ಸಮಗ್ರ ತನಿಖೆಗೆ ಕುಟುಂಬ ಒತ್ತಾಯ

7
ನರ್ಸ್ ಜೆಸಿಂತಾ ನಿಗೂಢ ಸಾವು

ಸಮಗ್ರ ತನಿಖೆಗೆ ಕುಟುಂಬ ಒತ್ತಾಯ

Published:
Updated:

ಲಂಡನ್(ಪಿಟಿಐ): ಆಸ್ಟ್ರೇಲಿಯಾದ ರೇಡಿಯೊ ನಿರೂಪಕರ (ಡಿಜೆ) ಹುಸಿ ಕರೆಯ ಹಿನ್ನೆಲೆಯಲ್ಲಿ ಇಲ್ಲಿಯ ಆಸ್ಪತ್ರೆಯ ನರ್ಸ್, ಮಂಗಳೂರು ಮೂಲದ ಜೆಸಿಂತಾ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆದಲ್ಲಿ ಸಂಪೂರ್ಣ ವಿವರಗಳು ಹೊರಬರಲು ಸಾಧ್ಯ ಎಂದು ಕುಟುಂಬದವರು ಒತ್ತಾಯಿಸಿದ್ದಾರೆ.ಸಾವಿಗೆ ಮುನ್ನ ಜೆಸಿಂತಾ ಬರೆದಿಟ್ಟ ಪತ್ರ ಹಲವು ಅನುಮಾನಗಳಿಗೆ ಕಾರಣವಾಗಿದ್ದು `ವಿವರಿಸಲಾಗದ' ಸನ್ನಿವೇಶಗಳು ಆಕೆಯ ಸಾವಿಗೆ ಕಾರಣವಾಗಿರುವ ಸಾಧ್ಯತೆ ಇದೆ. ಹೀಗಾಗಿ ಆಕೆಯ ಕುಟುಂಬದವರಿಗೆ ಸತ್ಯಾಂಶಗಳು ತಿಳಿಯಬೇಕಾಗಿದೆ ಎಂದು ಲೇಬರ್ ಪಕ್ಷದ ಸಂಸದ ಕೀತ್ ವಾಜ್ ಒತ್ತಾಯಿಸಿದ್ದಾರೆ. ಈ ವಿಷಯದಲ್ಲಿ ಜೆಸಿಂತಾ ಕೆಲಸ ಮಾಡುತ್ತಿದ್ದ ಆಸ್ಪತ್ರೆ ಕೂಡಲೇ ಕಾರ್ಯತತ್ಪರವಾಗಬೇಕಿದ್ದು, ಸಂಪೂರ್ಣ ತನಿಖೆ ನಡೆಯಬೇಕಾಗಿದೆ ಎಂದಿದ್ದಾರೆ.ಜೆಸಿಂತಾ ನಿಗೂಢ ಸಾವಿನ ಕುರಿತು ಆಂತರಿಕ ತನಿಖೆ ನಡೆಸುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆಯಾದರೂ, ಇದಕ್ಕೆ ಕುಟುಂಬದವರ ಸಹಮತ ವ್ಯಕ್ತವಾಗಿಲ್ಲ. ಜೆಸಿಂತಾ ಸಾವಿಗೆ ಕಾರಣವಾದ ಅಂಶಗಳ ಕುರಿತು ಆಸ್ಪತ್ರೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಬೇಕಾಗಿದೆ ಎಂಬುದು ಕುಟುಂಬದವರ ಬೇಡಿಕೆಯಾಗಿದೆ. ಈ ಸಂಬಂಧ ಜೆಸಿಂತಾ ಕುಟುಂಬದ ಪ್ರತಿನಿಧಿ ವಾಜ್ ಮಂಗಳವಾರ ಆಸ್ಪತ್ರೆ ಅಧ್ಯಕ್ಷರನ್ನು ಭೇಟಿ ಮಾಡಿ ಸಮಗ್ರ ತನಿಖೆಗೆ ಒತ್ತಾಸಿದರು.

`ಜೆಸಿಂತಾ ಸಾವಿನ ಕುರಿತು ತನಿಖೆ ನಡೆಯುತ್ತಿದೆ ಎಂದಷ್ಟೆ ಆಸ್ಪತ್ರೆ ಅಧ್ಯಕ್ಷರು ತಮಗೆ ತಿಳಿಸಿದರು. ಆದರೆ ಇಷ್ಟು ಮಾತ್ರ ಸಾಕಾಗುವುದಿಲ್ಲ. ಆಕೆಯ ಸಾವಿನ ಕುರಿತು ಪೂರ್ಣ ಹಾಗೂ ಸ್ಪಷ್ಟ ಮಾಹಿತಿ ತಮಗೆ ಬೇಕಾಗಿದೆ' ಎಂದು ವಾಜ್ ತಿಳಿಸಿದರು.ಶವ ರವಾನೆಗೆ ಭಾರತ ಹೈಕಮಿಷನ್ ನೆರವು (ನವದೆಹಲಿ ವರದಿ): ಲಂಡನ್ನಿನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಭಾರತ ಮೂಲದ ನರ್ಸ್ ಜೆಸಿಂತಾ ಸಲ್ಡಾನ ಅವರ ಶವವನ್ನು ಮಂಗಳೂರಿಗೆ ರವಾನಿಸುವ ನಿಟ್ಟಿನಲ್ಲಿ ಭಾರತದ ಹೈಕಮಿಷನ್ ಕಚೇರಿಯು ಜೆಸಿಂತಾ ಅವರ ಪತಿ ಅವರೊಂದಿಗೆ ಸತತ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಹುಸಿಕರೆ ಮಾಡದಂತೆ ತರಬೇತಿ ಪಡೆದಿದ್ದ ನಿರೂಪಕರು

ಮೆಲ್ಬರ್ನ್ (ಪಿಟಿಐ): ಭಾರತೀಯ ಮೂಲದ ನರ್ಸ್ ಜೆಸಿಂತಾ ಅವರ ನಿಗೂಢ ಸಾವಿಗೆ ಕಾರಣರಾದ `2ಡೆ ಎಫ್‌ಎಂ'ನ ರೇಡಿಯೊ ನಿರೂಪಕರು (ಡಿಜೆ), `ಅನುಮತಿ ಪಡೆಯದೇ ಹುಸಿ ಕರೆಗಳನ್ನು ಮಾಡದಂತೆ ತರಬೇತಿ ಪಡೆದಿದ್ದು, ಈಗ ಮೂಕರಂತೆ ನಾಟಕವಾಡುತ್ತಿದ್ದಾರೆ' ಎಂದು ಮಾಧ್ಯಮವೊಂದು ಹೇಳಿದೆ.`ರೇಡಿಯೊ ನಿರೂಪಕರು, ನಿರ್ಮಾಪಕರು ಹಾಗೂ ವಿಷಯ ನಿರ್ವಾಹಕರುಗಳು ಕಡ್ಡಾಯವಾಗಿ ಆರು ತಿಂಗಳಿಗೊಮ್ಮೆ ಶಿಷ್ಟಾಚಾರ ಮತ್ತು ಮಾನದಂಡಗಳ ಕುರಿತು ತಮ್ಮ ಸಂಸ್ಥೆಯಿಂದ ತರಬೇತಿ ಪಡೆದಿದ್ದಾರೆ' ಎಂದು `2ಡೆ ಎಫ್‌ಎಂ' ಅನ್ನು ಉಲ್ಲೇಖಿಸಿ `ದಿ ಏಜ್' ಪತ್ರಿಕೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry