ಸಬ್ಸಿಡಿ ಹೆಚ್ಚಳಕ್ಕೆ ಕಳವಳ

7

ಸಬ್ಸಿಡಿ ಹೆಚ್ಚಳಕ್ಕೆ ಕಳವಳ

Published:
Updated:

ನವದೆಹಲಿ (ಪಿಟಿಐ): `ಸಬ್ಸಿಡಿ ದರವು ಬಜೆಟ್‌ನಲ್ಲಿ ಅಂದಾಜಿಸಿರುವ ಮಟ್ಟ ಮೀರಿರುವುದು ತೀವ್ರ ಚಿಂತೆಗೀಡು ಮಾಡಿದ್ದು, ತಾವು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುವಂತಾಗಿದೆ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.ಪ್ರಸಕ್ತ ಹಣಕಾಸು ವರ್ಷದಲ್ಲಿ,  ತೈಲ, ಆಹಾರ, ರಸಗೊಬ್ಬರದ ಮೇಲಿನ ಸಬ್ಸಿಡಿ ದರವು ಬಜೆಟ್‌ನಲ್ಲಿ ಅಂದಾಜಿಸಿರುವುದಕ್ಕಿಂತಲೂ ್ಙ1 ಲಕ್ಷ ಕೋಟಿಗಳಷ್ಟು ಹೆಚ್ಚುವ ಸಾಧ್ಯತೆ ಇದೆ. ದೇಶದ ವಿತ್ತೀಯ ಕೊರತೆ ಹೆಚ್ಚುತ್ತಿರುವ ಸದ್ಯದ ಸಂದರ್ಭದಲ್ಲಿ ಇನ್ನಷ್ಟು ಸಬ್ಸಿಡಿ ನೀಡಲು ಮುಂದಾಗಬೇಕಾದ ಅನಿವಾರ್ಯತೆಯ ಬಗ್ಗೆ ಯೋಚಿಸುವಾಗ ನನಗೆ ನಿದ್ರೆಯೇ  ಬರುವುದಿಲ್ಲ ಎಂದು ಅವರು ಇಲ್ಲಿ ನಡೆದ ಸಭೆಯೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಸಬ್ಸಿಡಿ ಪ್ರಮಾಣ ಹೆಚ್ಚಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು `ಜಿಡಿಪಿ~ಯ ಶೇ 4.5ರ ಗಡಿ ದಾಟಲಿದ್ದು, ಶೇ 5.6ರಷ್ಟಾಗುವ ಅಂದಾಜಿದೆ.ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರುವಿಕ್ರಕ್ಕೆ ಹಿನ್ನಡೆ ಉಂಟಾಗಿರುವುದು, ತೆರಿಗೆ ಸಂಗ್ರಹ ಕುಂಠಿತಗೊಂಡಿರುವುದು ವರಮಾನ ಮತ್ತು ಖರ್ಚಿನ ನಡುವಿನ ಅಂತರ ಹೆಚ್ಚುವಂತೆ ಮಾಡಿದೆ ಎಂದರು.2011-12ನೇ ಸಾಲಿನಲ್ಲಿ ಸರ್ಕಾರ ್ಙ 1.34 ಲಕ್ಷ ಕೋಟಿಗಳಷ್ಟು ಸಬ್ಸಿಡಿ ಮೊತ್ತ ಅಂದಾಜಿಸಿತ್ತು. ಆದರೆ, ಇದು ್ಙ 2.34 ಲಕ್ಷ ಕೋಟಿಗಳಷ್ಟಾಗುವ ನಿರೀಕ್ಷೆ ಇದ್ದು, `ಜಿಡಿಪಿ~ ಶೇ  4.3ರಷ್ಟನ್ನು ಮೀರಲಿದೆ ಎಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry