ಸಬ್‌ಕೋ ಸನ್ಮತಿ ದೇ ಭಗವಾನ್...

7

ಸಬ್‌ಕೋ ಸನ್ಮತಿ ದೇ ಭಗವಾನ್...

Published:
Updated:

ವಿಜಾಪುರ: `ಮಹಾತ್ಮ ಗಾಂಧೀಜಿ ಅವರ ಆರ್ಥಿಕ, ಸಾಮಾಜಿಕ ಚಿಂತನೆಗಳು ಅತ್ಯಂತ ಸರಳ. ಸೌಮ್ಯವಾದದಿಂದ ಸಾಮಾಜಿಕ ಬದಲಾವಣೆ ತಂದ ಅವರ ನಡೆ, ನುಡಿ ಸಾಮಾಜಿಕ ಚಿಂತನೆಗಳು ಸಾರ್ವಕಾಲಿಕ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಜಿಲ್ಲಾ ಆಡಳಿತ, ವಾರ್ತಾ ಇಲಾಖೆ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ  ಖಾದಿ ಮತ್ತು  ಗ್ರಾಮೋದ್ಯೋಗ ಮಂಡಳಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘ, ಗ್ರಾಮೋದ್ಯೋಗ ಎಣ್ಣೆ ಉತ್ಪಾದಕರ ಕೈಗಾರಿಕಾ ಸಹಕಾರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಂಗಳವಾರ ಇಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ ಶಾಸ್ತ್ರೀ ಅವರ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಲಾಲ್‌ಬಹದ್ದೂರ ಶಾಸ್ತ್ರೀ ಅವರು ಸರಳ ವ್ಯಕ್ತಿತ್ವದವರು. ಅಲ್ಪಾವಧಿ ಪ್ರಧಾನ ಮಂತ್ರಿಯಾಗಿದ್ದರೂ ನೈತಿಕತೆ, ಪ್ರಾಮಾಣಿಕತೆ, ಸರಳತೆಯಿಂದ ಹೆಸರಾದವರು ಎಂದರು.ಮಹಾತ್ಮ ಗಾಂಧೀಜಿ ಜನ್ಮ ದಿನದ ಅಂಗವಾಗಿ ವಾರ್ತಾ ಇಲಾಖೆ ಹೊರ ತಂದಿರುವ ಜನಪದ ಹಾಗೂ ಮಾರ್ಚ್ ಆಫ್ ಕರ್ನಾಟಕ ವಿಶೇಷ ಸಂಚಿಕೆಯನ್ನು ಸಚಿವರು ಬಿಡುಗಡೆಗೊಳಿಸಿದರು.ಹಿರಿಯ ಸಾಹಿತಿ ಹ.ಮ. ಪೂಜಾರ ಉಪನ್ಯಾಸ ನೀಡಿದರು. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಬಿ.ಬಿ. ಪಾಟೀಲ, ಗಾಂಧೀಜಿಯವರು ಕಂಡ ಕನಸು ನನಸಾಗಲು ಖಾದಿ ಉದ್ಯಮಗಳ ಪುನಃಶ್ಚೇತನ, ಗ್ರಾಮೀಣ ಗುಡಿ ಕೈಗಾರಿಕೆಗಳ ಅಭಿವದ್ಧಿಯಾಗಬೇಕು ಎಂದರು.ಶಾಸಕ ಅಪ್ಪು ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವಿಠ್ಠಲ ಕಟಕಧೋಂಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ  ಸಾವಿತ್ರಿ ಅಂಗಡಿ, ಉಪಾಧ್ಯಕ್ಷ ಚಂದ್ರಶೇಖರ ಪಾಟೀಲ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಅವಟಿ, ಜಿ.ಪಂ. ಸದಸ್ಯ ಅನುಸೂಯಾ ಜಾಧವ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ. ರಾಜಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುತ್ತಿ ಜಂಬುನಾಥ್, ಹಿರಿಯ ಗಾಂಧಿವಾದಿ ಬಿ.ಎಚ್. ಮಾಗಿ ಉಪಸ್ಥಿತರಿದ್ದರು.ವಾರ್ತಾಧಿಕಾರಿ ಬಿ.ಆರ್. ರಂಗನಾಥ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ವಾಲಿ ವಂದಿಸಿದರು. ಮಮದಾಪುರ ಕಾರ್ಯಕ್ರಮ ನಿರೂಪಿಸಿದರು.ಇದಕ್ಕೂ ಮುನ್ನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ. ಎಲ್‌ಬಿಎಸ್ ಮಾರುಕಟ್ಟೆ ಆವರಣದಲ್ಲಿ ಸರ್ವಧರ್ಮ ಪ್ರಾರ್ಥನೆ. ವಿದ್ಯಾರ್ಥಿಗಳಿಂದ ಸದ್ಭಾವನಾ ಯಾತ್ರೆ ಹಾಗೂ ಹರಿಣಶಿಕಾರಿ ಕಾಲೋನಿಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ಜರುಗಿತು.ರಂಗಮಂದಿರದಲ್ಲಿ ಹಿರಿಯ ಗಾಂಧಿವಾದಿಗಳಾದ ಬಿ.ಎಚ್. ಮಾಗಿ, ಹ.ಮ. ಪೂಜಾರ ಅವರಿಗೆ ಸನ್ಮಾನ, ಭಾರತೀಯ ಸೇವಾ ದಳ ತಂಡದಿಂದ  ಸರ್ವಧರ್ಮ ಪ್ರಾರ್ಥನೆ. ಲತಾ ಜಹಗೀರದಾರ ಅವರಿಂದ ಭಕ್ತಿ ಸಂಗೀತ, ವಾರ್ತಾ ಇಲಾಖೆ ವತಿಯಿಂದ ಚಲನಚಿತ್ರ ಪ್ರದರ್ಶನ ನಡೆಯಿತು.`ಗಾಂಧೀ-ಶಾಸ್ತ್ರೀಜಿ: ಜೀವನ  ದಾರಿದೀಪ~

ಬಸವನಬಾಗೇವಾಡಿ: 
ಮಹಾತ್ಮಾ ಗಾಂಧೀಜಿ ಮತ್ತು ಲಾಲ್‌ಬಹದ್ದೂರ ಶಾಸ್ತ್ರಿ ಅವರ ಆದರ್ಶ ಜೀವನವು ನಮಗೆ ದಾರಿ ದೀಪವಾಗಿವೆ. ಅವರ ಉನ್ನತ ಧ್ಯೇಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಕೀಲ ಶಿವಾನಂದ ಕಲ್ಲೂರ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆವರಣದಲ್ಲಿ ಬಸವ ಯುವ ಪ್ರತಿಷ್ಠಾನ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಮತ್ತು ಲಾಲ್‌ಬಹದ್ದೂರ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರಸ್ತೆ ವಿಸ್ತರಣೆಯಿಂದಾಗಿ ಗಾಂಧೀಜಿ ಪುತ್ಥಳಿಯನ್ನು ಪೊಲೀಸ್‌ಠಾಣೆ ಆವರಣ ದಲ್ಲಿ ಸ್ಥಾಪಿಸಲಾಯಿತು. ಪುರಸಭೆ ಯವರು ಸೂಕ್ತ ಸ್ಥಳ ನೀಡುವುದ ರೊಂದಿಗೆ ಅಲ್ಲಿ ಗಾಂಧೀಜಿ ಪುತ್ಥಳಿ ಸ್ಥಾಪನೆ ಮಾಡಬೇಕು  ಎಂದರು.ಡಿವೈಎಸ್‌ಪಿ ಎಂ.ವೈ.ಬಾಲದಂಡಿ ಮಾತನಾಡಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ  ಎಂದರು.ಪುರಸಭೆ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂಗನಗೌಡ ಚಿಕ್ಕೊಂಡ, ಸಿಪಿಐ ಸುನೀಲ ನಾಯಕ ಇತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವ ಯುವ ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಕಲ್ಲೂರ, ಉಪಾಧ್ಯಕ್ಷ ಬಬಲು ಅಗರವಾಲ, ಪಿಎಸ್‌ಐ ಎಂ.ಎನ್.ಸಿಂಧೂರ, ಮಲ್ಲಿಕಾರ್ಜುನ ನಾಯಕ, ಮಲ್ಲಿಕಾರ್ಜುನ ದೇವರಮನಿ, ಡಾ.ಕರ್ಣಾಕರ ಚೌಧರಿ, ಚನ್ನು ಇಂಡಿ, ನಾಗೇಶ ನಾಗೂರ,  ರಾಜು ಚಿಕ್ಕೊಂಡ, ಬಸವರಾಜ ಬಿಜಾಪುರ, ಶಿವಾನಂದ ನಾಗರಾಳ, ಬಾಬು ನಿಡಗುಂದಿ, ಲಲಿತ ಕುಮಾರ ಹಗರಗೊಂಡ, ಅಮರೇಶ ಮಿಣಜಗಿ, ಮುರಗೇಪ್ಪ ಚಿಂಚೋಳಿ ಇತರರು ಉಪಸ್ಥಿತರಿದ್ದರು.ಕಾಂಗ್ರೆಸ್ ಮಹಿಳಾ ಘಟಕ: ಆಚರಣೆ

ಬಸವನಬಾಗೇವಾಡಿ:
ಪಟ್ಟಣದ ಬಸವ ನಗರದ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಮಹಿಳಾ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ಮಹಾತ್ಮಾ ಗಾಂಧೀ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಕಾಂಗ್ರೆಸ್ ಮಹಿಳಾ ಬ್ಲಾಕ್ ಘಟಕದ ಅಧ್ಯಕ್ಷೆ ರುಕ್ಮೀಣಿ ರಾಠೋಡ,  ಗಾಂಧೀಜಿ ಅವರು ದೇಶದ ಸ್ವಾತಂತ್ಯ ಕ್ಕಾಗಿ ತಮ್ಮ ಜೀವನ್ನು ಮುಡಿ ಪಾಗಿಟ್ಟರು. ಅಂತಹವರ ಆದರ್ಶ ಗಳನ್ನು ಇಂದಿನ ಯುವಕರು ತಿಳಿದು ಕೊಳ್ಳುವ ಅಗತ್ಯವಿದೆ. ಗಾಂಧೀಜಿ ವಿಚಾರಧಾರೆ ಮೇಲೆ ಜೀವನ ಸಾಗಿಸ ಬೇಕು. ಗಾಂಧೀಜಿ ಸ್ವಾತಂತ್ರ್ಯ ಹೋರಾಟ ಜೊತೆಗೆ ಸಮಾಜದಲ್ಲಿ ಇರುವ ಸಮಸ್ಯೆಗಳನ್ನು ಹೋಗಲಾ ಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿ ಸಿದ್ದರು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗಂಗುಬಾಯಿ ಕುಂಬಾರ, ಶಾಂತಾಬಾಯಿ ಪಟ್ಟಣ ಶೆಟ್ಟಿ, ನೀಲಮ್ಮ ಜಲಪೂರ, ರೂಪಾ ಹಂಗರಗಿ, ದೀಪಾ ಹಂಗರಗಿ, ಜುಬಾದೆ ಮುಲ್ಲಾ, ಲಕ್ಷ್ಮೀಬಾಯಿ ಕುಂಬಾರ, ಶಾರವ್ವ ಕುಂಬಾರ, ಶಾಂತಾ ಹಂಗರಗಿ, ಬಂಗಾರೆವ್ವ ಪಡಶೆಟ್ಟಿ, ಶಾಂತಾ ನಾಯಕ, ಮಹಾದೇವಿ ಕುಂಬಾರ, ಪಾರವ್ವ ಪಡಶೆಟ್ಟಿ  ಉಪಸ್ಥಿತರಿದ್ದರು. ಆಲಮಟ್ಟಿ ವರದಿ

ಆಲಮಟ್ಟಿ:
ಸಮೀಪದ ವಂದಾಲದಲ್ಲಿ ಸುಭಾಷ ಯುವಕ ಮಂಡಳ ಕಾರ್ಯಾಲಯದ ಎದುರು ಪ್ರತಿಷ್ಠಾಪಿಸಿ ರುವ ಗಾಂಧಿ ಪುತ್ಥಳಿಗೆ ಪೂಜೆ ಸಲ್ಲಿಸಿ ಗಾಂಧಿ ಜಯಂತಿ ಆಚರಿಸಲಾಯಿತು.ವಂದಾಲ ಗ್ರಾಪಂ ಅಧ್ಯಕ್ಷ ಬಸವರಾಜ ಹುಲಿಮನಿ ಮಾತನಾಡಿ, ಸರಳತೆಯ ಸಂಕೇತವಾಗಿರುವ ಗಾಂಧೀಜಿಯವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಗಾಂಧಿ ಜಯಂತಿ ಅಂಗವಾಗಿ ಯುವಕ ಸಂಘದ ವತಿಯಿಂದ ಗ್ರಾಮ ಸ್ವಚ್ಛತಾ ಆಂದೋಲನ ನಡೆಸ ಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಗುರುಸಂಗಯ್ಯ ಚಿಕ್ಕಮಠ, ಡಿ.ಎಸ್. ತಿಮ್ಮೋಪೂರ, ಹನುಮಂತ ಬಳವಾಟ, ಸುಭಾಸ ಯುವಕ ಮಂಡಳ ಅಧ್ಯಕ್ಷ ಈರಣ್ಣ ದಡ್ಡಿ,  ಬಸವರಾಜ ಇಜೇರಿ, ನಾಗೇಶ ಬಸರಕೋಡ, ರಾಚು ಹುಬ್ಬಳ್ಳಿ, ಮಲ್ಲಪ್ಪ ಕುಂಬಾರ, ವಿಜಯಕುಮಾರ ಹೆಬ್ಬಾಳ ಮೊದಲಾದವರಿದ್ದರು.  ತಾಳಿಕೋಟೆ ವರದಿ

ತಾಳಿಕೋಟೆ:
ಸತ್ಯ- ಶಾಂತಿ- ಅಹಿಂಸೆ ಗಳೆಂಬ ಮಂತ್ರದಂಡವು  ಬ್ರಿಟೀಷ್‌ರಿಂದ ಭಾರತಕ್ಕೆ ಸ್ವಾತಂತ್ರ್ಯ ಕೊಡಲು ನೆರವಾದವು ಇವುಗಳನ್ನು ಕಟ್ಟುನಿಟ್ಟಾಗಿ ಆಚರಿಸಿದವರು ಗಾಂಧೀಜಿ ಎಂದು ಮಿಲತನಗರ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋ ಪಾಧ್ಯಾಯಿನಿ ಶಾಂತಾ ಕುಪ್ಪಸ್ತ ಹೇಳಿದರು.ಮಂಗಳವಾರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ  ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಿಆರ್‌ಪಿ ಪಿ.ಮುಲ್ಲಾ ಪಾಲ್ಗೊಂಡಿದ್ದರು.  ಎಸ್‌ಡಿಎಂಸಿ ಅಧ್ಯಕ್ಷ ಫಕೀರುದ್ದಿನ ಜಾನಬಿ, ಶಿಕ್ಷಣ ಸಂಯೋಜಕ ಎಸ್.ಎಸ್. ಗಡೇದ, ಉರ್ದು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಎಂ. ಸೌದಾಗರ, ಎಫ್.ಎ.ಚೌಧರಿ, ಎಸ್. ಎಂ.ಆಲಮೇಲ, ಎಸ್.ಎನ್.ಪಾಟೀಲ ಆಗಮಿಸಿದ್ದರು. ಶಿಕ್ಷಕಿ ಲಕ್ಷ್ಮಿ ಇವಣಿ ಸ್ವಾಗತಿಸಿದರು. ಪಿ.ಜಿ.ವಾಲಗದ ನಿರ್ವಹಿಸಿದರು. ಬೋರಮ್ಮ ಚೌಧರಿ ವಂದಿಸಿದರು.`ಆದರ್ಶ ಮೈಗೂಡಿಸಿಕೊಳ್ಳಿ~

ಸಿಂದಗಿ:
ರಾಷ್ಟ್ರೀಯ ಮಹಾಪುರುಷರ ಭಾವಚಿತ್ರಗಳನ್ನು ಪೂಜಿಸಿದಾಕ್ಷಣ ಜಯಂತಿ ಆಚರಣೆ ಸಾರ್ಥಕವಾಗಲಾರದು. ಅದು ಕಾಟಾಚಾರದ ಆಚರಣೆ ಆಗುತ್ತದೆ. ಮಹಾತ್ಮ ಗಾಂಧೀಜಿ ಮತ್ತು ಲಾಲ ಬಹಾದ್ದೂರ ಶಾಸ್ತ್ರೀಜಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡಾಗಲೇ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತ್ಯುತ್ಸವ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಗಾಂಧೀಜಿ ಅವರ ಸತ್ಯಾಗ್ರಹ ಪರಿಕಲ್ಪನೆ ಇಂದು ವಿರೂಪ ಗೊಳ್ಳುತ್ತಿದೆ. ಬರೀ ಹಕ್ಕಿಗಾಗಿ ಸತ್ಯಾಗ್ರಹ ನಡೆದಿದೆ. ಕರ್ತವ್ಯ ಮರೆಯಾಗುತ್ತಲಿದೆ. ಈ ಬಗ್ಗೆ ಆತ್ಮಾವಲೋಕನ ಅಗತ್ಯ.ಪ್ರಸ್ತುತ ರಾಜಕೀಯ ವ್ಯವಸ್ಥೆಗೆ, ರಾಜಕಾರಣಿಗಳಿಗೆ ಶಾಸ್ತ್ರೀಜಿ ಅವರ ಸರಳತೆ, ಪ್ರಾಮಾಣಿಕತೆ ಅನುಕರಣೀಯ ವಾಗಿವೆ ಎಂದು ತಿಳಿಸಿದರು.ಇನ್ನೊಬ್ಬ ಮುಖ್ಯ ಅತಿಥಿ ಶಾಸಕ ರಮೇಶ ಭೂಸನೂರ, ಗಾಂಧೀಜಿ ಗ್ರಾಮ ಸ್ವರಾಜ್ಯ ಕಲ್ಪನೆ ಸಾಕಾರ ಗೊಳ್ಳಲು ಜನಪ್ರತಿನಿಧಿಗಳು ಪ್ರಾಮಾ ಣಿಕವಾಗಿ ಕಾರ್ಯ ನಿರ್ವಹಿಸಬೇಕು. ಇಂದಿನ ಜನಪ್ರತಿನಿಧಿಗಳಿಗೆ ಶಾಸ್ತ್ರೀಜಿ ಮಾದರಿ ಎಂದರು.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಂ.ಎಸ್.ಮಠ , ಪೋಲಿಸ್ ಅಧಿಕಾರಿ ಚಿದಂಬರ್ ವಿ.ಎಂ  ಮಾತನಾಡಿದರು. ತಹಶೀಲ್ದಾರ ಡಾ.ಶಂಕ್ರಣ್ಣ ವಣಕ್ಯಾಳ  ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕ ಎ.ಎ.ಮಾಲಗಾರ ಅವರು `ರಘುಪತಿ ರಾಘವ ರಾಜಾರಾಂ...~ ಎಂಬ ಗಾಂಧೀಜಿಗೆ ಇಷ್ಟವಾದ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಕಂದಾಯ ಅಧಿಕಾರಿ ಡಿ.ಎಸ್.ನಾಗಠಾಣ ಸ್ವಾಗತಿಸಿದರು. ಅಧ್ಯಾಪಕ ಎಸ್.ಬಿ.ಚೌಧರಿ ನಿರೂಪಿಸಿ ವಂದಿಸಿದರು.`ದೇಶದ ಕಣ್ಮಣಿಯಾಗ್ದ್ದಿದರು~

ಇಂಡಿ :
ಗಾಂಧೀಜಿಯವರು ದೇಶದ ಜನತೆಯ ಕಣ್ಮಣಿಯಾಗಿದ್ದರು. ಅವರು ಒಬ್ಬ ವ್ಯಕ್ತಿಯಾಗಿರದೇ ಶಕ್ತಿಯ ಮೂಲವಾಗಿದ್ದರು ಎಂದು ತಹಶೀಲ್ದಾರ ಡಾ. ಸಿದ್ದು ಹುಲ್ಲೊಳ್ಳಿ ಅಭಿಪ್ರಾಯ ಪಟ್ಟರು.ತಹಶೀಲ್ದಾರ ಕಚೇರಿಯ ಆವರಣ ದಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲಬಹಾದ್ದೂರ್ ಶಾಸ್ತ್ರಿ ಅವರ ಜಯಂತ್ಯುತ್ಸವವದ ಅಂಗವಾಗಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.   ಲಾಲಬಹ್ದ್ದಾದೂರ ಶಾಸ್ತ್ರಿ ಅವರು ಭಾರತದ ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಸತತ ಪರಿಶ್ರಮದಿಂದ ಭಾರತದ 2ನೇ ಪ್ರಧಾನಮಂತ್ರಿಗಳಾಗಿ ಸರಳತೆ, ಸಜ್ಜನಿಕೆ, ಶಿಸ್ತಿಗೂ ಪ್ರಸಿದ್ಧರಾಗಿದ್ದರು. ಇಂತಹ ಮಹಾನ್ ನಾಯಕರ ನಡೆ, ನುಡಿ, ವಿಚಾರಗಳು, ಅಹಿಂಸೆ, ಸತ್ಯ, ತ್ಯಾಗಮಯಿ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಸ್ವಾರ್ಥ ಸೇವೆ ಪ್ರತಿಯೊಬ್ಬನಲ್ಲಿ ಇರಬೇಕಾದ ಗುಣಗಳು  ಎಂದರು.ಉಪ ಕಂದಾಯ ವಿಭಾಗಾಧಿಕಾರಿ ಬಿ.ಕೆ.ಶಿವಕುಮಾರ, ತಾ.ಪಂ.ಅಧ್ಯಕ್ಷೆ ಗುರುಲಿಂಗವ್ವ ಗಂಗನಳ್ಳಿ, ಉಪಾಧ್ಯಕ್ಷೆ ದಾನಮ್ಮ ಬಿರಾದಾರ, ಪುರಸಭೆಯ ಅಧ್ಯಕ್ಷ ದೇವೇಂದ್ರ ಕುಂಬಾರ, ಪ್ರಾಚಾರ್ಯ ಐ.ಬಿ. ಸುರಪುರ, ಸಾಹಿತಿ ಧಾನಪ್ಪ ಬಗಲಿ, ಪುರಸಭೆಯ ಮಾಜಿ ಉಪಾಧ್ಯಕ್ಷ ಪ್ರದೀಪ ಮೂರಮನ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಹತ್ತಳ್ಳಿ, ಸಮನ್ವ ಯಾಧಿಕಾರಿ ಎಚ್.ಎ.ಇಂಡೀಕರ, ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಎಸ್.ಜಿ. ಕಗ್ಗೋಡ  ಭಾಗವಹಿಸಿದ್ದರು.ನಂತರ  ಗಾಂಧೀಜಿ ಮತ್ತು  ಶಾಸ್ತ್ರೀಜಿ ಅವರ ಭಾವಚಿತ್ರಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ವಿಜಾಪುರ: ಕಾಂಗ್ರೆಸ್ ಕಚೇರಿ

ವಿಜಾಪುರ:
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜನ್ಮ ದಿನಾಚರಣೆಯಲ್ಲಿ ಪಕ್ಷದ ಮುಖಂಡರಾದ ವೈಜನಾಥ ಕರ್ಪೂರಮಠ, ಡಿ.ಎಚ್. ಕಲಾಲ, ಹಾಸಿಂಪೀರ ವಾಲಿಕಾರ, ಚಾಂದಸಾಬ ಗಡಗವಾಲ, ಎನ್.ಆರ್. ಪಂಚಾಳ, ವಸಂತ ಹೊನಮೋಡೆ, ಭಿಮವ್ವ ಬಿಸನಾಳ, ಹಸೀನಾ ಶೇಖ, ಚನ್ನಬಸಪ್ಪ ನಂದರಗಿ, ರಫಿಕ್ ಬಾಗವಾನ, ಜ್ಯೋತಿರಾಮ ಪವಾರ, ಸುರೇಶ ಗೊಣಸಗಿ, ಐ.ಎಂ. ಇಂಡಿಕರ, ರಜಾಕ್ ಕುಮಸಗಿ ಇತರರು ಪಾಲ್ಗೊಂಡಿದ್ದರು.ಶಾಸ್ತ್ರಿ ಪುತ್ಥಳಿಗೆ ಬೆಳ್ಳುಬ್ಬಿ ನಮನ

ಆಲಮಟ್ಟಿ:
ಲಾಲಬಹಾದ್ದೂರ್ ಶಾಸ್ತ್ರಿ ಸಾಗರ ಎಂದೇ ನಾಮಕರಣ ಗೊಂಡಿರುವ ಆಲಮಟ್ಟಿ ಜಲಾಶಯದ ಸಮೀಪ ಇರುವ ಲಾಲಬಹಾದ್ದೂರ ಶಾಸ್ತ್ರಿ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಪೂಜೆ ಸಲ್ಲಿಸಿದರು.ನಂತರ ಮಾತನಾಡಿದ ಬೆಳ್ಳುಬ್ಬಿ, ಗಾಂಧೀಜಿಯವರಂತೆಯೇ ವಿಶಾಲ, ಸಹೃದಯ ಹೊಂದಿದ ಶಾಸ್ತ್ರೀಜಿ ಕೂಡಾ ಸರಳಜೀವಿಗಳು, ಅವರ ಘೋಷಣೆ “ಜೈ ಜವಾನ ಜೈ ಕಿಸಾನ” ಎಂಬಂತೆಯೇ ಅವರು ರೈತರ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದರು.ಈ ಸಂದರ್ಭದಲ್ಲಿ ಜಿಪಂ ಸದಸ್ಯ ಶಿವಾನಂದ ಅವಟಿ, ತಾಪಂ ಸದಸ್ಯೆ ಫಾತಿಮಾ ಬಾಗಲಕೋಟೆ, ಮುಖ್ಯ ಎಂಜಿನೀಯರ್ ಬಿ. ಅನಂತರಾಮು, ಅಧಿಕ್ಷಕ ಎಂಜಿನೀಯರ್ ವಿ.ಕೆ. ಪೋತದಾರ, ಚವ್ಹಾಣ, ತಿರಮೂರ್ತಿ, ವಿ.ಜಿ. ಕುಲಕರ್ಣಿ,ಅಬುಲ್ ಹಸನ್ ಸೇರಿದಂತೆ ಕೆಬಿಜೆಎನ್‌ಎಲ್ ಅಧಿಕಾರಿ ಗಳು ಹಾಗೂ ಮುಖಂಡರಾದ ಅಶೋಕ ಉಪ್ಪಾರ, ವೈ.ಎಚ್. ನಾಗಣಿ, ಮಹಾಂ ತೇಶ ಹಿರೇಮಠ ಮೊದಲಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry