ಶನಿವಾರ, ಜೂನ್ 12, 2021
24 °C

ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನ್ವಿ: ಬೇಸಿಗೆಯಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ ನಾಯಕ ತಿಳಿಸಿದ್ದಾರೆ.ತುಂಗಭದ್ರಾ ನದಿ ಸಂಪೂರ್ಣವಾಗಿ ಬತ್ತಿರುವ ಕಾರಣ ಮಾನ್ವಿ ಪಟ್ಟಣಕ್ಕೆ ಕುಡಿಯುವ ನೀರಿನ ಅಭಾವವಾಗಿದೆ. ಕಾರಣ ಸ್ಥಳೀಯ ಪುರಸಭೆ ಕೊಳವೆಬಾವಿಗಳಿಂದ ಕುಡಿಯುವ ನೀರನ್ನು ಪೂರೈಸುತ್ತಿದೆ.  ಪಟ್ಟಣಕ್ಕೆ ನೀರು ಸರಬರಾಜು ಮಾಡುವ ರಬ್ಬಣಕಲ್ ಟ್ಯಾಂಕ್‌ಗೆ ಈಗ ಕೇವಲ 10 ಕೊಳವೆಬಾವಿಗಳಿಂದ ನೀರು ಲಭ್ಯವಿದ್ದು ಇದು ಸಾಕಾಗುವುದಿಲ್ಲ. ಕಾರಣ ಮೂರು ದಿನ್ನಕ್ಕೊಮ್ಮೆ ಶುದ್ಧ ಕುಡಿಯುವ ನೀರು ಪೂರೈಸುವ ನಿರಂತರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನೀರು ತಲುಪದ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಪಟ್ಟಣದ ಸಾರ್ವಜನಿಕ ಕೆರೆ ಸಂಪೂರ್ಣ ಬತ್ತಿ ಹೋಗಿದ್ದು, ಕೆರೆಯ ಮಧ್ಯಭಾಗದಲ್ಲಿರುವ ಎರಡು ಬಾವಿಗಳ ಹೂಳು ತೆಗೆಯಿಸಿ ಅಲ್ಲಿನ ನೀರಿನ ಮೂಲದಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು  ಪ್ರಯತ್ನಿಸಲಾಗುತ್ತಿದೆ ಎಂದು ಲಕ್ಷ್ಮೀದೇವಿ ನಾಯಕ ಹೇಳಿದ್ದಾರೆ.ಸಾರ್ವಜನಿಕರು ನೀರಿನ ತೊಂದರೆ ಅಥವಾ ಹೆಚ್ಚಿನ ಮಾಹಿತಿಗೆ ಅಧ್ಯಕ್ಷೆ (ಮೊ:9902100087), ಮುಖ್ಯಾಧಿಕಾರಿ (9972626577, ಎಂಜಿನಿಯರ್ (8095689666), ನಿಯಂತ್ರಣ ವಿಭಾಗ (99455440602) ಮೊಬೈಲ್ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಪ್ರಕಟಣೆ ಮೂಲಕ ಅವರು ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.