ಸಮಯ ಹೊಂದಾಣಿಕೆ ಮುಖ್ಯ

ದುಡಿಯುವ ಮಹಿಳೆಯರು ಬೆಳಿಗ್ಗೆ ಏಳುವ ಸಮಯ ಮತ್ತು ಕೆಲಸಕ್ಕೆ ಹೊರಡುವ ಸಮಯದಲ್ಲಿ ಹೊಂದಾಣಿಕೆ ಇದ್ದರೆ ಕೆಲಸ ಸರಾಗವಾಗುತ್ತದೆ.
ನಾನು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ. ಮನೆಯಿಂದ ಶಾಲೆಗೆ 15 ಕಿ.ಮೀ. ದೂರವಿದೆ. ಇಬ್ಬರು ಮಕ್ಕಳು 7.30ಕ್ಕೆ ಶಾಲೆಗೆ ಹೊರಡುತ್ತಾರೆ. ನಾನು 7.45ಕ್ಕೆ ಮನೆ ಬಿಡಬೇಕು. ಇಷ್ಟು ಹೊತ್ತಿಗೆ ಅಡುಗೆ ಮಧ್ಯಾಹ್ನಕ್ಕೆ ಬುತ್ತಿ ತಯಾರಿ ಎಲ್ಲವನ್ನೂ ಮಾಡುತ್ತೇನೆ.
ನಿತ್ಯ ಬೆಳಿಗ್ಗೆ 4.45ಕ್ಕೆ ಏಳುತ್ತೇನೆ. 5.10ಕ್ಕೆ ಕುಕ್ಕರ್ ಕೂಗಿಸುವ ಕೆಲಸ ಮುಗಿಸುತ್ತೇನೆ. ಅಪಾರ್ಟ್ಮೆಂಟ್ ಆಗಿರುವ ಕಾರಣ ಬೇರೆಯವರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಮಿಕ್ಸಿ ಹಾಕುವ ಕೆಲಸವನ್ನು ಬೆಳಿಗ್ಗೆ 5.50ರ ನಂತರ ಮಾಡುತ್ತೇನೆ.
ಬೆಳಿಗ್ಗೆ ಅನ್ನ–ಸಾಂಬಾರ್ ಊಟ ಮಾಡುವುದನ್ನು ಎಲ್ಲರೂ ರೂಢಿಸಿಕೊಂಡಿದ್ದೇವೆ. ಹಾಗಾಗಿ ಬೆಳಿಗ್ಗೆ ತಿಂಡಿ ಮಾಡುವುದಿಲ್ಲ. ರಜಾ ದಿನ ಮಾತ್ರ ದೋಸೆ, ಚಪಾತಿ ಮಾಡುತ್ತೇನೆ. ಉದ್ದಿನ ದೋಸೆ, ಇಡ್ಲಿ ಹಿಟ್ಟು ತಯಾರಿಸುವಾಗ ಮೂರು ದಿನಕ್ಕೆ ಬೇಕಾಗುವಷ್ಟು ಸಿದ್ಧಪಡಿಸಿಟ್ಟುಕೊಳ್ಳುತ್ತೇನೆ.
ಮನೆ ಕ್ಲೀನಿಂಗ್, ಬಟ್ಟೆ ತೊಳೆಯುವ ಕೆಲಸಗಳನ್ನು ಸಂಜೆಗೆ ಇಟ್ಟುಕೊಳ್ಳುತ್ತೇನೆ. 7.30ರ ವೇಳೆಗೆ ವಾಷಿಂಗ್ ಮಷೀನ್ಗೆ ಬಟ್ಟೆ ಹಾಕುತ್ತೇನೆ. ಮಲಗುವ ಮುನ್ನ ಬಾಲ್ಕನಿಯಲ್ಲಿ ಒಣಗಲು ಹರವಿ ಹಾಕುತ್ತೇನೆ. ಅಂದಿನ ಕೆಲಸ ಅಂದೇ ಮುಗಿಸುತ್ತೇನೆ.
ಅಡುಗೆ ತಯಾರಿಗೆ ಬೇಕಿರುವ ಸಿದ್ಧತೆ ಮೊದಲೇ ಮಾಡಿಕೊಂಡಿರುತ್ತೇನೆ. ತೆಂಗಿನಕಾಯಿ ತುರಿದು ಫ್ರಿಡ್ಜ್ನಲ್ಲಿ ಇಟ್ಟಿರುತ್ತೇನೆ. ಈ ರೀತಿ ಸಮಯ ಹೊಂದಾಣಿಕೆ ಮಾಡಿಕೊಂಡರೆ ನಮ್ಮ ದಿನಚರಿಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.