ರಚಿಸಿದ್ದಾರೆ. 53 ಕೃತಿಗಳನ್ನು ಸಂಪಾದಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚಿನ ಮೌಲಿಕ ಲೇಖನಗಳನ್ನು ಬರೆದಿದ್ದಾರೆ.ಪ್ರಶಸ್ತಿಯು ರೂ 25 ಸಾವಿರ  ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಸಾಹಿತ್ಯ, ಧರ್ಮ, ಸಂಸ್ಕೃತಿ ಕುರಿತು ಪ್ರಕಟವಾಗುವ ಕೃತಿಗಳಿಗೆ 1983ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry