ಭಾನುವಾರ, ಏಪ್ರಿಲ್ 18, 2021
29 °C

ಸಮಷ್ಟಿಪ್ರಜ್ಞೆಯಿಂದ ಸಾರ್ಥಕ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಆಲೋಚನೆಗಳು ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತಗೊಳ್ಳದೆ ಸಮಷ್ಟಿ ಸ್ವರೂಪದಲ್ಲಿದ್ದರೆ ಸಾರ್ಥಕ ಬದುಕು ನಮ್ಮದಾಗುತ್ತದೆ ಎಂದು ಪ್ರಾಚಾರ್ಯ ಹೇಮಂತ ಭೂತನಾಳ  ಹೇಳಿದರು.ಶನಿವಾರ ಇಲ್ಲಿನ ಪ್ರಥಮದರ್ಜೆ ಕಾಲೇಜಿನ  ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಮೊಬೈಲ್‌, ಟಿ.ವಿ ಮತ್ತಿತರೆ ಯಾಂತ್ರಿಕ ಉಪಕರಣಗಳು ಮನುಷ್ಯನನ್ನು ದಾರಿ ತಪ್ಪಿಸುತ್ತಿವೆ, ನಾಗರಿಕ ಸೌಲಭ್ಯ ಹೆಚ್ಚಾಗುತ್ತಿರುವುದರಿಂದ ಕೇವಲ ಎರಡು ದಶಕಗಳಲ್ಲಿ ಮಾನವ ಇಷ್ಟೊಂದು ಅಲಸ್ಯದಿಂದ ದೈಹಿಕ, ಮಾನಸಿಕ ದೌರ್ಬಲ್ಯಕ್ಕೀಡಾಗುತ್ತಿದ್ದಾನೆ. ಭವಿಷ್ಯದ ಬಗ್ಗೆ ಯೋಚಿಸಿದರೆ ಭಯವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಉಪನ್ಯಾಸ ನೀಡಿದ ಕೊಪ್ಪಳ ಪದವಿ ಕಾಲೇಜಿನ ಉಪನ್ಯಾಸಕಿ ಗಾಯತ್ರಿ ಭಾವಿಕಟ್ಟಿ, ವಿದ್ಯಾರ್ಥಿಗಳಲ್ಲಿ ಸಂಭ್ರಮ ಇರಬೇಕು.ಆದರೆ ಅದೇ ಬದುಕು ಎಂದು ತಿಳಿಯಬಾರದು. ಉನ್ನತ ಬದುಕು, ಚಲನಶೀಲತೆ, ಉತ್ಸಾಹ, ಜ್ಞಾನದಾಹ, ಶಿಸ್ತುಬದ್ಧ ಜೀವನವನ್ನು ಕೊನೆವರೆಗೂ ಉಳಿಸಿಕೊಂಡು ಹೋಗುವಂಥ ಜವಾಬ್ದಾರಿ ಹೊಂದಬೇಕು ಎಂದರು. ಅಸಮಾನತೆಯ ಪರಿಕಲ್ಪನೆಯನ್ನು ಹೊಡೆದೋಡಿಸುವ ಶಕ್ತಿ ~ಸ್ನೇಹ~ಕ್ಕಿದ್ದು ಬದುಕಿನಲ್ಲಿ ಅದನ್ನು ರೂಢಿ ಸಿಕೊಳ್ಳಬೇಕು ಎಂದು ಹೇಳಿದರು.ಪ್ರತಿಭಾವಂತ ವಿದ್ಯಾರ್ಥಿಗಳು, ಕ್ರೀಡೆ, ಕಲೆ, ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸತ್ಕರಿಸಲಾಯಿತು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಮೇಟಿ, ಪುರಸಭೆ ಅಧ್ಯಕ್ಷೆ ಮೋದಿನಬಿ ಮುಲ್ಲಾ, ಸದಸ್ಯೆ ತೋಟಮ್ಮ ಕಲಕಬಂಡಿ ವೇದಿಕೆಯಲ್ಲಿದ್ದರು. ಬಸವರಾಜ ಕಂಬಳಿ ಸ್ವಾಗತಿಸಿದರು. ಶರಣಪ್ಪ ತೆಗ್ಗಿಹಾಳ ನಿರೂಪಿಸಿದರು. ಲೋಹಿತ್‌ ನಾಯಕ್‌ ವರದಿ ನಂತರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.