ಮಂಗಳವಾರ, ಮಾರ್ಚ್ 9, 2021
31 °C
ಚಿಕ್ಕಮಗಳೂರು: ಜನಸ್ಪಂದನಕ್ಕೆ ಹರಿದು ಬಂದ ಅರ್ಜಿಗಳ ಮಹಾಪೂರ

ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಗಡುವು

ಚಿಕ್ಕಮಗಳೂರು: ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗಿರಿಜನ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಹೆಚ್ಚು ಸಂಬಂಧಿಸಿದ ಕುಂದು ಕೊರತೆಯ ಅರ್ಜಿಗಳನ್ನು ಹಿಡಿದು ಕೊಂಡು ನಾಗರಿಕರು ಮಂಗಳವಾರ ಇಲ್ಲಿ ನಡೆದ ಜಿಲ್ಲಾಮಟ್ಟದ ಜನಸ್ಪಂದನಾ ಸಭೆಯಲ್ಲಿ ಪರಿಹಾರ ಪಡೆದುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರ ಬಳಿಗೆ ಬಂದಿದ್ದರು.‘ಕಳೆದ 40 ವರ್ಷಗಳಿಂದ 4 ಎಕರೆ ಭೂಮಿ ಸಾಗುವಳಿ ಮಾಡುತ್ತಿದ್ದರೂ ಕಾಯಂ ಸಾಗುವಳಿ ಚೀಟಿ ಕೊಟ್ಟಿಲ್ಲ, ಖಾತೆ ಮಾಡಿಕೊಟ್ಟಿಲ್ಲ’ವೆಂದು ರೈತ ಮಹಿಳೆ ಹಲಸುಮನೆಯ ಈರಮ್ಮ ಗೋಳು ತೋಡಿಕೊಂಡರೆ, ಕಳೆದ 30 ವರ್ಷದಿಂದ ಭೂಮಿ ಮಂಜೂರು ಮಾಡಿಕೊಟ್ಟಿಲ್ಲವೆಂದು ಮಾಜಿ ಸೈನಿಕ ರೊಬ್ಬರು ಅಲವತ್ತುಕೊಂಡರು.ಮೂಡಿ ಗೆರೆ ತಹಶೀಲ್ದಾರ್‌ ಮತ್ತು ಚಿಕ್ಕಮಗ ಳೂರು ತಹಶೀಲ್ದಾರ್‌ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವ ಡಾ.ಜಿ. ಪರಮೇಶ್ವರ್‌, ಬಡವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಭೂಮಿ ವಂಚಿತರು ಹಾಗೂ ಸೈನಿಕರ ಸಮಸ್ಯೆಗಳಿಗೆ ಏಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಮೊದಲು ಇಂತಹವರ ಅರ್ಜಿಗಳನ್ನು ಬಗೆಹರಿಸಬೇಕು ಎಂದು ತಾಕೀತು ಮಾಡಿದರು.ದೇಶ ಗಡಿ ಕಾಯ್ದ ಯಾವುದೇ ಸೈನಿಕರಿಗೆ ಇಂತಹ ಸ್ಥಿತಿ ಬರಬಾರದು. ಅವರು ಪ್ರಾಣ ಒತ್ತೆ ಇಟ್ಟು ದೇಶ ರಕ್ಷಣೆ ಮಾಡಿರುತ್ತಾರೆ. ಮಾಜಿ ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಅವರ ಕೆಲಸವನ್ನು 24 ತಾಸಿನೊಳಗೆ ಮಾಡಿಕೊ ಡಬೇಕು ಎಂದು ತಹಶೀಲ್ದಾರ್‌ ಶಿವಣ್ಣಗೆ ತಾಕೀತು ಮಾಡಿದರು.ಜಿಲ್ಲಾಧಿಕಾರಿಯೇ ಖುದ್ದಾಗಿ ಪ್ರತಿ ತಾಲ್ಲೂಕಿಗೆ ಸಂಬಂಧಿಸಿದ ತಹಶೀಲ್ದಾರ್‌, ಡಿಡಿಎಲ್‌ಆರ್‌ ಹಾಗೂ ಎಡಿಎಲ್‌ಆರ್‌ ಗಳೊಂದಿಗೆ ಭೇಟಿ ನೀಡಿ ಫಾರಂ ನಂ 53 ಅರ್ಜಿಗಳ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಸಚಿವರು ಭರವಸೆ ನೀಡಿದರು.‘ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿ 3 ತಿಂಗಳಾಗಿದೆ. ಆದರೆ, ಆಶಾಕಾರ್ಯ ಕರ್ತೆಯಾಗಿ ಸರ್ಕಾರದಿಂದ ಗೌರವಧನ ಪಡೆಯುತ್ತಿದ್ದೇನೆ ಎನ್ನುವ ಕಾರಣಕ್ಕೆ ಅರ್ಜಿ ತಿರಸ್ಕರಿಸಿದ್ದಾರೆ’ ಎಂದು ಸಿ.ಬಿ. ಗಾಯತ್ರಿ ಎನ್ನುವವರು ಸಚಿವರ ಗಮನಕ್ಕೆ ತಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಸಚಿವರು ‘ಯಾಕೆ ನಿಮ್ಮ ತಕರಾರು? ಆಶಾಕಾರ್ಯ ಕರ್ತೆಯರಿಗೆ ಸರ್ಕಾರ ವೇತನ ನೀಡು ತ್ತಿಲ್ಲ.

ಅವರು ಸಮಾಜ ಸೇವಕರು ಎನ್ನುವ ಕಾರಣಕ್ಕೆ ಗೌರವ ಸಂಭಾವನೆ ನೀಡುತ್ತಿದೆಯಷ್ಟೆ. ಆಶಾಕಾರ್ಯಕರ್ತ ರಿಗೆ ವಿಧವಾ ವೇತನ ನೀಡಬಾರದೆಂದು ಸರ್ಕಾರದ ಆದೇಶವಿದೆಯಾ?’ ಎಂದು ತರಾಟೆಗೆ ತೆಗೆದುಕೊಂಡರು. 2 ದಿನಗಳಲ್ಲಿ ಅವರಿಗೆ ವಿಧವಾ ವೇತನ ಮಂಜೂರು ಮಾಡಬೇಕು. ಇದು ಇಡೀ ಜಿಲ್ಲೆಗೆ ಅನ್ವಯಿಸುತ್ತದೆ ಎಂದು ಆದೇಶ ನೀಡಿದರು.ಶಿಶಿಲಾಬೈರಾಪುರ ನಡುವೆ ಕಚ್ಚಾ ರಸ್ತೆ ನಿರ್ಮಿಸಲು ₹17 ಲಕ್ಷ ಮಂಜೂರಾ ಗಿದ್ದು, 3 ತಿಂಗಳು ಕಳೆದರೂ ಲೋಕೋ ಪಯೋಗಿ ಇಲಾಖೆ ರಸ್ತೆ ನಿರ್ಮಾಣಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ವೆಂದು ಸುಮಿತ್ರೇಗೌಡ ದೂರು ಅರ್ಜಿ ಸಲ್ಲಿಸಿದರು. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ತರಾಟೆಗೆ ತೆಗೆದುಕೊಂಡ ಸಚಿವರು, ತಕ್ಷಣ ವಿಸ್ತೃತ ಯೋಜನಾ ವರದಿ ತಯಾರಿಸಿ,  ಒಂದು ತಿಂಗಳೊಳಗೆ ಕೆಲಸ ಮಾಡಿಸಬೇಕು ಎಂದು ಸೂಚನೆ ನೀಡಿದರು.ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಸ್ವಯಂಪ್ರೇರಿತವಾಗಿ ಹೊರ ಬರಲು ಸಿದ್ಧವಿರುವ ಕುಟುಂಬ ಗಳಿಗೆ 2007–08ರಲ್ಲಿ ಮೌಲ್ಯಮಾಪನ ಮಾಡಿ ಘೋಷಿಸಿದ್ದ ಪುನರ್ವಸತಿ ಪ್ಯಾಕೇಜ್‌ ಪರಿಹಾರವನ್ನು ಕೊಡದಿರುವ ಬಗ್ಗೆಯೂ ಕುದುರೆಮುಖ ನಿವಾಸಿಗಳು ಸಚಿವರ ಗಮನಕ್ಕೆ ತಂದರು. ರೈತರಿಗೆ ಸ್ವಂತ ಉಪಯೋಗಕ್ಕೆ ಮರ ಕಡಿತಲೆ ಮಾಡಲು ಅನುಮತಿ ನೀಡದೆ ಸತಾಯಿ ಸುತ್ತಿರುವ ಬಗ್ಗೆಯೂ ರೈತ ಕೃಷ್ಣೇಗೌಡ ಮತ್ತು ರೈತ ಸಂಘದ ಮುಖಂಡ ದುಗ್ಗಪ್ಪಗೌಡ ಅವರು ದೂರು ನೀಡಿದರು. ಇಂತಹ ಸಮಸ್ಯೆಗಳನ್ನು ತ್ವರಿತವಾಗಿ ಒಂದು ವಾರದೊಳಗೆ ಪರಿಹರಿಸಬೇಕು ಎಂದು ಸಚಿವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ನಗರದಲ್ಲಿ 20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರೂ ಕೆಲಸ ಕಾಯಂ ಗೊಳಿಸಿಲ್ಲವೆಂದು ಸಫಾಯಿ ಕರ್ಮಚಾರಿ ಯೊಬ್ಬರು ಅಳಲು ತೋಡಿಕೊಂಡರು. ನಗರಸಭೆ ಅಧಿಕಾರಿಗಳ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ತಕ್ಷಣ ಕಾಯಂಗೊಳಿಸುವಂತೆ ಸೂಚಿಸಿದರು.ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಆಗಿರು ವುದನ್ನು ಸಂಘಸಂಸ್ಥೆಗಳ ಮುಖಂಡರು ಮತ್ತು ಶಾಸಕರಾದ ಸಿ.ಟಿ.ರವಿ, ಡಿ.ಎನ್‌. ಜೀವರಾಜ್‌, ಬಿ.ಬಿ.ನಿಂಗಯ್ಯ ಹಾಗೂ ಮೋಟಮ್ಮ ಅವರು ಸಚಿವರ ಗಮನಕ್ಕೆ ತಂದರು. ಖಾಲಿ ಇರುವ ಹುದ್ದೆಗಳನ್ನು ಪಟ್ಟಿ ಮಾಡಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.ಜನರ ಕುಂದುಕೊರತೆ ಅರ್ಜಿಗಳನ್ನು ಬೆಳಿಗ್ಗೆಯಿಂದ ಸಂಜೆವರೆಗೂ ಶಾಂತಚಿ ತ್ತವಾಗಿ ಆಲಿಸಿದ ಸಚಿವರು, ಕಾಲಮಿತಿ ಯಲ್ಲಿ ಬಗೆಹರಿಸಿಕೊಡಲು ಗುಡುವು ನೀಡಿದರು. ಸುಳ್ಳು, ಸಬೂಬು ಹೇಳಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಬೇಕಾ ದರೆ ಇನ್ನಷ್ಟು ಸಮಯ ತೆಗೆದುಕೊಳ್ಳಿ. ಆದರೆ, ತೆಗೆದುಕೊಂಡ ಸಮಯದಲ್ಲಿ ಜನರ ಕೆಲಸ ಮಾಡಿಕೊಡಬೇಕು. ಇಲ್ಲದಿ ದ್ದರೆ ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿದರು.ಶಾಸಕ ಬಿ.ಬಿ.ನಿಂಗಯ್ಯ, ಜಿಲ್ಲಾ ಉಸ್ತುವಾರಿ ಸಚಿವರು ಜನಸ್ಪಂದನಾ ಸಭೆ ನಡೆಸಿ, ಜಡ್ಡುಗಟ್ಟಿದ್ದ ಆಡಳಿತ ವ್ಯವಸ್ಥೆಗೆ ಸಾಣೆ ಹಿಡಿಯುವ ಕೆಲಸ ಮಾಡಿದ್ದಾರೆ. ಬಹಳಷ್ಟು ವರ್ಷಗಳಿಂದ ಪರಿಹಾರ ಕಾಣದಿದ್ದ ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಿದೆ. ಆಡಳಿತ ಕಚೇರಿಗಳು ವಸೂಲಾತಿ ಕೇಂದ್ರಗಳೆಂಬ ಭಾವನೆ ಜನರಿಗೆ ಬಂದಿರುವುದನ್ನು ಹೋಗಲಾ ಡಿಸುವ ಪ್ರಯತ್ನ ಸರ್ಕಾರದಿಂದ ಆಗಬೇಕಿದೆ ಎಂದರು.ಶಾಸಕ ಡಿ.ಎನ್‌.ಜೀವರಾಜ್‌ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜನಸ್ಪಂದನಾ ಸಭೆ ನಡೆಸುವಂತೆ ಮತ್ತು ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲೂ ಜನಸ್ಪಂದನಾ ಸಭೆ ನಡೆಸುವಂತೆ ಸಚಿವರಿಗೆ ಮನವಿ ಮಾಡಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ, ತೆಂಗುನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕಡೂರು ನಂಜಪ್ಪ, ಜಿ.ಪಂ. ಉಪಾಧ್ಯಕ್ಷ ಎಸ್.ಎನ್‌.ರಾಮಸ್ವಾಮಿ, ನಗರಸಭೆ ಅಧ್ಯಕ್ಷ ಎಂ.ಆರ್‌.ದೇವರಾಜಶೆಟ್ಟಿ, ಸಿಡಿಎ ಅಧ್ಯಕ್ಷ ಡಿ.ಎಸ್‌.ಚಂದ್ರೇಗೌಡ, ಜಿಲ್ಲಾಧಿಕಾರಿ ಜಿ.ಸತ್ಯವತಿ, ಜಿ.ಪಂ. ಸಿಇಒ ಡಾ.ರಾಗಪ್ರಿಯಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಾ ಮಲೈ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.