ಮಂಗಳವಾರ, ಏಪ್ರಿಲ್ 13, 2021
32 °C

ಸಮಯ ವ್ಯರ್ಥ ಮಾಡಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರದಿಂದ ಯಶವಂತಪುರದವರೆಗೆ ಟಿ-12 ಈಗ ಬಸವನಗುಡಿ ರಸ್ತೆ ಹಾದು ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ಎಡಗಡೆ ತಿರುವು ಪಡೆದು ಟಿ. ಆರ್. ಮಿಲ್ ಬಳಿ ಬಲಗಡೆ ತಿರುವು ಪಡೆದು ಮಾಮೂಲಿನಂತೆ ಸಂಚರಿಸಲಿ.ಈಗ ಸಂಚರಿಸುತ್ತಿರುವುದು ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ಬಲಗಡೆ ತಿರುಗಿ, ಸಿಟಿ ಮಾರುಕಟ್ಟೆ ತಲುಪಿ, ಮೇಲು ಸೇತುವೆಯಲ್ಲಿ ಸಂಚರಿಸಿ, ಸುಲ್ತಾನ್ ರಸ್ತೆಗೆ ಇಳಿದು ಚಾಮರಾಜಪೇಟೆ 1ನೇ ಮುಖ್ಯರಸ್ತೆಯಲ್ಲಿ ತಿರುವು ಪಡೆಯುತ್ತದೆ.

 

ನಂತರ ಮತ್ತೊಂದು ಟಿ. ಆರ್. ಮಿಲ್ ರಸ್ತೆ ತಿರುವು ಪಡೆದು ಮಾಮೂಲಿನಂತೆ ಸಂಚರಿಸುತ್ತಿದೆ. ನಿಗರ್ಮನ ಬಿನ್ನಿ ಮಿಲ್ ಮೂಲಕ ಬಂದು ಚಾಮರಾಜಪೇಟೆಯ ಮೂಲಕ ಹಾದು ಬಸವನಗುಡಿ ರಸ್ತೆ ಮಾಮೂಲಿನಂತೆ ಶ್ರೀನಗರ ತಲುಪಲಿ.ಈಗ ಸಂಚರಿಸುತ್ತಿರುವುದು ರಾಜಾಜಿನಗರ ವಿದ್ಯಾವರ್ಧಕ ರಸ್ತೆ, 1ನೇ ಬ್ಲಾಕ್, ಶ್ರೀರಾಮಮಂದಿರ ಬಳಿ ಬಂದು ಎಡಗಡೆ ತಿರುವು ಪಡೆದು ನಂತರ ಸುಜಾತ ಚಿತ್ರಮಂದಿರದ ಮುಂದೆ ತಿರುವು ಪಡೆದು ಬಿನ್ನಿ ಮಿಲ್ ರಸ್ತೆ ನಂತರ ಮೈಸೂರು ರಸ್ತೆ, ಸಿಟಿಮಾರುಕಟ್ಟೆ ಮೂಲಕ ಮಾಮೂಲಿನಂತೆ ಸಂಚರಿಸುತ್ತಿರುವುದರಿಂದ ವೇಳೆ ವ್ಯರ್ಥವಾಗುತ್ತಿದೆ.  77 ಬಿ ಮಾರ್ಗದಲ್ಲಿಯೇ ಸಂಚರಿಸಲಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.