ಬುಧವಾರ, ಜನವರಿ 22, 2020
22 °C

ಸಮಗ್ರ ಹಣದುಬ್ಬರ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಾರ್ಷಿಕ ಸಮಗ್ರ ಹಣದುಬ್ಬರವು ಡಿಸೆಂಬರ್ ತಿಂಗಳಿನಲ್ಲಿ ಎರಡು ವರ್ಷಗಳ ಹಿಂದಿನ ಮಟ್ಟಕ್ಕೆ ಇಳಿದಿದೆ.ಅಗ್ಗದ ಆಹಾರ ಪದಾರ್ಥಗಳಿಂದಾಗಿ  ಡಿಸೆಂಬರ್ ತಿಂಗಳ ಹಣದುಬ್ಬರವು ಶೇ 7.47ರಷ್ಟಾಗಿದೆ. ಇದು ಎರಡು ವರ್ಷಗಳಲ್ಲಿನ ಅತಿ ಕಡಿಮೆ ಪ್ರಮಾಣದ ಹಣದುಬ್ಬರವಾಗಿದೆ.`ಹಣದುಬ್ಬರ ಇಳಿದಿದ್ದರೂ, ತಯಾರಿಕಾ ಸರಕುಗಳ ಬೆಲೆ ಏರಿಕೆಯು ಮಾತ್ರ ಕಳವಳಕಾರಿ ಸಂಗತಿಯಾಗಿದೆ.ಆಹಾರ ಪದಾರ್ಥಗಳು ಮತ್ತು ಪ್ರಾಥಮಿಕ ಸರಕುಗಳ ಬೆಲೆಏರಿಕೆ ಪ್ರಮಾಣ ಕಡಿಮೆಯಾಗಿರುವುದರಿಂದ ಒಟ್ಟಾರೆ ಹಣದುಬ್ಬರ ಇಳಿಕೆಯಾಗಿದೆ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ.ಮಾರ್ಚ್ ತಿಂಗಳಾಂತ್ಯದ ಹೊತ್ತಿಗೆ ಹಣದುಬ್ಬರವು ಶೇ 6ರಿಂದ 7ರ ಮಟ್ಟಕ್ಕೆ ಇಳಿಯಲಿದೆ ಎಂದೂ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಇಳಿಸಲು ಮುಂದಾಗುವ ಮುನ್ನ, ಕಡಿಮೆ ಪ್ರಮಾಣದ ಇಳಿಕೆ ದಾಖಲಿಸಿರುವ ತಯಾರಿಕಾ ರಂಗದ ಹಣದುಬ್ಬರ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಭಿಪ್ರಾಯಪಟ್ಟಿದೆ.ಇದೇ 24ರಂದು ತನ್ನ ಉದರಿ ನೀತಿಯ ತ್ರೈಮಾಸಿಕ ಪರಾಮರ್ಶೆಯಲ್ಲಿ ಬಡ್ಡಿ ದರಗಳನ್ನು ಇಳಿಸುವ ನಿರ್ಧಾರ ಪ್ರಕಟಿಸುವ ಮುನ್ನ, ಆಹಾರ ಮತ್ತು ಸಮಗ್ರ ಹಣದುಬ್ಬರ ಇಳಿಕೆಯನ್ನಷ್ಟೆ ಗಣನೆಗೆ ತೆಗೆದುಕೊಳ್ಳಬಾರದು.ತಯಾರಿಕಾ ರಂಗದ ಹಣದುಬ್ಬರ ಪರಿಸ್ಥಿತಿಯನ್ನೂ ಪರಿಗಣಿಸಬೇಕು ಎಂದು ಸಮಿತಿಯ ಅಧ್ಯಕ್ಷ ಸಿ. ರಂಗರಾಜನ್ ಹೇಳಿದ್ದಾರೆ.ಸಗಟು ಬೆಲೆ ಸೂಚ್ಯಂಕ ಆಧರಿಸಿ ಅಳೆಯಲಾಗುವ ಸಮಗ್ರ ಹಣದುಬ್ಬರವು ನವೆಂಬರ್ ತಿಂಗಳಲ್ಲಿ ಶೇ 9.11ರಷ್ಟು ಮತ್ತು 2010ರ ಇದೇ ಅವಧಿಯಲ್ಲಿ ಶೇ 9.45ರಷ್ಟಿತ್ತು. 2009ರ ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 7.15ರಷ್ಟಿತ್ತು.ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ, ವಾರ್ಷಿಕ ನೆಲೆಯಲ್ಲಿ ತರಕಾರಿಗಳು ಶೇ 34, ಗೋಧಿ ಶೇ 4ರಷ್ಟು ಅಗ್ಗವಾಗಿವೆ. ಆಲೂಗಡ್ಡೆ ಮತ್ತು ಈರುಳ್ಳಿ ಬೆಲೆಗಳೂ ಕ್ರಮವಾಗಿ ಶೇ 35 ಮತ್ತು ಶೇ 60ರಷ್ಟು  ಕಡಿಮೆಯಾಗಿವೆ.ಆದರೆ, ತಯಾರಿಕಾ ಸರಕುಗಳಲ್ಲಿ ಹಣದುಬ್ಬರ ಒತ್ತಡ ಮುಂದುವರೆದಿದ್ದು, ಅವುಗಳ ಬೆಲೆ ವರ್ಷದಿಂದ ವರ್ಷಕ್ಕೆ ಶೇ 7.70ರಷ್ಟು ಏರಿಕೆಯಾಗಿದೆ. ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) ಇವುಗಳು ಶೇ 65ರಷ್ಟು ಪಾಲು ಹೊಂದಿವೆ.ಬಡ್ಡಿ ದರ ಇಳಿಕೆ: ಹಣದುಬ್ಬರ ಇಳಿದಿರುವ ಹಿನ್ನೆಲೆಯಲ್ಲಿ, ಆರ್‌ಬಿಐ ಅಲ್ಪಾವಧಿ ಬಡ್ಡಿ ದರಗಳನ್ನು ತಗ್ಗಿಸುವ ನಿರೀಕ್ಷೆಇದೆ.

ಪ್ರತಿಕ್ರಿಯಿಸಿ (+)