ಶುಕ್ರವಾರ, ನವೆಂಬರ್ 15, 2019
27 °C

ಸಮರ್ಪಕ ಕುಡಿಯುವ ನೀರಿಗೆ ಆಗ್ರಹ

Published:
Updated:

ಗಜೇಂದ್ರಗಡ: ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಭಾರತ ಪ್ರಜಾಸತಾತ್ಮಕ ಯುವಜನ ನಗರ ಸಮಿತಿ ನಗರದ ನಾಗರಿಕ ೊಂದಿಗೆ ಬುಧವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಡಿವೈಎಫ್‌ಐ ಮುಖಂಡರಾದ ಬಸವರಾಜ ಶಿಲವಂತರ, ಮಾರುತಿ ಚಿಟಗಿ, ಪೀರು ರಾಠೋಡ್ ಮಾತನಾಡಿ, ನಾಗರಿಕರ ಜಲದಾಹ ನೀಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಕೊಳವೆ ಬಾವಿಗಳು ನಿರಂತರ ಬರದ ಪ್ರಖರತೆಯ ಕೆಂಗಣ್ಣಿಗೆ ಗುರಿಯಾಗಿ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವ ಕಳೆದುಕೊಂಡಿವೆ.  ಪರಿಣಾಮ ಗಜೇಂದ್ರಗಡದ ನಾಗರಿಕರಿಗೆ ಅಗತ್ಯವಿರುವ ಜೀವಜಲವನ್ನು ಪೂರೈಸಲು ಪುರಸಭೆಗೆ  ಕಷ್ಟ ಸಾಧ್ಯವಾಗಿದೆ.

ಪುರಸಭೆಯ ಅಸಮರ್ಪಕ ನೀರು ಪೂರೈಕೆಯಿಂದ ಕಂಗೆಟ್ಟಿರುವ ನಾಗರಿಕರು ಜಲಕ್ಷಾಮದ ಭೀತಿಯಿಂದ ತಪ್ಪಿಸಿ ಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಬೇಕಾದ ಅನಿವಾರ್ಯತೆ ನಾಗರಿಕರಿಗೆ ಎದುರಾಗಿದೆ ಎಂದರು.ಗಜೇಂದ್ರಗಡದ ನಾಗರಿಕಗೆ ಜಲದಾಹ ನೀಗಿಸುವಲ್ಲಿ ನೆರವಾಗಿದ್ದ 40 ಕೊಳವೆ ಬಾವಿಗಳಲ್ಲಿ 13 ಕೊಳವೆ ಬಾವಿಗಳು ಬರಡಾಗಿವೆ. 27 ಕೊಳವೆ ಬಾವಿಗಳಲ್ಲಿ ಅಲ್ಪ ಪ್ರಮಾಣದ ಜಲವಿದೆ. ಸದ್ಯ ಕೊಳವೆ ಬಾವಿಗಳಲ್ಲಿನ ಅಳಿದುಳಿದ ಜಲವನ್ನು ನಗರದ ಹೊರವಲಯದಲ್ಲಿನ ಜಲ ಸಂಗ್ರಹಾಗಾರದಲ್ಲಿ ಸಂಗ್ರಹಿಸಿ ಏಳು ದಿನಕ್ಕೊಮ್ಮೆ ನಗರಕ್ಕೆ ನೀರು ಪೂರೈಸಲಾಗುತ್ತಿದೆ. ವಿದ್ಯುತ್ ಸಮಸ್ಯೆಯಿಂದಾಗಿ ಏಳು ದಿನಕ್ಕೊಮ್ಮೆ ದೊರೆಯುವ ನೀರು ಸಹ ಅವಶ್ಯಕತೆಗೆ ತಕ್ಕ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಹೀಗಾಗಿ ನಾಗರಿಕಗೆ ಸಮರ್ಪಕ ನೀರು ಒದಗಿಸುವ ನಿಟ್ಟಿನಲ್ಲಿ ಪುರಸಭೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸದ್ಯ ಗಜೇಂದ್ರಗಡ ನಗರದಲ್ಲಿ ತಲೆದೋರಿರುವ ಜಲಕ್ಷಾಮವನ್ನು ಬಂಡವಾಳವಾಗಿಸಿಕೊಂಡ ಕೆಲ ಖಾಸಗಿ ಶುದ್ಧ ಕುಡಿಯುವ ನೀರು ಘಟಕಗಳ ಮಾಲೀಕರು ದುಪ್ಪಟ್ಟು ಬೆಲೆಗೆ ನೀರನ್ನು ಮಾರಾಟ ಮಾಡುತ್ತಿದ್ದಾರೆ. ಖಾಸಗಿ ನೀರು ಘಟಕಗಳ ಮಾಲೀಕರ ಇಂಥ ಬೆಲೆ ಏರಿಕೆ ಪದ್ಧತಿಯಿಂದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.  ಖಾಸಗಿ ನೀರು ಮಾರಾಟ ಘಟಕಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಶ್ರೀಸಾಮಾನ್ಯರ ಕೈಗೆಟುಕುವಂತ ದರದಲ್ಲಿ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.ಪುರಸಭೆ ಸದಸ್ಯ ಎಂ.ಎಸ್.ಹಡಪದ, ಪೈಯಾಜ್ ತೊಟದ, ಮೈಬು ಹವಾಲ್ದಾರ್, ಬಾಲು ರಾಠೋಡ್,ಮರ್ತುಜಾ ಡಾಲಾಯತ್, ಮಮತಾಜ್ ಘನತೂರಿ,ಸೈದಾಬಿ ಡಾಲಾಯತ್, ಮುಕ್ತುಂಬಿ ಹಿರೇಹಾಳ, ಬಸವರಾಜ ತಿರಕೋಜಿ, ಅಂಬರೇಶ ಕೊಟಗಿ, ರಾಜು ಬಾಬೋಜಿ, ನಾಗಪ್ಪ ಅರಗಂಜಿ, ಬುಡ್ಡಾ ತಾಳಿಕೋಟಿ,ದಾವಲ್ ಆನಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)