ಸಭೆಯಲ್ಲಿ ಸಿಗದ ಕುರ್ಚಿ !

7

ಸಭೆಯಲ್ಲಿ ಸಿಗದ ಕುರ್ಚಿ !

Published:
Updated:

ಚಿಕ್ಕಬಳ್ಳಾಪುರ:  ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಂದಿನಂತೆ ಕುರ್ಚಿಗಳ ಸಮಸ್ಯೆ ಎದುರಾಯಿತು. ಸಭಾಂಗಣದಲ್ಲಿ ವಿವಿಧ ಇಲಾಖೆಗಳಿಂದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಕಾರಣ ಇತರ ಅಧಿಕಾರಿಗಳಿಗೆ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ತಕ್ಷಣಕ್ಕೆ ಕುರ್ಚಿಗಳು ಲಭ್ಯವಾಗಲಿಲ್ಲ.ಕುರ್ಚಿಗಳನ್ನು ತರುವಂತೆ ಕೋರಿದರೂ ಸಭಾಂಗಣದ ಸಿಬ್ಬಂದಿಗಳು, `ಕುರ್ಚಿಗಳ ಕೊರತೆಯಿದೆ. ಎಲ್ಲ ಕುರ್ಚಿಗಳನ್ನು ಇಲ್ಲಿ ಇಡಲಾಗುವುದಿಲ್ಲ. ಒಂದು ವೇಳೆ ಇಟ್ಟರೂ ನಡೆದಾಡಲು ಆಗಲ್ಲ. ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ~ ಎಂದು ಉತ್ತರಿಸಿದರು.ಸಭೆಯಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಧಿಕಾರಿ ಸೇರಿದಂತೆ ಕೆಲವರು ಸಭಾಂಗಣದಿಂದ ಹೊರಗಡೆಯೇ ಉಳಿದುಕೊಂಡಿದ್ದರು. ಸಭಾಂಗಣದ ಪ್ರವೇಶದ್ವಾರದ ಬಳಿ ಕುರ್ಚಿಗಳನ್ನು ಪೂರೈಸಲಾಯಿತಾದರೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಡಚಣೆಯಾಯಿತು.ತೆಲುಗು ಮಾತನಾಡಿದ ಸಚಿವ!

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ಬಹುತೇಕ ಕನ್ನಡದಲ್ಲೇ ಮಾತನಾಡಿದರಾದರೂ ಆಗೊಮ್ಮೆ-ಈಗೊಮ್ಮೆ ಶಾಸಕರೊಡನೆ ತೆಲುಗಿನಲ್ಲಿ ಮಾತನಾಡಿದರು.ಶಾಸಕ ಕೆ.ಪಿ.ಬಚ್ಚೇಗೌಡ ಅವರು ಮಾತನಾಡಿ ಮುಗಿಸಿದ ಕೂಡಲೇ ಶಾಸಕ ಎನ್.ಸಂಪಂಗಿಯವರತ್ತ ನೋಡಿದ ನಾರಾಯಣಸ್ವಾಮಿ, `ಅವರದ್ದು ಆಯಿತು. ಈಗ ನಿಮ್ಮದು ಹೇಳಿ~ ಎಂದರು. ಸಂಪಂಗಿಯವರು ತಮ್ಮ ಸಮಸ್ಯೆಗಳು ಹೇಳುವುದನ್ನು ಮುಂದುವರೆಸಿದಾಗ, `ನಿಮ್ಮಬ್ಬರದ್ದೇ ಹೇಳಿದ್ರೆ ಹೇಗೆ? ಬೇರೆಯವರಿಗೂ ಅವಕಾಶ ಮಾಡಿಕೊಡಿ~ ಎಂದರು. ಸಭೆ ಮುಗಿಯುವವರೆಗೆ ಆಗೊಮ್ಮೆ-ಈಗೊಮ್ಮೆ ಅವರು  ತೆಲುಗಿನಲ್ಲೇ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry