`ಸಮಾಜಅಭಿವೃದ್ಧಿಗೆ ಮಹಿಳೆಯ ಕೊಡುಗೆ'

7

`ಸಮಾಜಅಭಿವೃದ್ಧಿಗೆ ಮಹಿಳೆಯ ಕೊಡುಗೆ'

Published:
Updated:

ಹನುಮಸಾಗರ:  ಸಮಾಜ ಸುಧಾರಣೆಯಲ್ಲಿ ಪುರುಷರಿಗಿಂತಲೂ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ತರುವುದರಲ್ಲಿ ಪುರುಷರಷ್ಟೆ ಮಹಿಳೆಯರ ಜವಾಬ್ದಾರಿ ಇದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ.ಭಾನುವಾರ ಇಲ್ಲಿನ ಕರಿಸಿದ್ದೇಶ್ವರ ಮಠದ ಬಸವ ಮಂಟಪದ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಮಹಿಳಾ ಸಮಾವೇಶ ಮತ್ತು ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ, ದೇವೇಂದ್ರಪ್ಪ ಬಳೂಟಗಿ, ಸೋಮಶೇಖರ ವೈಜಾಪೂರ, ಎಂ.ಡಿ.ಅಸ್ಲಂ ಇತರರು ಮಾತನಾಡಿದರು.ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ  ಶಕುಂತಲಮ್ಮ ಹಿರೇಮಠ, ನಿರ್ಮಲಾ ಕರಡಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಕವಿತಾ ಪಾಟೀಲ, ಸುವರ್ಣ ಹೊರಪೇಟೆ, ಕಲ್ಯಾಣಮ್ಮ ಹಿರೇಮಠ, ಬಸಮ್ಮ ವಸ್ತ್ರದ, ದೊಡ್ಡಯ್ಯ ಗದಡಕಿ, ಶಿವಶಂಕರಗೌಡ ಪಾಟೀಲ, ತಾ.ಪಂ. ಸದಸ್ಯ ಹನುಮಂತಪ್ಪ ರಾಠೋಡ, ಕರಿಸಿದ್ದಪ್ಪ ಅಗಸಿಮುಂದಿನ, ಪರಶುರಾಮಪ್ಪ ನಂದ್ಯಾಳ, ಮಹಾಂತೇಶ ಅಗಸಿಮುಂದಿನ, ಸುವರ್ಣ ಹೊರಪೇಟೆ, ರೇಣುಕಾಬಾಯಿ ತುಳಸಿಕಟ್ಟಿ, ಮೀನಾಕ್ಷಮ್ಮ ನಿಡಗುಂದಿ, ಕಸ್ತೂರಿಬಾಯಿ ದಾನಿ, ಸರೋಜಾಬಾಯಿ ಕಾಟ್ವಾ, ಗಂಗಮ್ಮ ಕೊಪ್ಪಳ, ಪ್ರತಿಭಾ ಎಮ್ಮಿ ಸೇರಿದಂತೆ ಅನೇಕ ಮಹಿಳಾ ಮುಖಂಡರು ವೇದಿಕೆಲ್ಲಿದ್ದರು.ಹತ್ತಾರು ಸ್ತ್ರೀಶಕ್ತಿ ಸಂಘಗಳ, ಮಹಿಳಾ ಸಂಘಗಳ ಸದಸ್ಯರು, ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ರೇಣುಕಾ ಪುರದ ಸ್ವಾಗತಿಸಿದರು. ಗದಿಗೆಪ್ಪ ಬ್ಯಾಳಿ ಕಾರ್ಯಕ್ರಮ ನಿರೂಪಿಸಿದರು. ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಮಹಾಂತೇಶ ಅಗಸಿಮುಂದಿನ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry