ಮಂಗಳವಾರ, ಏಪ್ರಿಲ್ 13, 2021
30 °C

ಸಮಸ್ಯೆ ಇತ್ಯರ್ಥಕ್ಕೆ ಹೋರಾಟ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಸಮಸ್ಯೆ ಇತ್ಯರ್ಥಕ್ಕೆ ಹೋರಾಟ ಅನಿವಾರ್ಯ ಎಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ ಮೆಂಡೋಳೆ ಅಭಿಪ್ರಾಯಪಟ್ಟರು.  ಪಟ್ಟಣದ ಭವಾನಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ವಾರ್ಷಿಕ ಮಹಾಸಭೆ ಉದ್ದೇಶಿಸಿ ಅವರು ಮಾತನಾಡಿದರು.ಕಮಿಷನ್ ಹೆಚ್ಚಳ ಮಾಡುವುದು, ಸಂಬಳ ಹೆಚ್ಚಿಸುವುದು, ತೂಕದಲ್ಲಿ ನ್ಯಾಯ ಒದಗಿಸುವುದು ಮೊದಲಾದ ಬೇಡಿಕೆಗಳನ್ನು ಬಗೆಹರಿಸುವಂತೆ ಕಳೆದ ಹಲವು ವರ್ಷಗಳಿಂದ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಈ ಸ್ಥಿತಿಯಲ್ಲಿ ಹಿಂದಿನಂತೆ ಮೃದು ಧೋರಣೆ ತಾಳದೇ ಹೋರಾಟ ಮಾರ್ಗ ಅನುಸರಿಸುವುದು ಅನಿವಾರ್ಯ ಎಂದು ಅವರು ಸಂಘದ ಸದಸ್ಯರಿಗೆ ತಿಳಿಸಿದರು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾನಾಜಿ ತೋರಣೆಕರ್ ಮಾತನಾಡಿ, ಸಮಸ್ಯೆ ಇತ್ಯರ್ಥಕ್ಕೆ ಸಂಘಟಿತ ಹೋರಾಟ ಒಂದೇ ಮಾರ್ಗ ಆಗಿದ್ದು, ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲ್ಲೂಕು ಅಧ್ಯಕ್ಷ ಹುಲೆಪ್ಪ ಠಾಕೂರ ಸಮಸ್ಯೆ ಇತ್ಯರ್ಥಕ್ಕಾಗಿ ಜಿಲ್ಲಾ ಹಾಗೂ ರಾಜ್ಯ ಸಮಿತಿಗೆ ಹುಮನಾಬಾದ್ ತಾಲ್ಲೂಕು ಘಟಕೆ ಎಲ್ಲ ರೀತಿ ಸಹಾಯ ಸಹಕಾರ ನೀಡಲು ಸದಾ ಸಿದ್ಧವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಬಸವಕಲ್ಯಾಣ ತಾಲ್ಲೂಕು ಅಧ್ಯಕ್ಷ ಘಂಟೆಪ್ಪ ಬಿರಾದಾರ, ಬೀದರ್ ತಾಲ್ಲೂಕು ಅಧ್ಯಕ್ಷ ಭರತ್, ಭಾಲ್ಕಿ ತಾಲ್ಲೂಕು ಉಪಾಧ್ಯಕ್ಷ ವೆಂಕಟರಾವ ಪಾಟೀಲ, ಔರಾದ್ ಉಪಾಧ್ಯಕ್ಷ ಬಸವರಾಜ ಕಸ್ತೂರೆ, ಕಾರ್ಯಾಧ್ಯಕ್ಷ ಸುಧಾಕರ ರಾಜಗೀರಾ, ಖಜಾಂಚಿ ಚಂದ್ರಕಾಂತ ಕೋಟೆ, ಹುಮನಾಬಾದ್ ತಾಲ್ಲೂಕು ಘಟಕ ಉಪಾಧ್ಯಕ್ಷ, ಕಾರ್ಯಾಧ್ಯಕ್ಷ ಶಿವರಾಯ್ ಮೋಳಕೇರಾ, ಹಿರಿಯರಾದ ದತ್ತಪ್ಪ ಜಾಜಿ, ಕಾಶಿನಾಥ ಗಿರಮಲ್, ಪ್ರಕಾಶ ದೇವಣಿ, ಬಾಬುರಾವ ಮಾಣಿಕನಗರ್, ಅಮೃತ ಪಾಟೀಲ ಸಿಂಧನಕೇರಾ, ಮಲ್ಲಿಕಾರ್ಜುನ ಸಿಂಧನಕೇರಾ, ಬಸವರಾಜ ಸಿಂಧನಕೇರಾ, ಪ್ರಕಾಶ ಕನಕಟ್ಟಾ, ಆನಂದ ಕನಕಟ್ಟಾ, ಹುಲೆಪ್ಪ ಮುಸ್ತಾಪೂರ, ಕಲ್ಲಪ್ಪ ಗಡವಂತಿ, ಸಂಜೀವ ಪಾಟೀಲ ಚಿತ್ತಕೋಟಾ ಮೊದಲಾದವರು ಇದ್ದರು.ತಾಲ್ಲೂಕು ಘಟಕ ಖಜಾಂಚಿ ಶರಣಪ್ಪ ಕಣಜಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರಣ್ಣ ಮೇರ್ಗೆ ನಿರೂಪಿಸಿದರು. ಬಾಬುರಾವ ಸುಲ್ತಾನಾಬಾದ್ ವಾರ್ಷಿಕ ವರದಿ ಓದಿದರು. ಉಪಾಧ್ಯಕ್ಷ ಪೋನುಸಿಂಗ್ ಕಾರಭಾರಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.