ಶುಕ್ರವಾರ, ಜೂನ್ 25, 2021
29 °C

ಸಮಾಜದಲ್ಲಿ ಧಾರ್ಮಿಕ ಭಾವನೆಗಳ ಕೊರತೆ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಮಾನವ ಸನ್ಮಾರ್ಗದಲ್ಲಿ ನಡೆಯಲು ಹಾಗೂ ಉತ್ತಮ ಚಿಂತನೆಗಳನ್ನು ಬೆಳೆಸಿಕೊಳ್ಳಲು ಧಾರ್ಮಿಕ ಕೇಂದ್ರಗಳು ಅಗತ್ಯ ಎಂದು ಹೊಸದುರ್ಗ ಸೇವಾಶ್ರಮದ ಕಾಂತಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.ಪಟ್ಟಣದ ಬಸವಣ್ಣ ದೇವರ ಮಠದಲ್ಲಿ ಏರ್ಪಡಿಸಿದ್ದ ಸಾಯಿ ಸದ್ಗುರು ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಧಾರ್ಮಿಕ ಭಾವನೆಗಳು ಕಡಿಮೆಯಾಗಿ ಜನ ದುಶ್ಚಟ ಮತ್ತು ತಪ್ಪು ದಾರಿ ಹಿಡಿಯುತ್ತಿದ್ದಾರೆ ಎಂದು ವಿಷಾದಿಸಿದರು.ಶಾಸಕ ಎಂ.ವಿ.ನಾಗರಾಜು  ಟ್ರಸ್ಟ್ ಉದ್ಘಾಟಿಸಿದರು.  ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿ, ವಿನಾಯಕ ಸೇವಾ ಟ್ರಸ್ಟ್‌ನ ರಾಮಣ್ಣ, ನರಸಿಂಹಮೂರ್ತಿ, ಸಾಯಿ ಟ್ರಸ್ಟ್‌ನ ಅಧ್ಯಕ್ಷ ಪ್ರಭಾಕರ ಶರ್ಮ, ಪ್ರಾಂಶುಪಾಲ ಎಚ್.ಬಿ.ಪ್ರಕಾಶ್ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಟಿ.ಎಸ್.ಲಕ್ಷ್ಮೀಕಾಂತ ಸ್ವಾಗತಿಸಿ, ಸತ್ಯನಾರಾಯಣಶೆಟ್ಟಿ ವಂದಿಸಿದರು.ಇದೇ ಸಂದರ್ಭದಲ್ಲಿ ಗಣಪತಿ, ನವಗ್ರಹ ಹಾಗೂ ದತ್ತಾತ್ರೇಯರ ಆರಾಧನೆ ಮತ್ತು ಹೋಮ, ನಂಜುಂಡ ಮತ್ತು ಲಲಿತಾ ಸತ್ಸಂಗ ತಂಡದವರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.