ಶುಕ್ರವಾರ, ನವೆಂಬರ್ 22, 2019
22 °C

ಸಮಸ್ಯೆಗೆ ಆಡಳಿತದ ಲೋಪ ಕಾರಣ: ಪ್ರಣವ್

Published:
Updated:

ನವದೆಹಲಿ (ಪಿಟಿಐ): ಉತ್ತಮ ಆಡಳಿತದ ಕೊರತೆಯಿಂದಾಗಿ ಸಮಾಜದಲ್ಲಿ ಗಂಭೀರ ಸಮಸ್ಯೆಗಳು ತಲೆ ದೋರಿದ್ದು, ನಾಗರಿಕರು ಭದ್ರತೆ  ಮತ್ತು ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.ಸಿಬಿಐ ಚಿನ್ನದ ಹಬ್ಬದ ಸಮಾರಂಭದಲ್ಲಿ ಮಾತನಾಡಿದ ಅವರು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭ್ರಷ್ಟಾಚಾರ ಬೆದರಿಕೆ ಒಡ್ಡುತ್ತಿದ್ದು, ದೇಶದಲ್ಲಿ  ಸಮಾನತೆ ನಿರ್ಮಾಣ ವಾಗಲು ಅಡ್ಡಿಯುಂಟು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)