ಸಮಸ್ಯೆ ನಡುವೆಯೂ ಉತ್ತಮ ಫಲಿತಾಂಶ: ಶಾಸಕ

7

ಸಮಸ್ಯೆ ನಡುವೆಯೂ ಉತ್ತಮ ಫಲಿತಾಂಶ: ಶಾಸಕ

Published:
Updated:

ಕೊಳ್ಳೇಗಾಲ: `ಸೌಲಭ್ಯ ಕೊರತೆಯ ನಡುವೆಯೂ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇದನ್ನು ಮುಂದಿನ ದಿನಗಳಲ್ಲಿಯೂ ಉಳಿಸಿಕೊಂಡು ಹೋಗಬೇಕು~ ಎಂದು ಶಾಸಕ ಆರ್. ನರೇಂದ್ರ ತಿಳಿಸಿದರು.ಬೂದಬಾಳು ಗ್ರಾಮದಲ್ಲಿ ಭಾನುವಾರದಿಂದ ಬಂಡಳ್ಳಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಮುಂದಿನ ವರ್ಷದಲ್ಲಿ ಮೂಲಭೂತ ಸೌಲಭ್ಯಗಳು ದೊರಕಿಸುವ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಶಾಸಕರು, ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಭಿರಾರ್ಥಿಗಳು ಗ್ರಾಮದ ಜನತೆಯ ಮೆಚ್ಚುಗೆ ಗಳಿಸುವಲ್ಲಿ ಶಿಸ್ತು ಸಂಯಮದಿಂದ ಶಿಬಿರ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಕಿವಿಮಾತು ನುಡಿದರು.

ವಿದ್ಯಾರ್ಥಿಗಳು ಶಿಬಿರದಲ್ಲಿ ಸ್ನೇಹ ಮತ್ತು ಸೇವಾ ಗುಃಣವನ್ನು ಮೈಗೂಡಿಸಿಕೊಂಡು ಗ್ರಾಮೀಣ ಜನತೆಯ ಮತ್ತು ಪರಿಸರದ ಅರಿವನ್ನು ಪಡೆಯಬೇಕು ಎಂದು ಹೇಳಿದರು.ಗ್ರಾಮೀಣ ಜನತೆಗೆ ಅತ್ಯಗತ್ಯವಾಗಿ ಬೇಕಿರುವ ನೈರ್ಮಲ್ಯ, ಸ್ವಚ್ಚತೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ವೇಳೆಯನ್ನು ಕಳೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದರು.ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಹೊಂದಿ ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗ ಯಶಸ್ಸು ಸಾಧ್ಯ ಶಾಸಕರು ಶಿಕ್ಷಣಕ್ಕೆ ಹೆಚ್ಚು ಒತ್ತುನೀಡುತ್ತಿದ್ದು ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಜಿ.ಪಂ. ಸದಸ್ಯ ಡಿ. ದೇವರಾಜು ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಬಂಡಳ್ಳಿ ಸ್ವತಂತ್ರ್ಯ ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲ ನಾಗಸುಂದರ ವಹಿಸಿದ್ದರು. ಬೂದಬಾಳು ವೆಂಕಟರಮಣಸ್ವಾಮಿ ದೇವಾಲಯದ ಧರ್ಮಾಧಿಕಾರಿ ವೆಂಕಟಕೃಷ್ಣಸ್ವಾಮಿ ಅಯ್ಯರ್ ದಿವ್ಯಸಾನಿದ್ಯ ವಹಿಸಿದ್ದರು. ಉಪನ್ಯಾಸಕ ನರೇಂದ್ರನಾಥ್, ಗ್ರಾ.ಪಂ. ಸದಸ್ಯ ಮಹದೇವ, ಪುಟ್ಟರಾಜಮ್ಮ, ಬಸವರಾಜು, ಬೂದಬಾಳು ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಸಾವಿತ್ರಿ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry