ಸಬ್ಸಿಡಿ ಹಣ ಗೃಹಿಣಿಗೆ ತಲುಪಿಸಿ: ಬಸು ಸಲಹೆ

7

ಸಬ್ಸಿಡಿ ಹಣ ಗೃಹಿಣಿಗೆ ತಲುಪಿಸಿ: ಬಸು ಸಲಹೆ

Published:
Updated:

ಕೋಲ್ಕತ್ತ(ಪಿಟಿಐ): ಗೃಹ ಕೃತ್ಯಗಳಿಗೆ ಅಗತ್ಯವಾದ ವಸ್ತುಗಳ ಖರೀದಿಗೆ ಬೇಕಾದ ಹಣ ಪುರುಷರಿಗಿಂತ ಮಹಿಳೆ ಬಳಿ ಇದ್ದರೇ ಅದಕ್ಕೆ ಹೆಚ್ಚಿನ ಮೌಲ್ಯ ಎಂಬುದನ್ನು ಹಲವು ಸಮೀಕ್ಷೆಗಳು ಖಚಿತಪಡಿಸಿವೆ. ಹಾಗಾಗಿ ಕೇಂದ್ರ ಸರ್ಕಾರ `ನೇರ ನಗದು ವರ್ಗಾವಣೆ'(ಡಿಸಿಟಿ) ಜಾರಿ ವೇಳೆ ಸಬ್ಸಿಡಿ ನೆರವು ಮನೆ ಯಜಮಾನಿಗೇ ಮುಟ್ಟುವಂತೆ ಮಾಡಬೇಕು ಎಂದು ವಿಶ್ವ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು ಗಮನ ಸೆಳೆದರು.


`ಐಐಎಂ-ಕೋಲ್ಕತ್ತ' ಸಂಸ್ಥೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಬುಧವಾರ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, `ಡಿಸಿಟಿ' ಮೂಲಕ ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆ ಜಾರಿಯಿಂದ ಹಣದುಬ್ಬರದ ಮೇಲೇನೂ ಪರಿಣಾಮವಾಗದು. ಅಲ್ಲದೆ, ಮೊದಲಿನಷ್ಟೇ ಖರೀದಿ ಶಕ್ತಿ ಜನರಲ್ಲಿ ಉಳಿದಿರುತ್ತದೆ ಎಂದು ಅಭಿಪ್ರಾಯಪಟ್ಟರು.

 

ರಾಜ್ಯಗಳಿಗೆ ಸ್ವಾಯತ್ತೆ

ಬಹುಬ್ರ್ಯಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ `ನೇರ ವಿದೇಶಿ ಹೂಡಿಕೆ'(ಎಫ್‌ಡಿಐ)ಗೆ ಅವಕಾಶವಿತ್ತಿರುವ ಕೇಂದ್ರ ಸರ್ಕಾರ, ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರಗಳಿಗೆ ನೀಡಿರುವ ಕ್ರಮ ಸ್ವಾಗತಾರ್ಹ ಎಂದು ಕೌಶಿಕ್ ಬಸು ಮೆಚ್ಚುಗೆ ವ್ಯಕ್ತಪಡಿಸಿದರು.

 

`ಎಫ್‌ಡಿಐ'ನಿಂದ ಒಳಿತಾಗುವುದೊ, ಕೆಡುಕೇ ಆಗುವುದೋ ಎಂಬುದು ಕೆಲವೇ ವರ್ಷಗಳಲ್ಲಿ ತಿಳಿಯಲಿದೆ. ಒಂದೊಮ್ಮೆ ಎಫ್‌ಡಿಐಗೆ ಅವಕಾಶ ನೀಡಿದ ರಾಜ್ಯಗಳಲ್ಲಿ ಉತ್ತಮ ಫಲಿತಾಂಶ ಕಂಡುಬಂದರೆ ಉಳಿದ ರಾಜ್ಯಗಳೂ ಬಾಗಿಲು ತೆರೆಯುತ್ತವೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry