ಶುಕ್ರವಾರ, ನವೆಂಬರ್ 22, 2019
20 °C

ಸಭಾಪೀಠದಲ್ಲಿ ಕುರಿಯನ್: ಎಡಪಕ್ಷಗಳಿಂದ ಸಭಾತ್ಯಾಗ

Published:
Updated:

ನವದೆಹಲಿ (ಪಿಟಿಐ): ರಾಜ್ಯಸಭೆಯಲ್ಲಿ ಸೋಮವಾರ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಚರ್ಚೆಯಾಗುತ್ತಿದ್ದ ವೇಳೆ ಸಭಾಧ್ಯಕ್ಷ ಪೀಠದಲ್ಲಿ ಉಪಸಭಾಪತಿ ಪಿ.ಜೆ.ಕುರಿಯನ್ ಕುಳಿತು ಚರ್ಚೆ ಆಲಿಸುತ್ತಿದ್ದನ್ನು ವಿರೋಧಿಸಿ, ಎಡಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.ಸಭಾಧ್ಯಕ್ಷ ಸ್ಥಾನದಲ್ಲಿದ್ದ ಇ.ಎಂ.ಸುದರ್ಶನ ನಾಟಿಚಪ್ಪನ್ ಅವರು ನಿರ್ಗಮಿಸುವ ಮುನ್ನ ಉಪಸಭಾಪತಿ ಕುರಿಯನ್ ಅವರಿಗೆ ಅಧ್ಯಕ್ಷ ಸ್ಥಾನವನ್ನು ವಹಿಸಿದರು. ಈ ಸಂದರ್ಭದಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಚರ್ಚೆ ನಡೆಯುತ್ತಿತ್ತು.ಕುರಿಯನ್ ಅವರು ಅಧ್ಯಕ್ಷ ಪೀಠದಲ್ಲಿ ಕುಳಿತ ತಕ್ಷಣ ಎಡಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು.ಅತ್ಯಾಚಾರ ಪ್ರಕರಣಗಳು ರಾಜ್ಯಸಭೆಯಲ್ಲಿ ಚರ್ಚೆ ಯಾಗುವ ವೇಳೆ ಕುರಿಯನ್ ಅವರು ಸಭಾಧಕ್ಷ್ಯ ಪೀಠದಲ್ಲಿ ಕುಳಿತುಕೊಳ್ಳಬಾರದು ಎಂದು ಒತ್ತಾಯಿಸಿ ಎಡ ಪಕ್ಷಗಳ  ಸದಸ್ಯರು ಸದನ ಆರಂಭಕ್ಕೆ ಮುನ್ನ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ರಾಜೀವ್ ಶುಕ್ಲಾ ಅವರಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.ಕೇರಳದ ಸೂರ್ಯನೆಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕುರಿಯನ್ ಅವರ ಪಾತ್ರವಿಲ್ಲ ಎನ್ನುವುದು ಸ್ಪಷ್ಟವಾಗುವವರೆಗೂ ಅತ್ಯಾಚಾರ ಪ್ರಕರಣಗಳು ಚರ್ಚೆ ನಡೆಯುವ ವೇಳೆ ಸಭಾಧ್ಯಕ್ಷ ಪೀಠದಲ್ಲಿ ಕುಳಿತರೆ ಸಭಾತ್ಯಾಗ ಮಾಡುವುದಾಗಿ ಎಡಪಕ್ಷಗಳ ಸದಸ್ಯರು ಎಚ್ಚರಿಸಿದ್ದಾರೆ.

ಪ್ರತಿಕ್ರಿಯಿಸಿ (+)