ಸಮನ್ಸ್‌ಗೆ ಕಿಮ್ಮತ್ತು ನೀಡದ ನಶೀದ್

7

ಸಮನ್ಸ್‌ಗೆ ಕಿಮ್ಮತ್ತು ನೀಡದ ನಶೀದ್

Published:
Updated:

ಮಾಲೆ (ಪಿಟಿಐ): ತಾವು ಅಧ್ಯಕ್ಷರಾಗಿದ್ದಾಗ ನ್ಯಾಯಮೂರ್ತಿಯೊಬ್ಬರನ್ನು ಬಂಧಿಸಲು ಹೊರಡಿಸಿದ್ದ ವಿವಾದಾತ್ಮಕ ಆದೇಶದ ಹಿನ್ನೆಲೆಯಲ್ಲಿ ತಮಗೆ ಪೊಲೀಸರು ಜಾರಿಗೊಳಿಸಿರುವ ಸಮನ್ಸ್‌ನ್ನು ಮಾಲ್ಡೀವ್ಸ್ ಪದುಚ್ಯುತ ಅಧ್ಯಕ್ಷ ಮೊಹಮ್ಮದ್ ನಶೀದ್ ತಿರಸ್ಕರಿಸಿದ್ದಾರೆ.ನಶೀದ್ ಅಧ್ಯಕ್ಷರಾಗಿದ್ದಾಗ ನ್ಯಾಯಮೂರ್ತಿಯೊಬ್ಬರನ್ನು ಬಂಧಿಸಲು ಸೇನೆಗೆ ಆದೇಶಿಸಿದ್ದರು. ಈ ಕುರಿತು ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದು ನಶೀದ್ ಹೇಳಿಕೆ ದಾಖಲಿಸಿಕೊಳ್ಳುವ ಸಲುವಾಗಿ ಸಮನ್ಸ್ ಜಾರಿಗೊಳಿಸಿದ್ದಾರೆ.ಆದರೆ, ಈ ಸಮನ್ಸ್‌ಗೆ ತಮ್ಮ ನಾಯಕ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಶೀದ್ ಅವರ ಆಪ್ತ ಮೂಲಗಳು ತಿಳಿಸಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry