ಬುಧವಾರ, ಮೇ 12, 2021
24 °C

ಸಭೆಯಿಂದ ಹೊರಕ್ಕೆ; ಕಾರಣ ಕೇಳಿ ಅಧ್ಯಕ್ಷ, ಸಿಇಒಗೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತಮ್ಮನ್ನು ಸಂವಿಧಾನ ಬಾಹಿರವಾಗಿ ಸಭೆಯಿಂದ ಹೊರ ಹಾಕಲಾಗಿದೆ ಎಂದು ಜಿ.ಪಂ.ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಆರೋಪಿಸಿದರು.ತಮಗಾದ ಅನ್ಯಾಯದ ಬಗ್ಗೆ ಮಾನವ ಹಕ್ಕುಗಳ ಆಯೋಗ ಹಾಗೂ ಮಹಿಳಾ ಆಯೋಗಗಳಿಗೆ ದೂರು ನೀಡುವುದಾಗಿಯೂ ಅವರು ತಿಳಿಸಿದರು.ನಗರದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಷ್ಮೆಹಡ್ಲು ಹೊಸಕೆರೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ದಂತೆ ನಾನು ಕೇಳಿದ ಪ್ರಶ್ನೆಗೆ ಉತ್ತರಿ ಸದೇ ಜಿ.ಪಂ. ಅಧ್ಯಕ್ಷರು ಏಕಾಏಕಿ ನನ್ನನ್ನು ಹೊರಹಾಕಿದರು. ಇದರ ಬಗ್ಗೆ ಕಾರಣ ತಿಳಿಸುವಂತೆ ಅಧ್ಯಕ್ಷರಿಗೆ ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದೇನೆ ಎಂದರು.ಜಿಲ್ಲಾ ಪಂಚಾಯಿತಿಯ ಎಂಜಿನಿಯ ರಿಂಗ್ ವಿಭಾಗ ಹಾಗೂ ಉಪವಿಭಾಗಾ ಧಿಕಾರಿಗಳು ಕೆರೆ ಅಭಿವೃದ್ಧಿ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ವರದಿ ನೀಡಿದ್ದರೂ, ಅದನ್ನು ಮೀರಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಏನು ಅವಶ್ಯಕತೆ ಇತ್ತು ಎಂದು ಅವರು ಪ್ರಶ್ನಿಸಿದರು.ವೀರಾಜಪೇಟೆ ತಾ.ಪಂ.ಸದಸ್ಯೆ ಮುತ್ತಮ್ಮ ಮಾತನಾಡಿ, ತಾ.ಪಂ. ಸಭೆಯಲ್ಲಿ ಈ ಕಾಮಗಾರಿ ವಿರುದ್ಧ ಪ್ರಸ್ತಾಪವಾಗಿದೆ. ಅದನ್ನು ಲೆಕ್ಕಿಸದೆ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಏಕೆ ಕೈಗೆತ್ತಿಕೊಳ್ಳಲಾಯಿತು ? ಈ ಕೆರೆ ಯಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದರು.ರೇಷ್ಮೆಹಡ್ಲು ಹೊಸಕೆರೆಯಿಂದ ಗಿರಿ ಜನ ಸಮುದಾಯಕ್ಕೆ ಯಾವುದೇ ಪ್ರಯೋಜನವಿಲ್ಲ. ಅದರ ಬದಲು ಕುಡಿಯಲು ನೀರು, ವಾಸಿಸಲು ಮನೆ, ನಡೆದಾಡಲು ರಸ್ತೆ ನೀಡಿದರೆ ಗಿರಿಜನರ ಅಭಿವೃದ್ಧಿಯಾಗುತ್ತಿತ್ತು ಎಂದು ವಿಶ್ಲೇಷಿಸಿದ ಅವರು, ಗಿರಿಜನರಿಗೆ ಬೇಕಾದ ಯೋಜನೆಗಳನ್ನು ಗಿರಿಜನ ರನ್ನು ಕೇಳದೆಯೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೂಪಿಸು ತ್ತಿದ್ದು, ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ತಾ.ಪಂ.ಸದಸ್ಯೆ ಪಂಕಜ ಮಾತನಾಡಿ, ಹೊಸಕೆರೆಯ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸುವ ಸಂದರ್ಭ ಸ್ಥಳೀಯ ಕ್ಷೇತ್ರದ ಜನಪ್ರತಿನಿಧಿಯಾದ ತನ್ನನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.