ಸಮಾಜಕ್ಕೆ ಕೊಡುಗೆ ನೀಡಿ: ಚನ್ನಿಗಪ್ಪ ಸಲಹೆ

7

ಸಮಾಜಕ್ಕೆ ಕೊಡುಗೆ ನೀಡಿ: ಚನ್ನಿಗಪ್ಪ ಸಲಹೆ

Published:
Updated:

ಭಾರತೀನಗರ: ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ವಿನಿಯೋಗಿಸಬೇಕು ಎಂದು ಮಾಜಿ ಸಚಿವ ಚನ್ನಿಗಪ್ಪ ಸಲಹೆ ನೀಡಿದರು.ಸಮೀಪದ ಚಿಕ್ಕಅರಸಿನಕೆರೆ ಕಾಲಭೈರವೇಶ್ವರ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಚನ್ನಮ್ಮ ಹೆಸರಿನಲ್ಲಿ ನಿರ್ಮಾಣ ಮಾಡಿರುವ ಅತಿಥಿ ಗೃಹವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು.

ಮಾಜಿ ಸಂಸದ ಡಾ.ಜಿ.ಮಾದೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಯುವಕರು ಅಡ್ಡದಾರಿ ತುಳಿಯುತ್ತಿದ್ದಾರೆ. ಎಲ್ಲೆಡೆ ಕೊಲೆ, ಸುಲಿಗೆ, ಅತ್ಯಾಚಾರಗಳು ಎಗ್ಗಿಲ್ಲದೇ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರು. ಶಾಸಕಿ ಕಲ್ಪನಾ ಸಿದ್ದರಾಜು, ಕಾಂಗ್ರೆಸ್ ಮುಖಂಡ ಮಧು ಜಿ.ಮಾದೇಗೌಡ, ಕಾಲಭೈರವೇಶ್ವರ ಟ್ರಸ್ಟನ ಅಧ್ಯಕ್ಷ ಜೋಗಿಗೌಡ, ಯುಜಮಾನ್ ಶಿವಲಿಂಗೇಗೌಡ, ರಘು, ಅಜ್ಜಹಳ್ಳಿ ರಾಮಕೃಷ್ಣ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry