ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ

7
ತಹಶೀಲ್ದಾರ್ ಸಿ.ಎನ್. ಜಗದೀಶ್

ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ

Published:
Updated:

ಮದ್ದೂರು:- ಅನುದಾನ ರಹಿತ ಶಾಲೆಗಳಿಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಮುಷ್ಕರ ನಡೆಸುತ್ತಿದ್ದ ಸಂದರ್ಭದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗುಣಮುಖರಾಗಿ ಹಿಂದಿರುಗಿದ  ತಾಲ್ಲೂಕಿನ ಹೆಮ್ಮನಹಳ್ಳಿಯ ಶಿಕ್ಷಕ ಎಚ್.ಕೆ. ಲೋಹಿತ್ ಅವರ ನಿವಾಸಕ್ಕೆ ಮಂಗಳವಾರ ತಹಶೀಲ್ದಾರ್ ಸಿ.ಎನ್. ಜಗದೀಶ್ ಭೇಟಿ ನೀಡಿ ಸಾಂತ್ವನ ಹೇಳಿದರು.ಶಿಕ್ಷಕ ಲೋಹಿತ್ ಅವರ ಆರೋಗ್ಯ ಸುಧಾರಣೆ ಕುರಿತು ವಿಚಾರಿಸಿದ ಅವರು,  ನಿಮ್ಮ ಸಮಸ್ಯೆ ಏನೇ ಇದ್ದರೂ ಶಾಂತಿಯುತ ಹೋರಾಟಕ್ಕೆ ಮುಂದಾಗಬೇಕೇ ಹೊರತು, ಆತ್ಮಹತ್ಯೆಯ ಯತ್ನ ಸರಿಯಲ್ಲ  ಎಂದು ಸಲಹೆ ನೀಡಿದರು.ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಕರ್ನಾಟಕ ರಕ್ಷಣಾ ವೇದಿಕೆ  ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ಮುಖಂಡರಾದ ಹೆಮ್ಮನಹಳ್ಳಿ ಹರೀಶ್, ಗ್ರಾಮಲೆಕ್ಕಿಗ ಪೂರ್ಣಚಂದ್ರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry