ಸಭಾಂಗಣ ನಿರ್ಮಾಣ: ಭೂಮಿಪೂಜೆ

7

ಸಭಾಂಗಣ ನಿರ್ಮಾಣ: ಭೂಮಿಪೂಜೆ

Published:
Updated:

ಮುನಿರಾಬಾದ್‌: ಸಮೀಪದ ಬೇವಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿರ್ಮಿಸಲು ಸಭಾಂಗಣ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ಅಡಗಿ ಬುಧವಾರ ಭೂಮಿಪೂಜೆ ನೆರವೇರಿಸಿದರು.ಕಿರ್ಲೋಸ್ಕರ್‌ ಕಾರ್ಖಾನೆಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ನೀಡಿದ ₨10 ಲಕ್ಷ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಜತೆಗೆ 2 ಕೋಣೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸಮಾರಂಭ ನಡೆಸಲು ಅನುಕೂಲವಾಗ ಲಿದೆ ಎಂದು ಟ್ರಸ್ಟ್‌ ಪ್ರತಿನಿಧಿ ಉಧವ್‌ ಕುಲಕರ್ಣಿ ಮಾಹಿತಿ ನೀಡಿದರು.ಇದೇ ವೇಳೆ, ಸರ್ಕಾರದಿಂದ ಉಚಿತ ವಾಗಿ ನೀಡುವ ಸೈಕಲ್‌ಗಳನ್ನು 8ನೇ ತರಗತಿ ಮಕ್ಕಳಿಗೆ ವಿತರಿಸಲಾಯಿತು.

ಶಿಕ್ಷಕರ ಸಂಘದ ಪ್ರತಿನಿಧಿ ರಾಮಣ್ಣ ಮಜ್ಜಿಗಿ, ಸಂಪನ್ಮೂಲ ವ್ಯಕ್ತಿ ಉಮೇಶ ಸುರ್ವೆ ಮಾತನಾಡಿದರು. ಶಾಲಾ ಅಭಿವೃದ್ಧಿ, ಸಮಿತಿ ಅಧ್ಯಕ್ಷ ನಿಂಗಜ್ಜ ಬಾದರಬಂಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಭೀಮಣ್ಣ ಮೂಲಿಮನಿ, ಬಸವರಾಜ ಸಾಹುಕಾರ, ಎಸ್‌ಡಿಎಂಸಿ ಸದಸ್ಯರಾದ ಮೌಲಾಸಾಬ್‌, ತಿಮ್ಮಣ್ಣ, ಬೆಳ್ಳೆಪ್ಪ ಅಡಗಿ, ಯಂಕನಗೌಡ, ಮಂಜುನಾಥ ಕಾಮನೂರ ಇತರರು ಇದ್ದರು. ಮುಖ್ಯಗುರು ಮಾರುತಿ ಆರೇರ ಸ್ವಾಗತಿಸಿ, ಅಶೋಕ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry