ಸಬ್ಸಿಡಿ ಸೋರಿಕೆ: ಪ್ರಣವ್ ಕಳವಳ

7

ಸಬ್ಸಿಡಿ ಸೋರಿಕೆ: ಪ್ರಣವ್ ಕಳವಳ

Published:
Updated:

ಗುಡಗಾಂವ್ (ಪಿಟಿಐ): `ಸಬ್ಸಿಡಿ ಸೋರಿಕೆ ಬಗ್ಗೆ ಯೋಚಿಸುವಾಗಲೆಲ್ಲ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತೇನೆ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಭಾನುವಾರ ಇಲ್ಲಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ `ಆರ್ಥಿಕ ಸೇರ್ಪಡೆ~ಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. `ದೊಡ್ಡ ಪ್ರಮಾಣದ ಸಬ್ಸಿಡಿ ಮೊತ್ತವು ಬಡವರನ್ನು ತಲುಪದೆ ಸೋರಿಕೆಯಾಗುತ್ತಿದೆ.  ಈ ಹಣವು ಸೂಕ್ತ ಫಲಾನುಭವಿಗಳನ್ನು ತಲುಪುತ್ತಿಲ್ಲ ಎನ್ನುವುದು ಅತ್ಯಂತ ಕಳವಳಕಾರಿ ಸಂಗತಿ. ಸಬ್ಸಿಡಿಗಾಗಿ ಸರ್ಕಾರ ಗರಿಷ್ಠ ಮೊತ್ತ ವ್ಯಯಿಸುತ್ತಿದ್ದರೂ, ಇದು ಪೋಲಾಗುತ್ತಿದೆ ಎಂದು ಯೋಚಿಸುವಾಗ, ವಿತ್ತ ಸಚಿವನಾಗಿ ನನಗೆ ರಾತ್ರಿ ನಿದ್ರೆಯೇ ಬರುವುದಿಲ್ಲ~ ಎಂದು  ಹೇಳಿದ್ದಾರೆ.

ವಿವಿಧ ವಿತ್ತೀಯ ಸೇರ್ಪಡೆ ಯೋಜನೆಗಳಲ್ಲಿ ಬಡವರು ಮತ್ತು ಗ್ರಾಮೀಣ ಪ್ರದೇಶಗಳ ಜನತೆಯನ್ನೂ ಪಾಲುದಾರರನ್ನಾಗಿ ಮಾಡಿಕೊಳ್ಳಬೇಕು. ಬ್ಯಾಂಕಿಂಗ್ ಮತ್ತು ಆರ್ಥಿಕ ವಿಸ್ತರಣೆ ಲಾಭಗಳು ಪ್ರತಿಯೊಬ್ಬರಿಗೂ ಲಭಿಸಬೇಕು ಎಂದರು. ರಾಷ್ಟ್ರೀಯ ವಿಶಿಷ್ಠ ಗುರುತಿನ ಸಂಖ್ಯೆ `ಆಧಾರ್~ ಮೂಲಕ ಸಬ್ಸಿಡಿ ವ್ಯಾಪ್ತಿಗೆ ಬರುವ ನೈಜ ಫಲಾನುಭವಿಗಳನ್ನು ಗುರುತಿಸಬಹುದು. ಈ ಮೂಲಕ  ಸಬ್ಸಿಡಿ ಸೋರಿಕೆ ತಡೆಗಟ್ಟಬಹುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry