ಭಾನುವಾರ, ಮೇ 16, 2021
22 °C

ಸಮಸ್ಯೆ: ಪ್ರತಿಭಟನೆಯೇ ಮದ್ದಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ 108 ಸಿಬ್ಬಂದಿ ವರ್ಷದಲ್ಲಿ 5-10 ದಿನಗಳ ಕಾಲ ಪ್ರತಿಭಟನೆ ನಡೆಸುವುದು ಸರಿಯಲ್ಲ. ಮಾತುಕತೆ ಮೂಲಕ ಯಾವುದೇ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಪ್ರತಿಭಟನೆಯೇ ಮದ್ದಲ್ಲ~ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಕಿವಿಮಾತು ಹೇಳಿದರು.ಮಲ್ಲೇಶ್ವರಂ ವಯಾಲಿಕಾವಲ್ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ `ಸ್ಪೂರ್ತಿ ಸ್ಪಂದನ~, `108~ ವಾರ್ಷಿಕೋತ್ಸವ ಹಾಗೂ ಉತ್ತಮ ಸೇವೆ ಸಲ್ಲಿಸಿದ 108 ಸಿಬ್ಬಂದಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.`108 ಸಿಬ್ಬಂದಿ 500ಕ್ಕೂ ಅಧಿಕ ಮಂದಿಯ ರಕ್ಷಣೆ ಮಾಡಿದ್ದಾರೆ~ ಎಂದು ಅವರು ಶ್ಲಾಘಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ, ಆಯುಷ್ ಸೇವೆಗಳ ಆಯುಕ್ತ ಬಿ.ಎಸ್. ರಾಮಪ್ರಸಾದ್ ಮಾತನಾಡಿ, `108 ಸೇವೆಗೆ ಸಾರ್ವಜನಿಕರಿಂದ ಈ ವರೆಗೆ ಯಾವುದೇ ಟೀಕೆ ಬಂದಿಲ್ಲ~ ಎಂದು ಹೇಳಿದರು.ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ನಿರ್ದೇಶಕ ಎಸ್. ಸೆಲ್ವಕುಮಾರ್ ಮಾತನಾಡಿ, `2-3 ಮೂರು ವರ್ಷಗಳಲ್ಲಿ ಸಾಂಸ್ಥಿಕ ಹೆರಿಗೆ ಪ್ರಮಾಣ ಶೇ 65ರಿಂದ 97ಕ್ಕೆ ಏರಿದೆ. 108 ವಾಹನದಲ್ಲೇ 12 ಸಾವಿರ ಹೆರಿಗೆಗಳು ಆಗಿವೆ. ಆದರೂ ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ತಾಯಿ, ಶಿಶು ಮರಣ ಪ್ರಮಾಣ ಜಾಸ್ತಿ ಇದೆ. ಇದರ ನಿಯಂತ್ರಣಕ್ಕೆ ಆಸ್ಪತ್ರೆ ಆವರಣದಲ್ಲಿ ಮೂಲ ಸೌಕರ್ಯ ವೃದ್ಧಿ, ಸುರಕ್ಷಿತ ವಾತಾವರಣ ನಿರ್ಮಿಸಲಾಗುತ್ತಿದೆ~ ಎಂದರು.ಜಿ.ವಿ.ಕೆ. ಇ.ಎಂ. ಆರ್.ಐ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಿ.ವಿ. ಬದ್ರಿನಾಥ್, `ಕಳೆದ 3 ವರ್ಷಗಳಲ್ಲಿ 2.80 ಕೋಟಿ ಕರೆಗಳನ್ನು ಸ್ವೀಕರಿಸಲಾಗಿದೆ. 14 ಲಕ್ಷ ತುರ್ತು ಕರೆಗಳನ್ನು ನಿರ್ವಹಣೆ ಮಾಡಲಾಗಿದೆ~ ಎಂದರು.ಕೃತಜ್ಞತೆ ಸ್ಮರಿಸಿಕೊಂಡ ಸಿಬ್ಬಂದಿ

`ಅಂದು ಸಂಜೆ ಕೆಲಸ ಮುಗಿಸಿ ಮನೆಗೆ ಹೊರಡಲು ಸಿದ್ಧತೆ ನಡೆಸಿದ್ದೆ. ಮನೆ ಜಗಳ ವಿಕೋಪಕ್ಕೆ ತಿರುಗಿ ಒಬ್ಬನ ಕಣ್ಣಿನ ಗುಡ್ಡೆ ಹೊರಬಂದಿತ್ತು ಎಂಬ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. ಈಗ ಮೊದಲಿನಂತೆ ಆಗಿದ್ದಾರೆ. ಪದೇ ಪದೇ ಕರೆ ಮಾಡಿ ಧನ್ಯವಾದ ಹೇಳುತ್ತಿದ್ದಾರೆ~ ಎಂದು ಬೆಂಗಳೂರು ನಗರದ ಗೊಲ್ಲಳ್ಳಿಯ 108 ಸೇವೆ ಸಿಬ್ಬಂದಿ ಎಸ್.ಎಂ. ಗುರುರಾಜ್ ಅನಿಸಿಕೆ ಹಂಚಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.