ಶುಕ್ರವಾರ, ಅಕ್ಟೋಬರ್ 18, 2019
27 °C

ಸಮಾಜದಲ್ಲಿ ಮೌಲ್ಯಗಳ ಕುಸಿತ

Published:
Updated:

ಧಾರವಾಡ: ಪ್ರಸ್ತುತ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಮಾನಸಿಕ ದುರ್ಬಲತೆಯಿಂದ ಮನುಷ್ಯ ಒತ್ತಡಕ್ಕೆ ಒಳಗಾಗಿದ್ದಾನೆ. ಮನುಷ್ಯನ ಆಸೆ, ಆಕಾಂಕ್ಷೆಗಳು ಅವನನ್ನು ಇರಲು ಬಿಡುತ್ತಿಲ್ಲ ಎಂದು ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಶಿರೂರ ನುಡಿದರು.ಇಲ್ಲಿಯ ಕಲಾಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪವಿತ್ರ ತಪಸ್ಯಾಕುಂಡದಲ್ಲಿ ಪರಮಶಾಂತಿಯ ಅನುಭೂತಿ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಇಂಥ ಸಮಯದಲ್ಲಿ ಮನುಷ್ಯರಿಗೆ ಅಧ್ಯಾತ್ಮಿಕ ಬೆಳಕು ಅತ್ಯವಶ್ಯಕ. ಮೌಲ್ಯ ಜಾಗೃತಿ ಮಾಡಿ ಶಕ್ತಿಶಾಲಿಯನ್ನಾಗಿ ಮಾಡುವ ಕಾರ್ಯ ವನ್ನು ಈಶ್ವರೀಯ ವಿಶ್ವವಿದ್ಯಾಲಯ ಮಾಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.ಧಾರವಾಡದ ಈಶ್ವರೀಯ ವಿ.ವಿ. ಸಂಚಾಲಕಿ ಬ್ರಹ್ಮಕುಮಾರಿ ಜಯಂತಿ ಮಾತನಾಡಿ, `ಪರಿಸ್ಥಿತಿಗಳನ್ನು ದೂರ ಬಾರದು. ಸ್ವಯಂ ಮಾನಸಿಕ ಸ್ಥಿತಿಯನ್ನು ಶಕ್ತಿಶಾಲಿ ಮಾಡಿಕೊಳ್ಳು ವುದೇ ಸಮಸ್ಯೆಗಳಿಗೆ ಪರಿಹಾರವಾಗಿದೆ. ಮಾನಸಿಕವಾಗಿ ನಕಾರಾತ್ಮಕ ಆಲೋಚ ನೆಗಳಿಂದ ಶರೀರ ಮತ್ತು ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ.

 

ಮನಸ್ಸಿಗೆ ಆಹಾರವೇ ಆಲೋಚನೆ. ಆಧ್ಯಾತ್ಮಿಕ ಜ್ಞಾನದ ಸತ್ಯವಾದ ರಹಸ್ಯ ಅರಿವಾದಷ್ಟು ಮಾನವನಲ್ಲಿ ಸಕಾರಾತ್ಮಕ ಆಲೋಚನೆಗಳು, ಸಕಾರಾತ್ಮಕ ದೃಷ್ಟಿಕೋನ ಬರಲು ಪ್ರಾರಂಭ ವಾಗುತ್ತದೆ. ಪ್ರತಿ ಮನುಷ್ಯ ಹಾಗೂ ಪ್ರತಿ ಪರಿಸ್ಥಿತಿಗೆ ಸ್ಪಂದಿಸ ಬೇಕಾದರೆ ಯೋಗಯುಕ್ತ ಮನೋಸ್ಥಿತಿ ಬೇಕು~ ಎಂದು ಹೇಳಿದರು.

ವಿವಿಧ ಧರ್ಮಗಳ ಪ್ರತಿನಿಧಿಗಳಾದ ನೂರ್, ಜಾನ್ ಬಳ್ಳಾರಿ, ಅನಿತಾ ಪತ್ರಾವಳಿ ಸಮಾಜದ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದರು.ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಎಸ್.ರಾಜ ಶೇಖರ, ಕರ್ನಾಟಕ ವಿಕಾಸ ಬ್ಯಾಂಕ್‌ನ ಅಧ್ಯಕ್ಷ ಸಿ.ಸಾಂಬಸಿವ ರೆಡ್ಡಿ, ಎಸ್‌ಡಿಎಂಸಿ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಜಯಪ್ರಕಾಶ ಚೌಟಿ, ಉದ್ಯಮಿ ಯು.ಸೀತಾರಾಮಶೆಟ್ಟಿ, ವಕೀಲ ಕೆ.ಬಿ.ನಾವಲಗಿಮಠ, ಸಿಸ್ಟರ್ ಕ್ಲೇಟಾ ಭಾಗವಹಿಸಿದ್ದರು. ಬ್ರಹ್ಮ ಕುಮಾರಿಯರಾದ ಸ್ವಾತಿ, ಗಾಯತ್ರಿ, ಯೋಗಿನಿ ಕಾರ್ಯಕ್ರಮ ನೆರ ವೇರಿಸಿದರು.

Post Comments (+)