ಸಬ್‌ಕೋ ಸನ್ಮತಿ ದೇ ಭಗವಾನ್..

7

ಸಬ್‌ಕೋ ಸನ್ಮತಿ ದೇ ಭಗವಾನ್..

Published:
Updated:

ಹಾಸನ: ದೇಶ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ದೇಶದ ಜನರ ಮನಸ್ಸಿನಲ್ಲಿ ಇಂದಿಗೂ ಮಹಾತ್ಮರಾಗಿ ಉಳಿದಿದ್ದಾರೆ. ಅವರ ಅಹಿಂಸಾ ತತ್ವ ಇಂದಿನ ಯುವ ಪೀಳಿಗೆ ಅನುಸರಿಸಬೇಕು ಎಂದು ಶಾಸಕ ಎಚ್.ಎಸ್.ಪ್ರಕಾಶ್ ಅಭಿಪ್ರಾಯಪಟ್ಟರು.ನಗರದಲ್ಲಿ ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಮಹಾತ್ಮಗಾಂಧಿಯವರ 144ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ, ಉಪಾಧ್ಯಕ್ಷೆ ಸುಲೋಚನಾ ರಾಮಕೃಷ್ಣ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಹುಡಾ ಅಧ್ಯಕ್ಷ ನವಿಲೇ ಅಣ್ಣಪ್ಪ, ರಾಜ್ಯ ಸಭಾ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಎಸ್‌ಪಿ ಅಮಿತ್‌ಸಿಂಗ್, ಅಪರ ಜಿಲ್ಲಾಧಿಕಾರಿ ಗೋಪಾಲಕೃಷ್ಣ , ಮುಸ್ಲಿಂ ಧರ್ಮಗುರು ಮಹಮ್ಮದ್ ರಿಜ್ವಾನ್, ಕ್ರಿಶ್ಚಿಯನ್ ಧರ್ಮಗುರು ಜಾರ್ಜ್ ಅಂಬ್ರದೆ , ಪರಮೇಶ್ವರ ಭಟ್, ಸರಸ್ವತಮ್ಮ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.`ಗ್ರಾಮ ಸ್ವರಾಜ್ಯ ಕನಸು ನನಸಾಗಿಸಿ~


ನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ, 9ನೇ ವಾರ್ಡ್‌ನ ಹಿರಿಯ ನಾಗರಿಕರ ವೇದಿಕೆ, ಹಾಗೂ ಹಾಸನ ಫ್ರೆಂಡ್ಸ್ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಅಸೋಸಿಯೇಷನ್ ಸಹಯೋಗದಲ್ಲಿ ಮಂಗಳವಾರ ಹಾಸನದ ಎಂ.ಜಿ.ರಸ್ತೆಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಪ್ರತಿಮೆ ಅನಾವರಣ ಕಾರ್ಯಕ್ರಮ ಆಯೋಜಿಸಲಾಯಿತು.ಗಾಂಧೀಜಿ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಶಾಸಕ ಎಚ್.ಡಿ. ರೇವಣ್ಣ ಗಾಂಧೀಜಿ ಜನ್ಮದಿನಾಚರಣೆಯಂದು ಅವರ ಪ್ರತಿಮೆ ಅನಾವರಣ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮೇಧಾವಿ ಮಹಾತ್ಮಗಾಂಧೀಜಿ ಅವರು ಅನುಸರಿಸಿದ ಅಹಿಂಸೆ ಹಾಗೂ ಆದರ್ಶದ ದಾರಿಯಲ್ಲಿ ದೇಶದ ಯುವಜನತೆ ಸಾಗಬೇಕು. ಅವರ ಕನಸಾದ ಗ್ರಾಮಸ್ವರಾಜ್ ನನಸಾಗಿಸಲು ಶ್ರಮಿಸಬೇಕು ಎಂದರು.ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮತ್ತಿತರರು ಭಾಗವಹಿಸಿದ್ದರು.

ಜಿಲ್ಲಾ ಕಾಂಗ್ರೆಸ್ ಕಚೇರಿ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿರೋಧಪಕ್ಷದ ನಾಯಕಿ ಮೋಟಮ್ಮ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಶಿವರಾಂ, ಲಲಿತಮ್ಮ, ಝುಲ್‌ಫಿಕರ್,ಡಾ.ಮುನಿಸ್ವಾಮಿ ಗಾಂಧೀಜಿ ಭಾವಚಿತ್ರಕ್ಕೆ ನಮಿಸಿದರು.ಜಿಲ್ಲಾ ಜೆಡಿಎಸ್ ಕಚೇರಿ:  ಮಹಾತ್ಮಗಾಂಧೀಜಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾಪಂಚಾಯಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ , ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಜವರೇಗೌಡ,ಯುವ ಘಟಕದ ಕಾರ್ಯದರ್ಶಿ ರಘು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ನಮನ ಸಲ್ಲಿಸಿದರು.  ನನಸಾಗದ ರಾಮರಾಜ್ಯ: ವಿಷಾದ

ಹೊಳೆನರಸೀಪುರ: ಮಹಾತ್ಮಾಗಾಂಧಿ ಕಂಡ ರಾಮರಾಜ್ಯ ದೇಶದಲ್ಲಿ ಇನ್ನೂ ಸಾಧ್ಯವಾಗಲಿಲ್ಲ. ಯುವಜನರು ಗಾಂಧಿ ನೀಡಿದ ಸಂದೇಶವನ್ನು ಜಾರಿಗೆ ತಂದಿದ್ದರೆ, ದೇಶದಲ್ಲಿ ಈ ವೇಳೆಗೆ ರಾಮರಾಜ್ಯ ಸ್ಥಾಪನೆ ಆಗುತ್ತಿತ್ತು ಎಂದು ಉಪನ್ಯಾಸಕ ಆನಂದ್ ಅಭಿಪ್ರಾಯಪಟ್ಟರು.ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಿದ್ದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಚೌಡಯ್ಯ ಕಟ್ನವಾಡಿ, ದೈಹಿಕ ಶಿಕ್ಷಣ ಶಿಕ್ಷಕ ನಂದೀಶ್ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಕೆ.ಸಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಡಿ.ಇಡಿ ವಿಭಾಗದ ಪ್ರಾಂಶುಪಾಲ ನಾಗೇಂದ್ರ ಪ್ರಸಾದ್, ಗಣಿತ ಶಿಕ್ಷಕರಾದ ಬಾಸ್ಕರ್, ಶಿಕ್ಷಕ ಪ್ರಕಾಶ್ ಇದ್ದರು.ಪಠ್ಯಪುಸ್ತಕದಲ್ಲಿ ಗಾಂಧೀಜಿ ಚಿಂತನೆ ಅಗತ್ಯ: ಪುಟ್ಟೇಗೌಡ

ಚನ್ನರಾಯಪಟ್ಟಣ: ಶಾಲಾ-ಕಾಲೇಜುಗಳ ಪಠ್ಯಪುಸ್ತಕದಲ್ಲಿ ಮಹಾತ್ಮಗಾಂಧೀಜಿ ಅವರ ಚಿಂತನೆಯ ಮತ್ತಷ್ಟು ಅಂಶವನ್ನು ಪರಿಣಾಮಕಾರಿಯಾಗಿ ಸೇರಿಸಬೇಕು ಎಂದು ಶಾಸಕ ಸಿ.ಎಸ್. ಪುಟ್ಟೇಗೌಡ ಮಂಗಳವಾರ ಇಲ್ಲಿ ತಿಳಿಸಿದರು.ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ `ಗಾಂಧಿ ಜಯಂತಿಯಂದು ಮಾತನಾಡಿದರು.

ದಾಸಪುರ ಗ್ರಾಮದ ಚರ್ಚ್‌ಪಾದ್ರಿ ಅಂತೋನಿರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ರಾಮಕೃಷ್ಣೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಮುಸ್ಲಿಂ ಮೌಲ್ವಿ ಮಹಮದ್ ಸಾದಿಕ್, ಸುಬ್ಬಣ್ಣ, ತಹಶೀಲ್ದಾರ್ ಎಚ್.ಎಸ್. ಸತೀಶ್‌ಬಾಬು ಮಾತನಾಡಿದರು. ಪುರಸಭಾಧ್ಯಕ್ಷ ಸಿ.ಎನ್. ಮೂರ್ತಿ, ಮುಖ್ಯಾಧಿಕಾರಿ ಎಚ್.ಎಸ್. ಚಂದ್ರಶೇಖರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಚ್.ಎನ್. ಲೋಕೇಶ್, ಜಿಲ್ಲಾ ಪಂಚಾಯಿತಿ ಸದಸ್ಯ     ಎನ್.ಡಿ.ಕಿಶೋರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ನಿಂಗರಾಜಪ್ಪ ಇದ್ದರು.ಗಾಂಧಿವತ್ತದಲ್ಲಿ ಆಚರಣೆ: ಇಲ್ಲಿನ ಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಪುಷ್ಪ ಅರ್ಪಿಸಿ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು. ನಿರ್ಮಲ, ಶಾಲಿನಿ ವಿದ್ಯಾಶಾಲೆ ಮಕ್ಕಳು ಭಾಗವಹಿಸಿದ್ದರು. ನಿವೃತ್ತ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಚ್.ಎಂ.ಗೌಡಯ್ಯ, ಉಪನ್ಯಾಸಕ ಪ್ರಕಾಶ್, ಕನ್ನಡಾಂಬೆಯ ಯುವಕ ಸಂಘದ ಅಧ್ಯಕ್ಷ ಎ.ಸಿ. ಆನಂದ್‌ಕುಮಾರ್, ಕಾರ್ಯ       ದರ್ಶಿ ರವೀಂದ್ರ, ದಿನೇಶ್ ಇದ್ದರು.`ಗಾಂಧಿ ಆದರ್ಶ ಮಾದರಿಯಾಗಲಿ~


ಆಲೂರು: ಸಮಾನತೆ ಮತ್ತು ಮಾನವೀಯತೆ ಪ್ರತಿಪಾದಿಸಿದ ಗಾಂಧೀಜಿ ಅವರ ಚಿಂತನೆ ಅರ್ಥಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಡಾ.ಎಂ.ಇ.ಜಯರಾಜ್ ತಿಳಿಸಿದರು.ಪಟ್ಟಣದ ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಮಂಜೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು.ನಿವೃತ್ತ ಶಿಕ್ಷಣಾಧಿಕಾರಿ ಎಂ.ಬಿ.ವಿಜಯಕಾಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸುಬ್ಬಶೆಟ್ಟಿ, ಶಿಕ್ಷಕ ಟೋನಿ ಕೆ.ವಯೋಗ್, ರಮೇಶ್ ವಿದ್ಯಾರ್ಥಿಗಳಾದ ರಕ್ಷಿತ್‌ಕುಮಾರ್, ಮತ್ತು ದಾಕ್ಷಾಯಿಣಿ ಮಾತಾಡಿದರು.

ಉಪನ್ಯಾಸಕ ಲಕ್ಷ್ಮೀಶ್ ನಿರೂಪಿಸಿ, ರಾಕೇಶ್ ಸ್ವಾಗತಿಸಿ, ಶಿಕ್ಷಕ ಪ್ರದೀಪ್ ವಂದಿಸಿದರು.ಗಾಂಧಿಗೆ ಪುಷ್ಪ ನಮನ


ಸಕಲೇಶಪುರ: ತಾಲ್ಲೂಕಿನ ವಿವಿಧೆಡೆ ಮಂಗಳವಾರ ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಣೆ ನಡೆಯಿತು.

ಪಟ್ಟಣದ ಕಲ್ಲರ್ ಕೆ.ಜಿ. ಶಾಲೆಯಲ್ಲಿ ಮಹಾತ್ಮಗಾಂಧಿ ಭಾವಚಿತ್ರಕ್ಕೆ ವಿಶೇಷವಾಗಿ ಪುಷ್ಪಾಲಂಕಾರ ಮಾಡಲಾಗಿತ್ತು.ವಿದ್ಯಾರ್ಥಿಗಳು ಮೇಣದ ಬತ್ತಿ ಹಿಡಿದು ಗಾಂಧೀಜಿಗೆ ಗೌರವ ಸಮರ್ಪಿಸಿದರು. ಮುಖ್ಯ ಶಿಕ್ಷಕಿ ಲೈಲಾ ಹಾಗೂ ಸಹ ಶಿಕ್ಷಕರು ವಿದ್ಯಾರ್ಥಿಗಳಿಗೆ ಗಾಂಧಿ ವಿಚಾರಗಳನ್ನು ಚಿತ್ರಗಳ ಮೂಲಕ ಮನವರಿಕೆ ಮಾಡಿಕೊಟ್ಟರು.ಜೆಎಸ್‌ಎಸ್ ಕಾಲೇಜು: ಕೌಡಹಳ್ಳಿ ಜೆಎಸ್‌ಎಸ್ ಡಿ.ಇಡಿ, ಬಿಇಡಿ, ಪಿಯುಸಿ ಹಾಗೂ ನರ್ಸಿಂಗ್ ಕಾಲೇಜುಗಳಲ್ಲಿ ಮಾಜಿ ಸೈನಿಕ ಪವಿತ್ರನ್ ಅವರನ್ನು ಸನ್ಮಾನ ಮಾಡುವ ಮೂಲಕ ಗಾಂಧಿ ಜಯಂತಿ ಆಚರಣೆ ಮಾಡಿದರು.ಉಪನ್ಯಾಸಕ ರಾಜಶೇಖರ್ ಗಾಂಧಿ ವಿಚಾರಧಾರೆ ತಿಳಿಸಿದರು. ಸಂಸ್ಥೆಯ ಸ್ಥಳೀಯ ಅಧೀಕ್ಷಕ ವಿ.ನಾಗರಾಜ್, ಜೆಎಸ್‌ಎಸ್ ಬಿ.ಇಡಿ ಪ್ರಾಂಶುಪಾಲ ಡಾ.ಸುರೇಶ್, ಡಿ.ಇಡಿ ಪ್ರಾಂಶುಪಾಲ ಎನ್.ಪಿ.ಸತೀಶ್ ಹಾಗೂ ಉಪನ್ಯಾಸಕರು ಇದ್ದರು.ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ವಿದ್ಯಾರ್ಥಿನಿಯರ ಪಿಯುಸಿ ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ವಿದ್ಯಾರ್ಥಿಗಳು ಕಾಲೇಜು ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಗಾಂಧಿ ಜಯಂತಿ ಆಚರಿಸಿದರು.ಆಕ್ಸಫರ್ಡ್ ಶಾಲೆ, ರೋಟರಿ ಶಾಲೆ, ಸಂತ ಜೋಸೆಫರ್ ಪ್ರೌಢಶಾಲೆ, ಪುರಸಭೆ, ಸಾಯಿರಾಂ ಪಾಲಿ ಕ್ಲಿನಿಕ್ ವೈದ್ಯ ಡಾ.ಎಚ್.ಆರ್‌ನಾರಾಯಣಸ್ವಾಮಿ ಹಾಗೂ ದಲಿತ ಕ್ರಿಯಾ ಸಮಿತಿ ಸದಸ್ಯರು ತಾಲ್ಲೂಕಿನ         ಎಚ್.ವಿ.ಹಳ್ಳಿ ಗ್ರಾಮದಲ್ಲಿ ನೇತ್ರ ಉಚಿತ ಚಿಕಿತ್ಸಾ ಶಿಬಿರ ಹಾಗೂ ಆರೋಗ್ಯ ತಪಾಸಣೆ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳ ವಿತರಣೆ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry