ಮಂಗಳವಾರ, ಜೂನ್ 22, 2021
22 °C

ಸಮಸ್ಯೆಗೆ ಜಲಮಂಡಳಿ ಸ್ಪಂದನ

ಜಲಮಂಡಳಿ ಪ್ರಕಟಣೆ Updated:

ಅಕ್ಷರ ಗಾತ್ರ : | |

ಫೆಬ್ರುವರಿ 11ರ ‘ಮೆಟ್ರೊ’ ಸಂಚಿಕೆಯ ಕುಂದು ಕೊರತೆ ವಿಭಾಗದಲ್ಲಿ ‘ಅಶುದ್ಧ ನೀರಿನ ಸಮಸ್ಯೆ ಬಗೆಹರಿಸಿ’ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಗೆ ಜಲಮಂಡಲಿ ಕ್ರಮ ಕೈಗೊಂಡಿದೆ. ಪತ್ರ ಪ್ರಕಟಗೊಂಡು ಎರಡೇ ದಿನದಲ್ಲಿ ಮಂಡಳಿ ಸ್ಪಂದಿಸಿ (ಫೆ.13)ಅಗತ್ಯ ದುರಸ್ತಿ ಕಾರ್ಯ ಜರುಗಿಸಿದೆ.ರಾಜರಾಜೇಶ್ವರಿ ನಗರ ಮೊದಲನೇ ಮುಖ್ಯರಸ್ತೆ, ಮತ್ತಿಕೆರೆ ಪ್ರಿಯದರ್ಶಿನಿ ಹೋಟೆಲ್ ಬಳಿ ಕುಡಿಯುವ ನೀರು ಕೊಳವೆ ಮಾರ್ಗ ಹಾದುಹೋಗಿದ್ದು

ಪಕ್ಕದಲ್ಲೇ ಇದ್ದ ಮಳೆ ನೀರು ಚರಂಡಿಯಲ್ಲಿ ಕೊಳಚೆ ನೀರು ಸಂಗ್ರಹವಾಗಿ ಸರಾಗವಾಗಿ ಹರಿಯದೇ ನಿಂತಿತ್ತು.ಇದರಿಂದಾಗಿ ನೀರು ಮಲಿನಗೊಂಡು ವಾರ್ಡ್ ೩೭ರ ಎಲ್.ಎನ್. ಕಾಲೋನಿ ಮೊದಲನೇ ಹಂತದ ೨, ೩ ಹಾಗೂ ೪ನೇ ತಿರುವುಗಳಲ್ಲಿ ಸಮಸ್ಯೆ ತಲೆದೋರಿತ್ತು. ಮಹಾನಗರ ಪಾಲಿಕೆ ಸಹಕಾರದೊಂದಿಗೆ ಮಳೆನೀರು ಚರಂಡಿಯ ಮಣ್ಣನ್ನು ತೆಗೆಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿರುವುದೇ ಅಲ್ಲದೆ, ಕುಡಿಯುವ ನೀರಿನ ಕೊಳವೆಗಳನ್ನು ಸಮರ್ಪಕವಾಗಿ ಜೋಡಣೆ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.