ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿ

7

ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿ

Published:
Updated:

ಕೃಷ್ಣರಾಜಪುರ: ‘ಜನರು ಸಮಸ್ಯೆಗಳ ವಿರುದ್ಧ ದನಿ ಎತ್ತಿದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ. ನಿಟ್ಟಿನಲ್ಲಿ ಜೆಡಿಎಸ್‌ ಕಾರ್ಯಕರ್ತರು ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಸಲಹೆ ನೀಡಿದರು.ದೇವಸಂದ್ರ ಜೆಡಿಎಸ್‌ ಕಚೇರಿಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಬೆಂಗಳೂರು ಮಹಾನಗರ ವ್ಯಾಪ್ತಿ­ಯಲ್ಲಿ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.ಪದಾಧಿಕಾರಿಗಳಾಗಿ ತಾಯಣ್ಣ ರೆಡ್ಡಿ (ಉಪಾಧ್ಯಕ್ಷ), ಆನಂದ ರೆಡ್ಡಿ, ಬಾಲ­ಕೃಷ್ಣೇಗೌಡ  (ಪ್ರಧಾನ ಕಾರ್ಯದರ್ಶಿ) ಮುನಿವೆಂಕಟಪ್ಪ, ಶ್ರೀನಾಥ್‌, ಅಂತೋನಿ ಸೆಲ್ವಿ (ಸಂಘಟನಾ ಕಾರ್ಯದರ್ಶಿ) ನೇಮಕಗೊಂಡಿದ್ದಾರೆ. ಮುಖಂಡ ಪ್ರಕಾಶ್‌ ರೆಡ್ಡಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry