ಮಂಗಳವಾರ, ಮೇ 24, 2022
30 °C

ಸಮಸ್ಯೆ ಸುಳಿಯಲ್ಲಿ ಅಗ್ನಿಶಾಮಕ ಠಾಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ಬೆಂಕಿ ಆಕಸ್ಮಿಕಗಳು ಸಂಭವಿಸಿದಾಗ ರಕ್ಷಣಾ ಕಾರ್ಯ ಕೈಗೊಳ್ಳಲು ಅಗ್ನಿಶಾಮಕ ವಾಹನ ತುರ್ತಾಗಿ ಧಾವಿಸಬೇಕಾದುದು ಅಗತ್ಯ. ಆದರೆ, ಪಟ್ಟಣದ ಮಟ್ಟಿಗೆ ಅಗ್ನಿಶಾಮಕ ವಾಹನಗಳು ತುರ್ತಾಗಿ ಹೋಗುವುದೇ ಕಷ್ಟವಾಗಿದೆ. ಪಟ್ಟಣದಲ್ಲಿ ಠಾಣೆಯು ಇರುವ ಸ್ಥಳ ಹಲವು ಸಮಸ್ಯೆಗಳಿಂದ ಆವೃತ್ತವಾಗಿದೆ. ವಾಹನವನ್ನು ತ್ವರಿತ ಗತಿಯಲ್ಲಿ ಸ್ಥಳದಿಂದ ತೆಗೆದುಕೊಂಡು ಹೋಗುವುದಕ್ಕೆ ಚಾಲಕ ಇನ್ನಿಲ್ಲದ ಕಷ್ಟ ಪಡಬೇಕಾಗಿದೆ.ಪಟ್ಟಣದಲ್ಲಿ 1998ರಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭವಾಗಿ ಮೊದಲು ಪಟ್ಟಣದ ಪ್ರವಾಸಿ ಮಂದಿರದ ಬಳಿ ಇದ್ದು, ನಂತರ 2000ನೇ ಇಸವಿಯಲ್ಲಿ ಎಪಿಎಂಸಿ ಆವರಣಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿತು. ವರ್ಷಗಳು ಕಳೆದರೂ ಸ್ವಂತ ಸ್ಥಳ ಸಿಗಲಿಲ್ಲ. ಹಾಲಿ ಇರುವ ಸ್ಥಳಕ್ಕೆ ಹೋಗಲು ಉತ್ತಮವಾದ ರಸ್ತೆ ಇಲ್ಲ, ಬೀದಿ ದೀಪಗಳಿಲ್ಲ, ನೀರು ತುಂಬಿಸಲು ಯಾವುದೇ ಸೌಲಭ್ಯ ಗಳಿಲ್ಲ, ಸಿಬ್ಬಂದಿಗೆ ಕುಡಿ ಯುವ ನೀರಿನ ಸೌಲಭ್ಯವಿಲ್ಲ. ಸಿಬ್ಬಂದಿಗಳ ಕೊರತೆಯೂ ಇದ್ದು ಪ್ರತಿಯೊಂದಕ್ಕೆ ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಮಾಜಿ ಸಚಿವರಾಗಿದ್ದ ಬಿ.ಸೋಮ ಶೇಖರ್ ಅವರ ಪ್ರಯತ್ನದ ಫಲವಾಗಿ ಆರಂಭಗೊಂಡ ಠಾಣೆಗೆ ಇಂದೂ ಸ್ವಂತ ಕಟ್ಟಡದ ಭಾಗ್ಯವಿಲ್ಲ. ವಾಹನಗಳಿಗೆ ನೀರು ತುಂಬಿಸಿ ಕೊಳ್ಳಲು ಬೋರ್‌ವೆಲ್ ಇದ್ದರೂ ಪ್ರಯೋ ಜನಕ್ಕೆ ಬರುತ್ತಿಲ್ಲ. ಬೀದಿ ದೀಪವಿಲ್ಲದೆ ಹಾವುಗಳು ಕಾಣಿಸಿಕೊಂಡು ಸಿಬ್ಬಂದಿ ರಾತ್ರಿ ವೇಳೆ ಭಯಬಿದ್ದಿರುವುದು ಉಂಟು. ಮಾಜಿ ಸಚಿವರಾದ ನರೇಂದ ್ರಸ್ವಾಮಿ ಅವರ ಅವಧಿಯಲ್ಲಿ ಸುಲ್ತಾನ್ ರಸ್ತೆಯಲ್ಲಿ ಸುಮಾರು ಎರಡೂವರೆ ಎಕರೆ ಜಮೀನನ್ನು ಠಾಣೆಗೆ ಮತ್ತು ವಸತಿ ಗೃಹಕ್ಕೆ ಗುರುತಿಸಿದ್ದು ಅದು ಸಹ ನೆನೆಗುದಿಗೆ ಬಿದ್ದಿದೆ.ವಾಹನ ಹೋಗಬೇಕಾದ ರಸ್ತೆ ಸಂಪೂರ್ಣ ಕಿರಿದಾಗಿದ್ದು ಅಲ್ಲಲ್ಲಿ ದೊಡ್ಡ ಗುಂಡಿ ಬಿದ್ದು ವೇಗವಾಗಿ ಹೋಗಲು ಸಾಧ್ಯವಿಲ್ಲ. ಅವಘಡ ಸಂದರ್ಭದಲ್ಲಿ ವಾಹನ ತಡವಾಗಿ ಹೋದಾಗ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆಯೂ ನಡೆದಿದೆ. ಸರ್ಕಾರ ತುರ್ತು ಗಮನಹರಿಸಲು ನಾಗರಿಕರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.