ಸಮರ್ಪಕ ಪಡಿತರ ವಿತರಣೆಗೆ ಆಗ್ರಹ

7

ಸಮರ್ಪಕ ಪಡಿತರ ವಿತರಣೆಗೆ ಆಗ್ರಹ

Published:
Updated:

ಇಂಡಿ: ಪಟ್ಟಣದ ವಾರ್ಡ್ ಸಂಖ್ಯೆ 1ರಲ್ಲಿ ಸರಕಾರದ ಪಡಿತರ ಧಾನ್ಯಗಳನ್ನು ಸರಿಯಾಗಿ ವಿತರಣೆ ಮಾಡುತ್ತಿಲ್ಲ. ಪಡಿತರ ಚೀಟಿಗಾರರಿಗೆ ನೀಡುವ ಆಹಾರ ಧಾನ್ಯ ಪೂರ್ಣ ಪ್ರಮಾಣದಲ್ಲಿ ನೀಡುತ್ತಿಲ್ಲ. ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸ್ದ್ದಿದು, ಮೊಬೈಲ್‌ನಲ್ಲಿ ಪಡಿತರ ಚೀಟಿ ಮಂಜೂರಿಯಾಗಿದೆ ಎಂದು ಸಂದೇಶ ಬಂದರೂ ಕೂಡಾ ಆಹಾರ ಇಲಾಖೆಯ ಅಧಿಕಾರಿಗಳು ಹೊಸ ಪಡಿತರ ಚೀಟಿಗಳನ್ನು ಹಂಚಿಕೆಮಾಡುತ್ತಿಲ್ಲ.

ಪೋಟೋ ತೆಗೆಸಿಕೊಂಡಿಲ್ಲ ಎಂಬ ನೆಪವೂಡ್ಡಿ ಪಡಿತರ ಆಹಾರ, ಸೀಮೆ ಎಣ್ಣೆ ಕೊಡುತ್ತಿಲ್ಲ ಎಂದು ಆರೋಪಿಸಿದ ಅವರು ಮೇಲಾಧಿಕಾರಿಗಳು ಈ ಕೂಡಲೇ ನಮ್ಮ ಸಮಸ್ಯಯನ್ನು ಬಗೆಹರಿಸಬೇಕೆಂದು ಆಗ್ರಹಿಸಿ, ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಹುಸೇನಭಾಷಾ ದರ್ಗಾದಿಂದ ಪ್ರಾರಂಭವಾಗಿ ಮಹಾವೀರ ಸರ್ಕಲ್, ಅಂಬೇಡ್ಕರ ಸರ್ಕಲ್ ಮತ್ತು ಬಸವೇಶ್ವರ ಸರ್ಕಲ್ ಮೂಲಕ ತಹಸೀಲ್ದಾರ ಕಚೇರಿ ತಲುಪಿತು. ಇಲ್ಲಿ ಕೆಲಕಾಲ ಸಭೆಯಾಗಿ ಮಾರ್ಪಟ್ಟು ಅಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಂ.ಬಿ.ಮಾಣಿಕ ಮಾತನಾಡಿ ವಾರ್ಡ ನಂಬರ 1 ರಲ್ಲಿಯ ಜನಸಾಮಾನ್ಯರಿಗೆ ವಿತರಣೆ ಮಾಡುತ್ತಿರುವ ಪಡಿತರ ಧಾನ್ಯಗಳನ್ನು ಸರಿಯಾಗಿ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ, ಇದರಿಂದ ಬಡ ಕುಟುಂಬಗಳಿಗೆ ತೊಂದರೆಯಾಗಿದೆ ಎಂದರು.ಪ್ರತಿಭಟನೆಯ ನೇತೃತ್ವವನ್ನು ಎಂ.ಬಿ. ಮಾಣಿಕ, ಶಕೀಲ್ ಮಾಶ್ಯಾಳ, ರಾಮ ಮಹಿಂದ್ರಕರ, ಸಲೀಂ ರೇವೂರಕರ, ಶಂಕರ ಗೋಡೆ, ಚವ್ಹಾಣ ಅಲ್ಲಾವುದ್ದೀನ್, ಬಾಬು ಚವ್ಹಾಣ, ರಫೀಕ್‌ಮಹಮ್ಮದ್‌ಅಲಿ, ಬೇಂದ್ರೆ, ಚಿದಾನಂದ ಕಟ್ಟೀಮನಿ, ಬಸವರಾಜ ಮಧುರಕರ, ಭೀಮ ಯಡ್ಡಲ್ಲಿ, ಭೀಮರಾಯ ಮಾದರ, ರಾಮ, ಬಳ್ಳಾರಿ, ಶಿವಕುಮಾರ ಭಜಂತ್ರಿ, ನೂಹಮ್ಮದ ಶೇಖ್, ಕರೀಂ ಮಾಶಾಳಕರ, ಇಕ್ಬಾಲ್, ಶಕೀಲ್ ಇಂಡೀಕರ, ಅಥಣಿಕರ, ಮುಲ್ಲಾ, ಜಾಲೀಂದ್ರನಾಥ ಮಧುರಕರ ವಹಿಸಿಕೊಂಡ್ದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry