ಮಂಗಳವಾರ, ಮಾರ್ಚ್ 2, 2021
31 °C

ಸಮತೋಲನ ಆಹಾರ, ಸದ್ವಿಚಾರ: ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮತೋಲನ ಆಹಾರ, ಸದ್ವಿಚಾರ: ಸಲಹೆ

ವಿಜಾಪುರ: ‘ಮಕ್ಕಳಿಗೆ ಸಮತೋಲನ ಆಹಾರ ನೀಡಿ, ಅವರಲ್ಲಿ ಸದ್ವಿಚಾರಗಳನ್ನು ಬಿತ್ತಬೇಕು. ಅಂದಾಗ ಮಾತ್ರ ಆ ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸಬಲರಾಗಲು ಸಾಧ್ಯ’ ಎಂದು ಬೆಂಗಳೂರಿನ ತಜ್ಞ ವೈದ್ಯೆ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ ಹೇಳಿದರು.

ಇಲ್ಲಿಯ ಎಸಿಟಿ–ಶಾರದಾ ಪಬ್ಲಿಕ್‌ ಶಾಲೆಯಲ್ಲಿ ಶನಿವಾರ ಜರುಗಿದ ಶಾಲಾ ವಾರ್ಷಿಕೋತ್ಸವ ಹಾಗೂ ‘ಭಾರತ ದರ್ಶನ’ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ಶಾಲೆಯ ಶೈಕ್ಷಣಿಕ ಮೇಲ್ವಿಚಾರಕ, ಎಸಿಟಿ ಅಧ್ಯಕ್ಷ ಡಾ.ಗುರುರಾಜ ಕರ್ಜಗಿ, ಪಾಲಕರು ತಮ್ಮ ಮಕ್ಕಳ ಮಾರ್ಕ್ಸ್ (ಅಂಕ)ಗಳ ಹಿಂದೆ ಬಿದ್ದು ‘ಮಾರ್ಕ್ಸ್‌ವಾದಿ’ಗಳಾಗುವುದು ಬೇಡ. ಮೌಲ್ಯಯುತ ಶಿಕ್ಷಣ ನೀಡಲು ಒತ್ತು ನೀಡಬೇಕು. ಹೆಚ್ಚಿನ ಅಂಕಗಳಿಸುವುದೇ ವಿದ್ಯೆಯ ಮಾನದಂಡವಲ್ಲ ಎಂದರು.ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ, ಶಾಲೆಯ ಅಧ್ಯಕ್ಷ ಸಂ.ಗು.ಸಜ್ಜನ, ಉಪಾಧ್ಯಕ್ಷ ಸಿ.ಎಸ್. ಸಜ್ಜನ, ಪ್ರಾಚಾರ್ಯ ಜಿಮೇಶ್ ಪೌಲ್ ವೇದಿಕೆಯಲ್ಲಿದ್ದರು.ಶಾಲೆಯ ಎಲ್ಲ 486 ವಿದ್ಯಾರ್ಥಿಗಳಿಗೂ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ‘ಭಾರತ ದರ್ಶನ’ ಸಾಂಸ್ಕೃತಿ ಕಾರ್ಯದಲ್ಲಿ ದೇಶದ ಪ್ರಮುಖ ನೃತ್ಯ ಪ್ರಕಾರಗಳಾದ ಕಾಶ್ಮೀರಿ, ಭಾಂಗ್ರಾ, ಗಾರ್ಭಾ, ಕಥಕ್, ಮೋಹಿನಿ ಅಟ್ಟಂ, ಬಿಹು, ಒಡಿಸ್ಸಿ, ನಾಗಾಲ್ಯಾಂಡ್, ಗೋಂಧಳಿ, ಭರತನಾಟ್ಯಂ, ಕುಚಿಪುಡಿ ನೃತ್ಯಗಳು ಗಮನ ಸೆಳೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.