ಸಮಾಜಘಾತುಕ ಶಕ್ತಿಗಳ ವಿರುದ್ಧ ಎಚ್ಚರ

7

ಸಮಾಜಘಾತುಕ ಶಕ್ತಿಗಳ ವಿರುದ್ಧ ಎಚ್ಚರ

Published:
Updated:

ಮಂಡ್ಯ: ದೇಶದ ಭದ್ರತೆಗಾಗಿ ಹೋರಾಡಿ ಕರ್ತವ್ಯದ ಅವಧಿಯಲ್ಲಿ ಪ್ರಾಣ ತೆತ್ತ ಸಿಬ್ಬಂದಿ ಸೇವೆ ಅನನ್ಯ. ದೇಶದ ಒಳಗೆ, ಹೊರಗೆ ಶಾಂತಿ ಕದಲುತ್ತಿರುವ ಸಂದರ್ಭದಲ್ಲಿ ಸಮಾಜದ ರಕ್ಷಣೆಗಾಗಿ ಇರುವ ಸಿಬ್ಬಂದಿ ಸೇವೆ ಗಣನೀಯ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್  ಅಭಿಪ್ರಾಯಪಟ್ಟರು.ಶುಕ್ರವಾರ ನಗರ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ  ಮಾತನಾಡಿದರು. ದೇಶದೊಳಗಿನ ಶತ್ರುಗಳು ಕಾನೂನು ಉಲ್ಲಂಘಿಸಿ , ಶಾಂತಿ ಕದಡಲು ಯತ್ನಿಸಲಿದ್ದು, ಇಂಥವರ ಬಗೆಗೆ ಜಾಗೃತಿ ಅಗತ್ಯ ಎಂದರು.ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಅವರು, ಲಡಕ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುವಾಗ 1959ರ ಅ. 21ರಂದು ಮೃತಪಟ್ಟ ಕರಣ್‌ಸಿಂಗ್ ಅವರು ಚೀನಾ ಸೈನಿಕರ ಸಂಚಿಗೆ ಬಲಿಯಾದ ನೆನಪಿನಲ್ಲಿ ಹುತಾತ್ಮರ ದಿನ ಆಯೋಜಿಸಲಾಗುತ್ತಿದೆ ಎಂದರು.

 

ಕರ್ನಾಟಕದ 10 ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಪ್ರಸಕ್ತ ವರ್ಷ ಸೇವೆಯಲ್ಲಿ ಇದ್ದಾಗಲೇ ಮೃತಪಟ್ಟ  ಪೊಲೀಸರಿಗೆ ಗೌರವ ಸಲ್ಲಿಸಲಾಯಿತು.  ಎಸ್.ಬಿ.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ನಿರ್ಮಲಾ ಚಿಕ್ಕೇಗೌಡ, ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ರಾಜಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಚಿದಂಬರ್, ಇಲಾಖೆ ಹಿರಿಯ ಅಧಿಕಾರಿಗಳು ಇರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry